ಮಂಗಳ ಗೌರಿ ಮದುವೆಗೆ ಅಮಂಗಳವಾಗಿ ಬಂದಿದ್ದಾಳೆ ರಾಜೇಶ್ವರಿ!

ಮಂಗಳ ಗೌರಿ ಮದುವೆಗೆ ಅಮಂಗಳವಾಗಿ ಬಂದಿದ್ದಾಳೆ ರಾಜೇಶ್ವರಿ!

ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಸಾಕಸ್ಟು ಟ್ವಿಸ್ಟ್​ಗಳು ತೆರೆದುಕೊಳ್ಳುತ್ತಿದ್ದು, ಸದ್ಯ ರಾಜೀವ್​ ಮತ್ತು ಸ್ನೇಹಾ ಮದುವೆ ಸಂಭ್ರಮಕ್ಕೆ ಬ್ರೆಕ್​ ಬಿದ್ದಿದೆ.

ಒಂದಕಡೆ ಮದುವೆಯಿಂದ ರಾಜೀವ್​ ಕಾಣೆಯಾಗಿದ್ದರೇ ಮತ್ತೊಂದು ಕಡೆ ಸೌಂದರ್ಯ ಮಂಗಳನ ತಾಯಿಯನ್ನು ಕಿಡ್ನಾಪ್​ ಮಾಡಿ ಮಂಗಳಾಗೆ ಮೆಂಟಲಿ ಟಾರ್ಚರ್​ ಮಾಡುತ್ತಿದ್ದಾಳೆ..ಇದೇ ಸಮಯಕ್ಕೆ ಮತ್ತೊಂದು ರೋಚಕ ತಿರುವು ಸೀರಿಯಲ್​ಗೆ ಸಿಕ್ಕಿದ್ದು ರಾಜೇಶ್ವರಿ ಎಂಟ್ರಿಯಾಗಿದ್ದಾಳೆ. ಅಷ್ಟಕ್ಕೂ ಯಾರು ಈ ರಾಜೇಶ್ವರಿ ಅಂದ್ರಾ. ಈ ಸ್ಟೋರಿ ಕಂಪ್ಲೀಟ್​ ಆಗಿ ನೋಡಿ..

ಮಂಗಳಾಗೆ ಸಂಕಷ್ಟಗಳು ಹೊಸದಲ್ಲ, ಸೌಂದರ್ಯಳ ಕಾಟಕ್ಕೆ ಮಂಗಳಾ ತಕ್ಕ ಉತ್ತರ ನೀಡುತ್ತಾ ಎದುರಾಗುವ ಸವಾಲುಗಳನ್ನ ನಿಭಾಯಿಸುತ್ತಿರುತ್ತಾಳೆ. ಈಗ ಮಂಗಳನ ವಿರೋಧಿಗಳ ಸಾಲಲ್ಲಿ ಮೊದಲಿಗೆ ನಿಂತಿದ್ದಾಳೆ ರಾಜೇಶ್ವರಿ. ಈ ಪಾತ್ರಕ್ಕೆ ಬಣ್ಣ ಹಚ್ಚಿದವರು ಮಾನಸಾ ಜೋಶಿ.

blank

ಮಾಹಾದೇವಿ ಸೀರಿಯಲ್​ನಲ್ಲಿ ದೇವಿ ಪಾತ್ರದ ಮೂಲಕ ಜನಮನ ಗೆದ್ದಿದ್ದ ಮಾನಸಾ..ಹೆಚ್ಚು ಪೌರಣಿಕ ಪಾತ್ರಗಳ ಮೂಲಕ ಪರಿಚಯವಾದವರು. ಇತ್ತೀಚಿಗೆ ಸಾಮಾಜಿಕ ಧಾರಾವಾಹಿಗಳತ್ತ ಮುಖ ಮಾಡಿದ್ದಾರೆ. ಮೂಲತಃ ನೃತ್ಯಗಾರ್ತಿಯಾಗಿರುವ ಮಾನಸಾ ಡ್ಯಾನ್ಸ್​ ಅಕಾಡೇಮಿಯಲ್ಲಿ ಬ್ಯುಸಿಯಾಗಿದ್ದರು. ಈಗ ಲಾಕ್​ಡೌನ್​ ಮುಗಿದೆ ಮೇಲೆ ಸೀರಿಯಲ್​ಗೆ ಕಮ್​ಬ್ಯಾಕ್​ ಮಾಡಿದ್ದಾರೆ.

ಇನ್ನೂ ಸೀರಿಯಲ್​ ಟ್ರಾಕ್​ ಒಂದ್​ ಸಾರಿ ನೋಡೊದಾದ್ರೆ.. ಈಗಾಗಲೇ ರಾಜೀವ್​ಗೆ ಹಳೆಯ ನೆನಪಿನ ಛಾಯೆ ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ರಾಜೀವ್​ ಮನೆಯವರ ಮುಂದೆ ಪ್ರಸ್ತಾಪಿಸಿ ನಂಗೆ ಈ ಮದುವೆ ಬೇಡ..ಈಗಾಗಲೇ ನಂಗೆ ಮದುವೆ ಆಗಿದೆ. ಆದ್ರೆ ಆ ಹುಡುಗಿ ಯಾರು ಅಂತಾ ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ. ಆದ್ರೇ ನನ್ನ ಸ್ನೇಹಿತ ಈ ಬಗ್ಗೆ ಅರ್ದಂಬರ್ದ ಸತ್ಯ ಹೇಳಿದ್ದು ನಂಗೆ ಪೂರ್ತಿ ನಿಜ ತಿಳಿಯುವವರೆಗೂ ಮದುವೆ ಬೇಡ ಅಂತಾನೆ. ಆಗ ಮಂಗಳಾ ಅಮ್ಮನನ್ನು ಕಾಪಾಡಲು ರಾಜೀವ್​ನ್ನು ಮದುವೆಗೆ ಒಪ್ಪಿಸುತ್ತಾಳೆ. ಆದ್ರೆ ಈಗ ರಾಜೀವ್​ ಕಾಣೆಯಾಗಿದ್ದಾರೆ.

ಒಟ್ನಲ್ಲಿ ಮಂಗಳಾನ ಬದುಕಿನಲ್ಲಿ ಮತ್ತೊಂದು ಟ್ವಿಸ್ಟ್​ ನೀಡುತ್ತಿರುವ ರಾಜೇಶ್ವರಿ ಪಾತ್ರದ ಮೂಲಕ ಮಾನಸಾ ಯಾವ ರೀತಿಯಾಗಿ ರಂಜಿಸಲಿದ್ದಾರೆ ಎಂಬುವುದನ್ನ ಕಾದು ನೋಡಬೇಕು.

Source: newsfirstlive.com Source link