ಯಾರೂ ಕೂಡ ವಾಜಪೇಯಿ ಬಗ್ಗೆಯಾಗಲಿ, ನೆಹರು ಕುರಿತಾಗಲಿ ಮಾತಾಡಬಾರದು- ಮುರುಗೇಶ್ ನಿರಾಣಿ

ಯಾರೂ ಕೂಡ ವಾಜಪೇಯಿ ಬಗ್ಗೆಯಾಗಲಿ, ನೆಹರು ಕುರಿತಾಗಲಿ ಮಾತಾಡಬಾರದು- ಮುರುಗೇಶ್ ನಿರಾಣಿ

ಕಲಬುರಗಿ: ಮಾಜಿ ಪ್ರಧಾನಿ ನೆಹರು ವಿರುದ್ಧ ಟೀಕೆ ಮಾಡಿದ್ದ ಸಿ.ಟಿ ರವಿ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಮಾಜಿ ಸಚಿವ ಪ್ರಿಯಾಂಕ್​​​ ಖರ್ಗೆ ಮಾಜಿ ಪ್ರಧಾನಿ ವಾಜಪೇಯಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ವಾಜಪೇಯಿ ಹೆವಿ ಡ್ರಿಂಕರ್ ಅಂತೆ, ಸಂಜೆ ವೇಳೆಗೆ ಎರಡು ಗ್ಲಾಸ್​ ವಿಸ್ಕಿ ಇರಲೇ ಬೇಕಿತ್ತಂತೆ ಎಂದಿದ್ದರು ಪ್ರಿಯಾಂಕ್ ಖರ್ಗೆ. ಈ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ವಾಜಪೇಯಿ ಹೆವಿ ಡ್ರಿಂಕರ್ ಎಂಬ ಖರ್ಗೆ ಹೇಳಿಕೆಯನ್ನು ಸಚಿವ ಮುರುಗೇಶ್​​ ನಿರಾಣಿ ಖಂಡಿಸಿದ್ದಾರೆ.

ಈ ಸಂಬಂಧ ಮಾತಾಡಿದ ಸಚಿವ ಮುರುಗೇಶ್​​​ ನಿರಾಣಿ, ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತ ಶತ್ರು. ಭಾರತ ಅಷ್ಟೇ ಅಲ್ಲ , ಇಡೀ ಜಗತ್ತಿನ ಶ್ರೇಷ್ಠ ರಾಜಕಾರಣಿಗಳ ಸಾಲಿನಲ್ಲಿದ್ದವರು.‌ ಅಂತಹ ಮಹಾನ್​​ ನಾಯಕರ ಬಗ್ಗೆ ಮಾತಾಡೋದು ಸರಿಯಲ್ಲ ಎಂದು ಖರ್ಗೆಗೆ ತಿರುಗೇಟು ನೀಡಿದ್ದಾರೆ.

ಯಾರು ಕೂಡ ವಾಜಪೇಯಿ ಬಗ್ಗೆಯಾಗಲಿ, ನೆಹರು ಕುರಿತಾಗಲಿ ಮಾತಾಡಬಾರದು. ರಾಜಕಾರಣಗಳಿಗೆ ಮಾಡೋಕೆ ಸಾಕಷ್ಟು ಕೆಲಸಗಳಿವೆ. ಇದರ ಬಗ್ಗೆ ಗಮನ ಹರಿಸಬೇಕು. ದೇಶದ ಯಾವುದೇ ಮಹಾನ್​​​ ನಾಯಕರ ಬಗ್ಗೆ ಯಾರು ಮಾತಾಡಬಾರದು ಎಂದು ಸಿಟಿ ರವಿ ಮತ್ತು ಖರ್ಗೆ ಇಬ್ಬರಿಗೂ ಕಿವಿಮಾತು ಹೇಳಿದರು.

ಇದನ್ನೂ ಓದಿ: ‘ವಾಜಪೇಯಿ ಅವರು ಹೆವಿ ಡ್ರಿಂಕರ್ ಅಂತೆ..’ -ನಾಲಿಗೆ ಹರಿಬಿಟ್ಟ ಪ್ರಿಯಾಂಕ್ ಖರ್ಗೆ

Source: newsfirstlive.com Source link