‘ಭಜರಂಗಿ’ಗೆ ಕೈ ಮುಗಿದು ದಾರಿ ಬಿಟ್ಟ ‘ಸಲಗ’ -ಶಿವಣ್ಣನ ಮೇಲಿನ ಅಭಿಮಾನ ಎಂಥದ್ದು?

‘ಭಜರಂಗಿ’ಗೆ ಕೈ ಮುಗಿದು ದಾರಿ ಬಿಟ್ಟ ‘ಸಲಗ’ -ಶಿವಣ್ಣನ ಮೇಲಿನ ಅಭಿಮಾನ ಎಂಥದ್ದು?

ಪ್ರೀತಿ ವಿಶ್ವಾಸ ಅಭಿಮಾನ ತ್ಯಾಗ ಇವೆಲ್ಲ ಪ್ರತಿಯೊಬ್ಬರ ಜೀವನದಲ್ಲೂ ಅಮೂಲ್ಯವಾದವುಗಳು.. ದುನಿಯಾ ವಿಜಯ್ ಅವರ ಸಲಗ ಸಿನಿಮಾ ಇಂಥದೊಂದು ಅಭಿಮಾನ ಮತ್ತು ತ್ಯಾಗದ ವಿಚಾರಕ್ಕೆ ಮುಂದಾಗಿದೆ. ಶಿವಣ್ಣನ ಭಜರಂಗಿಗೆ ಕೈ ಮುಗಿದು ದಾರಿ ಬಿಡುತ್ತಿದ್ದಾನಂತೆ ಸಲಗ. ಈ ರೀತಿಯ ಮಾತುಗಳನ್ನ ಆಡುತ್ತಿದೆ ಗಾಂಧಿನಗರ ಬಳಗ.

blank

ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್​​ ಅಭಿಮಾನ ಮತ್ತು ಅಭಿಮಾನಿಗಳ ಸಂಪರ್ಕ ಸೇತು ಇವ್ರು.. ಪ್ರೇಕ್ಷಕರಷ್ಟೆ ಅಲ್ಲದೆ ಇವತ್ತಿನ ಕಲಾವಿದರು ಕೂಡ ಶಿವಣ್ಣನಿಗೆ ಮನ ಸೋತಿದ್ದಾರೆ ಶಿವಣ್ಣನ ಮೇಲೆ ಅಪಾರ ಅಭಿಮಾನವನ್ನ ಹೊಂದಿದ್ದಾರೆ. ನಟ ದುನಿಯ ವಿಜಯ್ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಜೊತೆ ಸೇರಿ ‘ಸಲಗ’ ಅನ್ನೋ ಟೈಟಲ್ ಇಟ್ಟು ಮೊದಲ ಸಂಪರ್ಕಿಸಿದ್ದು ಶಿವಣ್ಣ ಅವರನ್ನ. ಸಿನಿಮಾ ಶುರುವಾಗೋ ಮೊದಲು ಶಿವಣ್ಣನ ಸಲಹೆ ಆಶೀರ್ವಾದ ಶುಭಾಯಗಳಿಂದಲೇ ಸಿನಿಮಾ ಮಾಡೋಕ್ಕೆ ಅಣಿಯಾಗಿದ್ರು. ಈಗ ಶಿವಣ್ಣ ಭಜರಂಗಿ 2 ಸಿನಿಮಾಕ್ಕೆ ಸಲಗ ದಾರಿ ಮಾಡಿಕೊಡ್ತಿದ್ದಾನೆ.. ಅದೂ ಹೇಗೆ ಅನ್ನೋದನ್ನ ಬಿಡಿಸಿ ಹೇಳ್ತಿವಿ ಕೇಳಿ..

blank

‘ಭಜರಂಗಿ’ಗೆ ಕೈ ಮುಗಿದು ದಾರಿ ಬಿಟ್ಟ ‘ಸಲಗ’..!
ಅಭಿಮಾನಕ್ಕೆ ಆ ತ್ಯಾಗ ಮಾಡ್ತಿದೆ ಸಲಗ ಬಳಗ..!
ಹೌದು.. ಭಜರಂಗಿ-2 ಸಿನಿಮಾಕ್ಕೆ ಸಲಗ ದಾರಿ ಬಿಟ್ಟುಕೊಡುತ್ತಿದೆ. ಅದ್ಹೇಗೆ ಅನ್ನೋದನ್ನ ಹೇಳ್ತಿವಿ ಕೇಳಿ. ಕಳೆದ ಮೂರು ವರ್ಷದಿಂದ ಸಲಗ ಸಿನಿಮಾ ಪ್ರೇಕ್ಷಕರಿಗೆ ಒಂದೊಳ್ಳೆ ಸಿನಿಮಾವನ್ನ ಅರ್ಪಿಸಲು ಶ್ರಮಿಸುತ್ತಿದೆ. ಸಲಗ ಚಿತ್ರಕ್ಕೆ ಎರಡ್ಮೂರು ಬಾರಿ ರಿಲೀಸ್ ಮುಂದಾದ್ರು ತಾವು ಅಂದುಕೊಂಡ ದಿನಕ್ಕೆ ಬರಲು ಆಗ್ಲೇ ಇಲ್ಲ. ಇನ್ನೇನು ವರಮಹಾಲಕ್ಷ್ಮೀ ಪೂಜೆಗೆ ಬಂದು ಬಿಡ್ತೀವಿ ಅಂದುಕೊಂಡರು.. ಈಗ್ಲೂ ಆಗ್ಲಿಲ್ಲ. ಈಗ ಸೆಪ್ಟೆಂಬರ್ ತಿಂಗಳಿನಿಂದ 100 ಪರ್ಸೆಂಟ್ ಸೀಟು ಭರ್ತಿಗೆ ಅವಕಾಶವನ್ನ ಸರ್ಕಾರ ನೀಡೋ ಸೂಚನೆ ಇದೆ. ಗಣಪತಿ ಹಬ್ಬ ಸೆಪ್ಟೆಂಬರ್ 10ನೇ ತಾರೀಖು ಬರಲಿದೆ. ಈ ದಿನಾಂಕದಲ್ಲಿ ಸಲಗ ಸಿನಿಮಾವನ್ನ ರಿಲೀಸ್ ಮಾಡಬಹುದು ಆದ್ರೆ ಆ ದಿನದಂದ ಶಿವಣ್ಣನ ಬಹುನಿರೀಕ್ಷಿತ ಭಜರಂಗಿ-2 ಸಿನಿಮಾ ರಿಲೀಸ್​ ಡೇಟ್ ಫಿಕ್ಸ್ ಮಾಡಿಕೊಂಡಿದೆ.

blank

ನಮ್ಮ ಶಿವಣ್ಣನ ‘ಭಜರಂಗಿ-2’ ಸಿನಿಮಾ ಮೊದಲು ಬರ್ಲಿ ಆಮೇಲೆ ನಾವು ಬರ್ತಿವಿ ಅಂತ ಸಲಗ ಟೀಮ್ ಮಾನಸಿಕವಾಗಿ ಡಿಸೈಡ್ ಮಾಡಿಕೊಂಡಿದೆಯಂತೆ. ಕಳೆದ ಶುಕ್ರವಾರ ಸಲಗ ಸಿನಿಮಾ ತಂಡ ಪ್ರಮೋಷನಲ್ ಸಾಂಗ್​​ನಲ್ಲಿ ಹಾಡಿಕುಣಿದ ಸಿದ್ಧಿ ಜನಾಂಗ ಕಲಾವಿದರನ್ನ ಮಾಧ್ಯಮಗಳ ಮುಂದೆ ಕರೆಸಿ ಮಾತನಾಡಿಸಿದಾಗ ಇಂತಹ ವಿಚಾರಧಾರೆಗಳನ್ನ ಹಂಚಿಕೊಂಡಿದೆ.

ಇನ್ನು ಸಿದ್ಧಿ ಜನಾಂಗ ಕಲಾವಿದರು ಹಾಡಿರೋ ಟಿಣಿಂಗ ಮಿಣಿಂಗ ಡಿಶ್ಯಾ ಹಾಡಿದ್ದ ಕಲಾವಿದರು ದುನಿಯಾ ವಿಜಯ್ ಅವರನ್ನ ನಮ್ಮ ಗಾಡ್ ಫಾದರ್ ಎಂದಿದ್ದಾರೆ. ಮತ್ತೆ ಕನ್ನಡ ಚಿತ್ರಗಳಲ್ಲಿ ಹಾಡಲು ನಮಗೆ ಅವಕಾಶ ಸಿಕ್ರೆ ದುನಿಯಾ ವಿಜಯ್ ಅವರಿಗೆ ಒಂದು ಮಾತು ಹೇಳಿ ಹೊಸ ಹಾಡನ್ನ ಹಾಡಲು ಒಪ್ಪಿಕೊಳ್ತೇವೆ, ಅವರೇ ನಮ್ಮಗೆ ಚಿತ್ರರಂಗದಲ್ಲಿ ಗಾಡ್ ಫಾದರ್ ಎಂದಿದ್ದಾರೆ.

ಒಟ್ಟಿನಲ್ಲಿ ಸಲಗ ಸಿನಿಮಾ ಕಳೆದ ಮೂರು ವರ್ಷದಿಂದ ಅನೇಕ ಅನೇಕ ಇಂಟ್ರಸ್ಟಿಂಗ್ ವಿಚಾರಗಳಿಂದ ಸದ್ದು ಸಮಾಚಾರ ಮಾಡ್ತಿದೆ. ಆದ್ರೆ ರಿಲೀಸ್ ಸೌಭಾಗ್ಯ ಮಾತ್ರ ಸಲಗ ಚಿತ್ರಕ್ಕೆ ಸಿಗದಿರೋದು ಕೊಂಚ ಬೇಸರದ ಸಂಗತಿ.

Source: newsfirstlive.com Source link