ಪ್ರವಚನದ ಸಲುವಾಗಿ ಮಾತೆಯರ ನಡುವೆ ಕಚ್ಚಾಟ.. ಏಕವಚನದಲ್ಲೇ ವಾಗ್ದಾಳಿ​

ಪ್ರವಚನದ ಸಲುವಾಗಿ ಮಾತೆಯರ ನಡುವೆ ಕಚ್ಚಾಟ.. ಏಕವಚನದಲ್ಲೇ ವಾಗ್ದಾಳಿ​

ಬೀದರ್: ಇಬ್ಬರು ಮಾತೆಯರು ಪ್ರವಚನಕ್ಕೆ ಅವಕಾಶ ನೀಡುವ ವಿಚಾರವಾಗಿ ಪರಸ್ಪರ ಕಚ್ಚಾಟ ನಡೆಸಿ, ಏಕವಚನದಲ್ಲೇ ವಾಗ್ದಾಳಿ ನಡೆಸಿದ ಘಟನೆ ಜಿಲ್ಲೆಯ ಬಸವಗಿರಿಯಲ್ಲಿ ನಡೆದಿದೆ.

ಗಂಗಾಬಿಕೆ ಮತ್ತು ಅಕ್ಕ ಅನ್ನಪೂರ್ಣ ಏಕವಚನದಲ್ಲಿ ಕಚ್ಚಾಟ ನಡೆಸಿದವರು. ಶ್ರಾವಣ ಮಾಸ ಹಿನ್ನೆಲೆಯಲ್ಲಿ ಶರಣ ಉದ್ಯಾನವನದಲ್ಲಿ ಪ್ರವಚನ ನೀಡಲು‌ ಇಬ್ಬರೂ ಸಿದ್ದತೆ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಈ ವಿಚಾರವಾಗಿ ಕಚ್ಚಾಟ ನಡೆದಿದೆ ಎನ್ನಲಾಗಿದೆ. ಈ ಇಬ್ಬರ ಆಂತರಿಕ ಕಚ್ಚಾಟದಿಂದ ಭಕ್ತ ವೃಂದದಲ್ಲಿ ತೀವ್ರ ಅಸಮಾಧಾನ ಉಂಟುಮಾಡಿದೆ.

ಪ್ರವಚನ ನಡೆಸಲು ಅವಕಾಶ ನೀಡದಂತೆ ಜಿಲ್ಲಾ ವರಿಷ್ಠಾಧಿಕಾರಿ ಬಳಿ ಮಾತೆ ಗಂಗಾಬಿಕೆ ದೂರು ನೀಡಿದ ಬೆನ್ನಲ್ಲೇ ಅಕ್ಕ ಅನ್ನಪೂರ್ಣ ಕೂಡ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರಂತೆ. ಇನ್ನು ಇಬ್ಬರ ಈ ಕಚ್ಚಾಟದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ..

 

Source: newsfirstlive.com Source link