ಸರ್ಕಾರಿ ವೈದ್ಯೆ ಈಗ ಮಿಸೆಸ್ ಇಂಡಿಯಾ ಕರ್ನಾಟಕ ರನ್ನರ್‌ಅಪ್‌

– ಚರ್ಮರೋಗ ತಜ್ಞೆ ಡಾ.ಶ್ವೇತಾ ಜಾಕಾರಿಗೆ ಒಲಿದ ವಿವಿಧ ಪ್ರಶಸ್ತಿ ಗರಿ

ಯಾದಗಿರಿ: ಜಿಲ್ಲೆಯ ಸರ್ಕಾರಿ ಚರ್ಮರೋಗ ತಜ್ಞೆ ಶ್ವೇತಾ ಜಾಕಾ ಅವರು 2021ರ ಮಿಸೆಸ್ ಇಂಡಿಯಾ ಕರ್ನಾಟಕ ರನ್ನರ್‌ಅಪ್‌ ಗೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಯಲಹಂಕದಲ್ಲಿ ಆ.9 ರಿಂದ 11ರವರೆಗೆ ಮೂರು ದಿನಗಳ ಕಾಲ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ನಾಡಿನ ವಿವಿಧ ಭಾಗಗಳಿಂದ ನೂರಾರು ಜನ ಮಹಿಳೆಯರು ಪಾಲ್ಗೊಂಡಿದ್ದರು. ಅದರಲ್ಲಿ 36 ಜನ ಮಹಿಳೆಯರು ಸ್ಪರ್ಧೆಯಲ್ಲಿ ಅಂತಿಮವಾಗಿ ಉಳಿದು, ವಿವಿಧ ಹಂತಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಡಾ. ಶ್ವೇತಾ ಜಾಕಾ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ತೀರ್ಪುಗಾರರು ಅವರನ್ನು 2021ರ ಮಿಸೆಸ್ ಇಂಡಿಯಾ ಕರ್ನಾಟಕ ರನ್ನರ್‌ಅಪ್‌ ಪ್ರಶಸ್ತಿಗೆ ಆಯ್ಕೆ ಮಾಡಿ, ಟ್ರೋಫಿ ನೀಡಿ ಗೌರವಿಸಿದರು.

ಶ್ವೇತಾ ಜಾಕಾ ಅವರನ್ನು ಮಿಸೆಸ್ ಯಾದಗಿರಿಗೆ ಪ್ರಥಮ, ಮಿಸೆಸ್ ಎಲಿಜಂಟ್‍ನಲ್ಲಿಯೂ ಪ್ರಥಮ ಬಹುಮಾನಕ್ಕೆ ಆಯ್ಕೆ ಮಾಡಿ ಪ್ರಶಸ್ತಿ ನೀಡಿದ್ದಾರೆ. ಮಿಸೆಸ್ ಇಂಡಿಯಾ ಕರ್ನಾಟಕದ ನಿರ್ದೇಶಕರಾದ ಪ್ರತಿಭಾ ಸಂಶಿಮಠ, ಮಿಸೆಸ್ ಇಂಡಿಯಾ ನಿರ್ದೇಶಕಿ ದೀಪಾಲಿ ಫಡ್ನಿಸ್ ಈ ಸ್ಪರ್ಧೆಯನ್ನು ಆಯೋಜಿಸಿದ್ದರು. ಶ್ವೇತಾ ಅವರ ಪತಿಯೂ ಯಾದಗಿರಿಯಲ್ಲಿ ಖಾಸಗಿ ವೈದ್ಯರಾಗಿದ್ದಾರೆ.

Source: publictv.in Source link