ಇಂದಿರಾ ಕ್ಯಾಂಟೀನ್​​ ಹೆಸರು ಬದಲಿಸಿದರೆ ತಪ್ಪೇನು?; ಬಿಜೆಪಿ ಶಾಸಕ ಅರವಿಂದ್​ ಬೆಲ್ಲದ್​

ಇಂದಿರಾ ಕ್ಯಾಂಟೀನ್​​ ಹೆಸರು ಬದಲಿಸಿದರೆ ತಪ್ಪೇನು?; ಬಿಜೆಪಿ ಶಾಸಕ ಅರವಿಂದ್​ ಬೆಲ್ಲದ್​

ಧಾರವಾಡ: ದೇಶದಲ್ಲಿ ಎಲ್ಲದಕ್ಕೂ ಗಾಂಧಿ ಕುಟುಂಬದ ಹೆಸರನ್ನೇ ಇಡಬೇಕೇ ಎಂದು ಬಿಜೆಪಿ ಶಾಸಕ ಅರವಿಂದ್​​​ ಬೆಲ್ಲದ್ ಪ್ರಶ್ನಿಸಿದ್ದಾರೆ. ಈ ಸಂಬಂಧ ಸುದ್ದಿಗಾರೊಂದಿಗೆ ಮಾತಾಡಿದ ಅರವಿಂದ್​​ ಬೆಲ್ಲದ್, ಇಂದಿರಾ ಗಾಂಧಿ ಹೆಸರಿನಲ್ಲಿ ರಾಜ್ಯ ಮಾತ್ರವಲ್ಲ ಇಡೀ ದೇಶದಲ್ಲಿ ಹಲವು, ರಸ್ತೆ ಮತ್ತು ಪಾರ್ಕ್​​ಗಳಿವೆ. ಹೀಗಿರುವಾಗ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್​​ ಹೆಸರು ಬದಲಿಸಿದರೆ ತಪ್ಪೇನು? ಎಂದು ಪ್ರಶ್ನಿಸಿದರು.

ಇಂದಿರಾ ಕ್ಯಾಂಟೀನ್ ಎಂದು ರಾಜ್ಯದಲ್ಲಿ ಅಷ್ಟೇ ಅಲ್ಲ, ದೆಹಲಿಯಲ್ಲೂ ಇವೆ. ಸರ್ಕಾರದ ಹಣದಿಂದ ಯೋಜನೆಗಳನ್ನು ಮಾಡುತ್ತೇವೆ. ದೆಹಲಿಯಲ್ಲಿ ಇಂದಿರಾ ಗಾಂಧಿ, ನೆಹರು, ರಾಜೀವ್​​ ಗಾಂಧಿ ಹೆಸರುಗಳಿವೆ. ಸಹಜವಾಗಿಯೇ ಅದರ ಬಗ್ಗೆ ಸಿ.ಟಿ ರವಿ ಗಮನ ಸೆಳೆದಿದ್ದಾರೆ ಎಂದು ಇಂದಿರಾ ಕ್ಯಾಂಟೀನ್​​ ಹೆಸರು ಬದಲಾವಣೆ ಬಗ್ಗೆ ಸಮರ್ಥಿಸಿಕೊಂಡರು.

ಈ ಹಿಂದೆಯೂ ಬಿಎಸ್​ಪಿ ಪಾರ್ಕ್​​ನಲ್ಲಿ ಮಾಯಾವತಿ ಪ್ರತಿಮೆ ಮಾಡಲು ಮುಂದಾಗಿದ್ದರು. ಆಗ ದೇಶಾದ್ಯಂತ ಹೋರಾಟವೇ ನಡೆಯಿತು. ಇಡೀ ದೇಶಾದ್ಯಂತ ಗಾಂಧಿ ಕುಟುಂಬದ ಹೆಸರಿನಲ್ಲಿ ಎಲ್ಲ ಇವೆ. ಪಾರ್ಕ್, ರಸ್ತೆ, ರೈಲ್ವೆ ‌ನಿಲ್ದಾಣಗಳು, ಕ್ರೀಡಾಂಗಣ, ಸರ್ಕಾರ ಯೋಜನೆ, ಆಸ್ಪತ್ರೆಗಳು ಕೂಡ ಇವೆ ಎಂದರು.

ಇದನ್ನೂ ಓದಿ: ಕೃಷಿ ಮಾರುಕಟ್ಟೆ ಸುಧಾರಣೆಯಿಂದ ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗಲಿದೆ- ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಮಾತು

ಇನ್ನು, ಕಾಂಗ್ರೆಸ್​ ಮಾಡಿದರೆ ತಪ್ಪಲ್ಲ. ಇದನ್ನೇ ಮಾಯಾವತಿ ಮಾಡಿದರೆ ದೊಡ್ಡ ತಪ್ಪು ಎನ್ನುತ್ತೀರಿ. ಹೀಗಾಗಿ ಇಂತಹ ವಿಚಾರದಲ್ಲಿ ಕಾಂಗ್ರೆಸ್ ತನ್ನ ದ್ವಂದ್ವ ನೀತಿ ಬಿಡಬೇಕು. ಸರ್ಕಾರದ ಯೋಜನೆಗಳಿಗೆ ಇವರ ಒಂದೆರಡು ಹೆಸರಿಟ್ಟರೆ ಅಡ್ಡಿ ಇಲ್ಲ. ಎಲ್ಲದ್ದಕ್ಕೂ ಅವರದೇ ಹೆಸರು ಇಡುತ್ತ ಹೋಗುವುದು ತಪ್ಪು ಎಂದು ಕುಟುಕಿದರು.

Source: newsfirstlive.com Source link