ಟೋಕಿಯೋ ಕ್ರೀಡಾಪಟುಗಳ ಜೊತೆಗೆ ರಾಷ್ಟ್ರಪತಿ ಚಹಾ ಕೂಟ.. ಕೋಚ್​ಗಳೂ ಭಾಗಿ

ಟೋಕಿಯೋ ಕ್ರೀಡಾಪಟುಗಳ ಜೊತೆಗೆ ರಾಷ್ಟ್ರಪತಿ ಚಹಾ ಕೂಟ.. ಕೋಚ್​ಗಳೂ ಭಾಗಿ

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಟೀಕಿಯೊ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದು ಬಂದ ಕ್ರೀಡಾಪಟುಗಳ ಸಾಧನೆಯನ್ನ ಹಾಡಿ ಹೊಗಳಿದರು.

blank

ಇದಕ್ಕೂ ಮುನ್ನ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ರಾಷ್ಟ್ರಪತಿಗಳು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗಾಗಿ ಚಹಾಕೂಟ ಆಯೋಜಿಸಿದ್ದರು. ಈ ವೇಳೆ ರಾಮನಾಥ್ ಕೋವಿಂದ್ ಕ್ರೀಡಾಪಟುಗಳೊಂದಿಗೆ ಮಾತುಕತೆ ನಡೆಸಿದರು. ಪದಕಗಳನ್ನ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಕ್ಕೆ ಕ್ರೀಡಾಪಟುಗಳ ಬಗ್ಗೆ ದೇಶವು ಹೆಮ್ಮೆ ಪಡುತ್ತದೆ ಎಂದು ಹೇಳಿದರು.

blank

ಇನ್ನು ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಗೆ ಟ್ರೈನಿಂಗ್ ಕೊಟ್ಟ ಕೋಚ್​ಗಳು, ಉಪರಾಷ್ಟ್ರಪತಿ ರಾಮನಾಥ್ ಕೋವಿಂದ್, ಕ್ರೀಡಾ ಸಚಿವರು ಸೇರಿದಂತೆ ಕೇಂದ್ರದ ಹವು ಸಚಿವರು ಭಾಗಿಯಾಗಿದ್ದರು.

blank

Source: newsfirstlive.com Source link