ತಂದೆ ಯಾರೆಂದು ಅನುಮಾನ ಇರೋರು ಸಾವರ್ಕರ್ ಯಾರೆಂದು ಕೇಳುತ್ತಾರೆ: ಸಿ.ಟಿ.ರವಿ

– ಈಗ ಇರುವುದು ಹಳೆ ಕಾಂಗ್ರೆಸ್ ಅಲ್ಲ, ಇಟಲಿ ಕಾಂಗ್ರೆಸ್

ಚಿಕ್ಕಮಗಳೂರು: ತಂದೆ ಯಾರೆಂದು ಅನುಮಾನ ಇರುವವರು ಸಾವರ್ಕರ್ ಯಾರೆಂದು ಕೇಳುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ಸಿಗರ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.

ನಗರದ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಮಾತನಾಡಿದ ಅವರು, ಎರಡು ಕರಿ ನೀರಿನ ಶಿಕ್ಷೆಗೆ ಒಳಗಾದವರು ವೀರ ಸಾವರ್ಕರ್. ಎರಡು ಜೀವವಾಧಿ ಶಿಕ್ಷೆಗೆ ಒಳಗಾದ ದೇಶದ ಮೊದಲ ವ್ಯಕ್ತಿ ಸಾವರ್ಕರ್. ಅಂತಹವರ ಬಗ್ಗೆ ಗೊತ್ತಿಲ್ಲದವರಿಗೆ ಬಹುಶಃ ತಮ್ಮ ಹುಟ್ಟಿನ ಬಗ್ಗೆಯೂ ಸಂಶಯವಿರುತ್ತೆ. ನೆಹರು ಅವರ ವೈರುಧ್ಯಗಳನ್ನು ಮುಚ್ಚಿಕೊಳ್ಳಲು ಅಟಲ್ ಜೀ ಅವರ ಹೆಸರನ್ನ ಬಳಸಿಕೊಳ್ಳುತ್ತಿದ್ದಾರೆ. ಇಂದಿಗೂ ನೆಹರು ಅವರ ನೂರಾರು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿವೆ. ಅಟಲ್ ಜೀ ಅವರ ಆ ರೀತಿಯ ಒಂದು ಫೋಟೋ ತೋರಿಸಲಿ ಎಂದು ಕಾಂಗ್ರೆಸ್ಸಿಗರಿಗೆ ಸವಾಲು ಹಾಕಿದ್ದಾರೆ.

ಅಟಲ್ ಜೀ ರಾಷ್ಟ್ರದ ಹಿತಕ್ಕೆ ರಾಜಕಾರಣ ಮಾಡಿಕೊಂಡು ಬಂದ ಅಜಾತಶತ್ರು. ಅಟಲ್ ಜೀ ಬದುಕಿದ್ದಾಗಲೂ ವಿವಾದಕ್ಕೆ ಒಳಗಾಗಲಿಲ್ಲ. ಆದರೆ ಈಗ ನೆಹರು ಅವರ ವೈಪರಿತ್ಯಗಳನ್ನ ಮುಚ್ಚಿಕೊಳ್ಳಲು ಅಟಲ್ ಜೀ ಹೆಸರನ್ನ ತಳುಕು ಹಾಕುತ್ತಿದ್ದಾರೆ. ನೆಹರು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಚಿತ್ರಗಳನ್ನ ಕಾಂಗ್ರೆಸ್ ಸಮರ್ಥಿಸುತ್ತಿದೆ ಎಂಬುದು ಸತ್ಯವಾಯಿತು ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ವಸ್ತುನಿಷ್ಠ ಸಮರ್ಥನೆಗೆ ವಿಷಯ ಇಲ್ಲದಾಗ ನಿಂದನೆಗೆ ಇಳಿಯುತ್ತಾರೆ. ಈಗ ಕಾಂಗ್ರೆಸ್ ಇಳಿದಿರುವುದು ನಿಂದನೆಗೆ. ಆ ನಿಂದನೆಗೆ ನನ್ನ ಹೆಸರು, ಅಟಲ್ ಜೀ ಹೆಸರನ್ನ ಬಳಸುತ್ತಿದ್ದಾರೆ. ಈಗಿರುವುದು ಹಳೆ ಕಾಂಗ್ರೆಸ್ ಅಲ್ಲ, ಇಟಲಿ ಕಾಂಗ್ರೆಸ್ ಎಂದು ಕಿಡಿಕಾರಿದರು.

ರಾಜಸ್ಥಾನದಲ್ಲಿ ವಸುಂಧರಾ ರಾಜೇ ಸಿಂಧ್ಯಾ ಅವರು ಬಡವರಿಗೆ ಅನ್ನ ನೀಡಲು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ತೆರೆದಿದ್ದರು. ಕಾಂಗ್ರೆಸ್ ಆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಹೆಸರು ಬದಲಿಸಿ, ಇಂದಿರಾ ಕ್ಯಾಂಟೀನ್ ಎಂದು ಬದಲಿಸಿದ್ದಾರೆ. ಇದು ಯಾವ ರಾಜಕಾರಣ? ಅನ್ನಪೂರ್ಣೇಶ್ವರಿ ಅನ್ನದ ದೇವತೆ, ಅನ್ನ ದೇವತೆಯ ಹೆಸರನ್ನ ಸಹಿಸಿಕೊಳ್ಳಲಾಗದ ಕಾಂಗ್ರೆಸ್ ಇದೆ. ಹಾಗಾಗಿ, ಇದು ಹಳೆಯ ಕಾಂಗ್ರೆಸ್ ಅಲ್ಲ, ಇಟಲಿ ಕಾಂಗ್ರೆಸ್ ಇರುವುದರಿಂದ ಅಭಿಮಾನದ, ಅನ್ನದ ದೇವತೆ ಅನ್ನಪೂರ್ಣೇಶ್ವರಿಯನ್ನ ಒಪ್ಪಿಕೊಳ್ಳಲಾಗದ ಮನಸ್ಥಿತಿ ಇರುವ ಕಾರಣಕ್ಕೆ ಅನ್ನಪೂರ್ಣೇಶ್ವರಿ ಹೆಸರು ಇದ್ದದ್ದನ್ನ ಇಂದಿರಾ ರಸೋಯಿಗರ್ ಎಂದು ಬದಲಿಸಿದ್ದಾರೆ ಎಂದು ತಿಳಿಸಿದರು.

Source: publictv.in Source link