ನಿರ್ಮಾಣ ಹಂತದ ಸೇತುವೆಯ ಕಾಮಗಾರಿ ವೇಳೆ ಅವಘಡ: ಆರು ಜನ ಕಾರ್ಮಿಕರಿಗೆ ಗಾಯ

ನಿರ್ಮಾಣ ಹಂತದ ಸೇತುವೆಯ ಕಾಮಗಾರಿ ವೇಳೆ ಅವಘಡ: ಆರು ಜನ ಕಾರ್ಮಿಕರಿಗೆ ಗಾಯ

ಕಲಬುರಗಿ: ನಿರ್ಮಾಣ ಹಂತದ ಸೇತುವೆಯ ಕಾಮಗಾರಿ ವೇಳೆ ಅವಘಡವಾಗಿ ಸೇತುವೆಯ ಒಂದು ಬ್ಲಾಕ್ ಕುಸಿದು ಬಿದ್ದಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ.

blank

ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಹೊರವಲಯದಲ್ಲಿ ಈ ಘಟನೆ ಸಂಭವಸಿದೆ. ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿತ್ತು ಈ ಸೇತುವೆ. ಆದ್ರೆ, ಅವಘಡ ಸಂಭವಿಸಿದ ಪರಿಣಾಮ ಆರು ಕಾರ್ಮಿಕರಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ, ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Source: newsfirstlive.com Source link