ವಾಜಪೇಯಿ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ, ಪ್ರಿಯಾಂಕ್ ಖರ್ಗೆ ಒಬ್ಬ ಬಚ್ಚಾ; ಎಂ.ಪಿ. ರೇಣುಕಾಚಾರ್ಯ

ವಾಜಪೇಯಿ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ, ಪ್ರಿಯಾಂಕ್ ಖರ್ಗೆ ಒಬ್ಬ ಬಚ್ಚಾ; ಎಂ.ಪಿ. ರೇಣುಕಾಚಾರ್ಯ

ದಾವಣಗೆರೆ: ಮಾಜಿ ಪ್ರಧಾನಿ ನೆಹರು ವಿರುದ್ಧ ಟೀಕೆ ಮಾಡಿ ಸಿ.ಟಿ ರವಿ ಕಾಂಗ್ರೆಸ್​ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬೆನ್ನಲ್ಲೇ ಸಿ.ಟಿ ರವಿ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಮಾಜಿ ಸಚಿವ ಪ್ರಿಯಾಂಕ್​​​ ಖರ್ಗೆ ಮಾಜಿ ಪ್ರಧಾನಿ ವಾಜಪೇಯಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ವಾಜಪೇಯಿ ಹೆವಿ ಡ್ರಿಂಕರ್ ಅಂತೆ, ಸಂಜೆಗೆ ವೇಳೆಗೆ ಎರಡು ಗ್ಲಾಸ್​ ವಿಸ್ಕಿ ಇರಲೇಬೇಕಿತ್ತಂತೆ ಎಂದಿದ್ದರು ಪ್ರಿಯಾಂಕ್ ಖರ್ಗೆ. ಪ್ರಿಯಾಂಕ್ ಖರ್ಗೆ ಈ ಹೇಳಿಕೆಗೀಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ವಾಜಪೇಯಿ ಹೆವಿ ಡ್ರಿಂಕರ್ ಎಂಬ ಖರ್ಗೆ ಹೇಳಿಕೆಗೆ ಸಚಿವ ಮುರುಗೇಶ್​​ ನಿರಾಣಿ ಬೆನ್ನಲ್ಲೇ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಖಂಡಿಸಿದ್ದಾರೆ.

ಇದನ್ನೂ ಓದಿ: ಯಾರೂ ಕೂಡ ವಾಜಪೇಯಿ ಬಗ್ಗೆಯಾಗಲಿ, ನೆಹರು ಕುರಿತಾಗಲಿ ಮಾತಾಡಬಾರದು- ಮುರುಗೇಶ್ ನಿರಾಣಿ

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವನೊಬ್ಬ ಬಚ್ಚಾ. ವಾಜಪೇಯಿ ಬಗ್ಗೆ ಮಾತನಾಡುವ ಯೋಗ್ಯತೆ ಅವನಿಗಿಲ್ಲ. ಅಧಿವೇಶನದಲ್ಲಿ ಅವನಿಗೆ ಯಾವ ರೀತಿ ಉತ್ತರ ಕೊಡಬೇಕು ಕೊಡ್ತೀನಿ ಎಂದು ಏಕವಚನದಲ್ಲೇ ದಾಳಿ ನಡೆಸಿದರು.

ಇದನ್ನೂ ಓದಿ: ವೀರ ಸಾವರ್ಕರ್ ಗೊತ್ತಿಲ್ಲದವರಿಗೆ ಹುಟ್ಟಿನ ಬಗ್ಗೆಯೂ ಸಂಶಯವಿರುತ್ತೆ: ಸಿ.ಟಿ. ರವಿ

ಕಾಂಗ್ರೆಸ್ ನಾಯಕರೇ ಒಪ್ಪಿಕೊಂಡಂತ ಮಹಾನ್ ನಾಯಕ ವಾಜಪೇಯಿ. ಕೂಡಲೇ ಈ ಬಗ್ಗೆ ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಬೇಕು. ಈ ರೀತಿ ಮಾತನಾಡುವುದು ಕಾಂಗ್ರೆಸ್ ಸಂಸ್ಕೃತಿ. ಚತುಸ್ಪಥ ಹೆದ್ದಾರಿಯಲ್ಲಿನ ವಾಜಪೇಯಿ ಹೆಸರು ತೆಗೆದು ಹಾಕಿದಾಗ ಎಲ್ಲಿ ಹೋಗಿತ್ತು ನಿಮ್ಮ ಪೌರುಷ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ನನ್ನ ಸ್ಪೀಡ್​​ಗೆ ತಕ್ಕಂತೆ ಕೆಲಸ ಮಾಡಿ, ಇಲ್ಲ ಜಾಗ ಖಾಲಿ ಮಾಡಿ; ಅಧಿಕಾರಿಗಳಿಗೆ ರೇಣುಕಾಚಾರ್ಯ ವಾರ್ನಿಂಗ್​​

Source: newsfirstlive.com Source link