ಕೆರಿಬಿಯನ್ ರಾಷ್ಟ್ರ ಹೈಟಿಯಲ್ಲಿ 7.2 ತೀವ್ರತೆಯ ಭಾರೀ ಭೂಕಂಪ.. ನೂರಾರು ಕಟ್ಟಡಗಳು ಕುಸಿತ

ಕೆರಿಬಿಯನ್ ರಾಷ್ಟ್ರ ಹೈಟಿಯಲ್ಲಿ 7.2 ತೀವ್ರತೆಯ ಭಾರೀ ಭೂಕಂಪ.. ನೂರಾರು ಕಟ್ಟಡಗಳು ಕುಸಿತ

ಕೆರಿಬಿಯನ್ ರಾಷ್ಟ್ರ ಹೈಟಿಯಲ್ಲಿ 7.2 ತೀವ್ರತೆಯ ಭಾರೀ ಭೂಕಂಪ ಸಂಭವಿಸಿದ್ದು ಸುನಾಮಿಯೂ ಏಳುವ ಭೀತಿ ಸೃಷ್ಟಿಯಾಗಿದೆ. ಅಲ್ಲಿನ ಸಮಯ ಬೆಳಗ್ಗೆ 8:30 ಕ್ಕೆ ಭೂಕಂಪ ಸಂಭವಿಸಿದ್ದು ಭೂಕಂಪದ ತೀವ್ರತೆಗೆ ನೂರಾರು ಕಟ್ಟಡಗಳು ಕುಸಿದುಬಿದ್ದಿವೆ.

ಕೆರಿಬಿಯನ್ ರಾಷ್ಟ್ರಗಳಾದ ಕ್ಯೂಬಾ, ಜಮೈಕಾದಲ್ಲೂ ಸಹ ಭೂಕಂಪದ ಅನುಭವವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಭೂಕಂಪದಿಂದಾದ ಅನಾಹುತ, ರಕ್ಷಣಾ ಕಾರ್ಯದ ಫೋಟೋಗಳು ಹರಿದಾಡುತ್ತಿವೆ. 19 ನೇ ಶತಮಾನದ ಕಟ್ಟಡ ಸೇಂಟ್ ಲೂಯಿಸ್ ಕಿಂಗ್ ಆಫ್ ಫ್ರಾನ್ಸ್​​ನ ಕೆಥೆಡ್ರೆಲ್ ಸಹ ಭೂಕಂಪದಿಂದ ಹಾನಿಗೊಂಡಿರುವುದಾಗಿ ವರದಿಯಾಗಿದೆ. ಸದ್ಯ ಈವರೆಗೆ ಯಾವುದೇ ಸಾವು ನೋವಿನ ಬಗ್ಗೆ ವರದಿಗಳಾಗಿಲ್ಲ.

2010 ರಲ್ಲಿ 7.0 ತೀವ್ರತೆಯ ಭೂಕಂಪ ಹೈಟಿಯಲ್ಲಿ ಸಂಭವಿಸಿತ್ತು. ದುರಂತವೆಂದರೆ 2,00,000 ಮಂದಿ ಊ ಭೂಕಂಪದಿಂದಾಗಿ ಸಾವನ್ನಪ್ಪಿದ್ದರು ಎಂದ ಅಂದಾಜಿಸಲಾಗಿತ್ತು.

blank

Source: newsfirstlive.com Source link