ಸದ್ದಿಲ್ಲದೆ ಶುರುವಾಯ್ತು ಚಿರಂಜೀವಿ ಹೊಸ ಚಿತ್ರ -ಸಿನಿಮಾದಲ್ಲಿ ರಾಜಕಾರಣಿ ಆಗ್ತಿದ್ದಾರೆ ‘ಆಚಾರ್ಯ’

ಸದ್ದಿಲ್ಲದೆ ಶುರುವಾಯ್ತು ಚಿರಂಜೀವಿ ಹೊಸ ಚಿತ್ರ -ಸಿನಿಮಾದಲ್ಲಿ ರಾಜಕಾರಣಿ ಆಗ್ತಿದ್ದಾರೆ ‘ಆಚಾರ್ಯ’

ರಾಜಕೀಯ ರಣಕಣಕ್ಕೆ ಕೈ ಮುಗಿದು ಬಣ್ಣದ ಬದುಕೆ ಮೇಲೆಂದು ಮತ್ತೆ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ ಟಾಲಿವುಡ್​​ನ ಮೆಗಾಸ್ಟಾರ್ ಚಿರಂಜೀವಿ. ಆಚಾರ್ಯ ಸಿನಿಮಾ ಕೆಲಸ ಕಾರ್ಯಗಳನ್ನ ಮುಗಿಸಿ ಥಟ್ಟನೇ ನೆಕ್ಸ್ಟ್ ಮೂವಿ ಸೆಟ್​​​ಗೆ ಕಾಲಿಟ್ಟಿದ್ದಾರೆ ಚಿರಂಜೀವಿ.

blank

ಎಲ್ಲವೂ ಎಲ್ಲರಿಗೂ ಒಲಿಯಲ್ಲ.. ದೊಡ್ಡವರು ಮಾಡಿದಂಗೆ ಸಣ್ಣವರು ಮಾಡಕ್ಕೆ ಆಗಲ್ಲ, ಸಣ್ಣವರು ಮಾಡಿದಂಗೆ ದೊಡ್ಡವರು ಮಾಡಕ್ಕಾಗಲ್ಲ. ತೆಲುಗು ಸಿನಿ ಭೂಮಿಯ ದಂತಕಥೆ ಎನ್​.ಟಿ.ಆರ್ ರೀತಿ ಕಲಾ ಸೇವೆ ಮತ್ತು ಜನ ಸೇವೆಯನ್ನ ಮಾಡಲು ಹೊರಟಿದ್ದರು ಮೆಗಾಸ್ಟಾರ್ ಚಿರಂಜೀವಿ. ಆದ್ರೇನು ಮಾಡೋದು ರಾಜಕೀಯ ಅಷ್ಟಾಗಿ ಚಿರು ಚರಿಶ್ಮಾಗೆ ಮ್ಯಾಚ್ ಆಗ್ಲಿಲ್ಲ. ಈ ಕಾರಣಕ್ಕೆ ಮತ್ತೆ ಚಿರು ಸಿನಿಮಾದಲ್ಲಿ ನಟಿಸಲು ಶುರು ಮಾಡಿಕೊಂಡಿದ್ದಾರೆ. ಖೈದಿ-150 ಸಿನಿಮಾದ ಮೂಲಕ ರಾನನುಕುನ್ನಾರಾ, ರಾಲೇನು ಅನುಕುನ್ನಾರಾ, ರಾವಾಡಂ ಮಾತ್ರಂ ಪಕ್ಕಾ ಎನ್ನುತ್ತಾ ಕಂಬ್ಯಾಕ್ ಆದರು..

blank

ಖೈದಿ-150 ಸಿನಿಮಾದ ನಂತರ ಸೈರಾ ನರಸಿಂಹ ರೆಡ್ಡಿಯಾಗಿ ಘರ್ಜಿಸಿ ಈಗ ಆಚಾರ್ಯ ಅನ್ನೋ ಸಿನಿಮಾದ ಮೂಲಕವೂ ಪ್ರೇಕ್ಷಕ ಪ್ರಭುಗಳನ್ನ ರಂಜಿಸಲು ಮುಂದಾಗುತ್ತಿದ್ದಾರೆ. ಆಚಾರ್ಯ ಸಿನಿಮಾದ ನಂತರ ವಾಟ್ ನೆಕ್ಸ್ಟ್ ಚಿರಂಜೀವಿ ಅನ್ನುತ್ತಿದ್ದರು ಚಿತ್ರಪ್ರೇಮಿಗಳು. ಈಗ ಆ ಪ್ರಶ್ನೆಗೆ ಚಿರು ಬಳಗದಿಂದ ಉತ್ತರ ಸಿಕ್ಕಿದೆ. ಮಾಲಿವುಡ್​​ನ ಲೂಸಿಫರ್ ಸಿನಿಮಾ ರಿಮೇಕ್ ಮಾಡ್ತಾರೆ ಚಿರು ಅನ್ನೋ ಗಾಳಿ ಸುದ್ದಿ ನಿಜವಾಗಿ ಚಿರಂಜೀವಿ ಅವರ 153ನೇ ಸಿನಿಮಾ ಶುರುವಾಗಿದೆ.

ಮೋಹನ್ ರಾಜ್ ಡೈರೆಕ್ಷನ್​ನಲ್ಲಿ ಚಿರಂಜೀವಿ ಅವರ ಪೊಲಿಟಿಕಲ್ ಡ್ರಾಮಾ ಮೂಡಿ ಬರಲಿದೆ. ಯುವರತ್ನ ಸಿನಿಮಾ ಖ್ಯಾತಿಯ ಎಸ್​.ಎಸ್​. ತಮನ್ ಫಸ್ಟ್ ಟೈಮ್ ಚಿರಂಜಿವಿ ಚಿತ್ರಕ್ಕೆ ಮ್ಯೂಸಿಕ್ ಬಾರಿಸಲಿದ್ದಾರೆ. ಈ ಚಿತ್ರಕ್ಕೆ ಸೋನಾಕ್ಷಿ ಸಿನ್ಹಾ ಹೀರೋಯಿನ್ ಆಗೋ ಸಾಧ್ಯತೆ ಇದೆ. ಆಚಾರ್ಯ ಸಿನಿಮಾದ ಶೂಟಿಂಗ್ ಮುಗಿಸಿರೋ ಶೀಘ್ರದಲ್ಲೇ ಚಿರು ತಮ್ಮ 153ನೇ ಚಿತ್ರಕ್ಕೆ ಅಣಿಯಾಗಲಿದ್ದಾರೆ.

Source: newsfirstlive.com Source link