‘ಸರ್ಕಾರಿ ಸಭೆಯಲ್ಲಿ ನಿಮ್ಮ ಪುತ್ರನದ್ದೇನು ಪಾತ್ರ ಬೊಮ್ಮಾಯಿ ಅವರೇ..?’ -ಕಾಲೆಳೆದ ಕಾಂಗ್ರೆಸ್

‘ಸರ್ಕಾರಿ ಸಭೆಯಲ್ಲಿ ನಿಮ್ಮ ಪುತ್ರನದ್ದೇನು ಪಾತ್ರ ಬೊಮ್ಮಾಯಿ ಅವರೇ..?’ -ಕಾಲೆಳೆದ ಕಾಂಗ್ರೆಸ್

ಬೆಂಗಳೂರು: ಉದ್ಯಮಿಗಳೊಂದಿಗಿನ ಸರ್ಕಾರಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜೊತೆಗೆ ಅವರ ಪುತ್ರ ಸಹ ಪಾಲ್ಗೊಂಡಿರುವ ಫೋಟೋವೊಂದನ್ನ ಟ್ವೀಟ್ ಮಾಡಿರುವ ಕಾಂಗ್ರೆಸ್ ಸಿಎಂ ಕಾಲೆಳೆದಿದೆ.

ಇದನ್ನೂ ಓದಿ: ನನ್ನ ಸ್ಪೀಡ್​​ಗೆ ತಕ್ಕಂತೆ ಕೆಲಸ ಮಾಡಿ, ಇಲ್ಲ ಜಾಗ ಖಾಲಿ ಮಾಡಿ; ಅಧಿಕಾರಿಗಳಿಗೆ ರೇಣುಕಾಚಾರ್ಯ ವಾರ್ನಿಂಗ್​​

ಫೋಟೋ ಜೊತೆಗೆ ಟ್ವೀಟ್ ಮಾಡಿರುವ ಕಾಂಗ್ರೆಸ್.. ಉದ್ಯಮಿಗಳೊಂದಿಗಿನ ಸರ್ಕಾರಿ ಸಭೆಯಲ್ಲಿ ನಿಮ್ಮ ಪುತ್ರನದ್ದೇನು ಪಾತ್ರ ಬಸವರಾಜ ಬೊಮ್ಮಾಯಿ ಅವರೇ..? ಕುಟುಂಬ ರಾಜಕಾರಣದ ಪರಂಪರೆ ಮುಂದುವರೆಸುವ ಇರಾದೆಯೇ..? ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರದಲ್ಲಿ ಬಿ.ವೈ. ವಿಜಯೇಂದ್ರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಿದ್ದರು, ಈಗ ತಾವೂ ಅದೇ ದಾರಿಯಲ್ಲಿ ಹೊರಟಿರುವಿರಾ..? ದೃತರಾಷ್ಟ್ರ ಪ್ರೇಮ ಒಳ್ಳೆಯದಲ್ಲ ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ: ಅರಮನೆ ನಗರಿಯಾಗಲಿದೆ ವಿಜಯೇಂದ್ರರ ನಿವಾಸ.. ಹಳೇ ಮೈಸೂರಿನ ಹಿಡಿತಕ್ಕಾಗಿ ಪ್ರವಾಸ!

Source: newsfirstlive.com Source link