ಸ್ವಾತಂತ್ರ್ಯ ದಿನಾಚರಣೆಯನ್ನೂ ತಪ್ಪಾಗಿ ವಿಶ್ ಮಾಡಿದ ಪಾಕಿಸ್ತಾನಿ ಕ್ರಿಕೆಟಿಗ.. ಟ್ರೋಲಿಗರಿಂದ ಫುಲ್​ ಟ್ರೋಲ್!​

ಸ್ವಾತಂತ್ರ್ಯ ದಿನಾಚರಣೆಯನ್ನೂ ತಪ್ಪಾಗಿ ವಿಶ್ ಮಾಡಿದ ಪಾಕಿಸ್ತಾನಿ ಕ್ರಿಕೆಟಿಗ.. ಟ್ರೋಲಿಗರಿಂದ ಫುಲ್​ ಟ್ರೋಲ್!​

ಇಂದು, ಅಂದ್ರೆ, ಆಗಸ್ಟ್​ 14ಕ್ಕೆ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ, ಪಾಕಿಸ್ತಾನದ ಕ್ರಿಕೆಟಿಗ ಕಮ್ರಾನ್​ ಅಕ್ಮಲ್​ ಪಾಕಿಸ್ತಾನಿಗರಿಗೆ ಶುಭಾಶಯ ಕೋರಿರೋದಲ್ಲದೇ, ಟ್ರೋಲ್‌ಗೆ ಒಳಗಾಗಿದ್ದಾರೆ.

ಹೌದೂ, ಇಂಗ್ಲಿಷ್​​ ಭಾಷೆಯಲ್ಲಿ ಇಂಡಿಪೆಂಡೆನ್ಸ್ ಡೇ ಅನ್ನೋ ಪದವನ್ನ ತಪ್ಪಾಗಿ ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅದನ್ನ ‘‘Indepence‘‘ ಅಂತ ಬರೆದು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹಿಂದೆಯೂ, ಸುಮಾರ್​ ಸಲ ಅಕ್ಮಲ್​ ತಮ್ಮ ಸೋಷಿಯಲ್​ ಮೀಡಿಯಾ ಪೇಜ್​ಗಳಲ್ಲಿ ಇಂಗ್ಲಿಷ್​ ಪದಗಳನ್ನು ತಪ್ಪಾಗಿ ಉಲ್ಲೇಖಿಸುವ ಮೂಲಕ ಎಡವಟ್ಟು ಮಾಡಿಕೊಂಡಿದ್ರು. ಈ ಹಿಂದೆ ‘ಮದರ್​ ಫ್ರಂ ಅನದರ್​ ಬ್ರದರ್​’ ಅಂತಲೂ ಇವ್ರು ಬರೆದು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

blank

 

 

Source: newsfirstlive.com Source link