ಇನ್ನುಮುಂದೆ ದೆಹಲಿಯಲ್ಲಿ ಮಕ್ಕಳಿಗೆ ಒಂದು ತರಗತಿಯಲ್ಲಿ ‘ದೇಶಪ್ರೇಮದ’ ಪಾಠ

ಇನ್ನುಮುಂದೆ ದೆಹಲಿಯಲ್ಲಿ ಮಕ್ಕಳಿಗೆ ಒಂದು ತರಗತಿಯಲ್ಲಿ ‘ದೇಶಪ್ರೇಮದ’ ಪಾಠ

ನವದೆಹಲಿ: ಈ ಹಿಂದೆ, ಆಮ್​ ಆದ್ಮಿ ಪಾರ್ಟಿಯ ಸರ್ಕಾರ ತನ್ನ 2020-21ರ  ಬಜೆಟ್​ನ್ನ ಮಂಡಿಸಿದಾಗ, ದೆಹಲಿಯ ಎಲ್ಲಾ ಶಾಲೆಗಳಲ್ಲೂ ‘‘ದೇಶಭಕ್ತಿ’’ ಪಠ್ಯಕ್ರಮವನ್ನ ಆರಂಭಿಸೋದಾಗಿ ಡಿಸಿಎಂ ಸಿಸೋಡಿಯಾ ಹೇಳಿದ್ರು. ಇದೀಗ ಆ ಆದೇಶ ಜಾರಿಗೆ ಬಂದಿದೆ.

ಹೌದು, ಭಾರತದ 75ನೆ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ದೆಹಲಿ ಸರ್ಕಾರ ಶಾಲೆಯಲ್ಲಿ ಓದುತ್ತಿರುವ ಮಕ್ಕಳಲ್ಲಿ ದೇಶಪ್ರೇಮ ತುಂಬುವ ಸಲುವಾಗಿ ದೇಶಭಕ್ತಿ ಎಂಬ ಪಠ್ಯಕ್ರಮ ಶಾಲೆ ಆರಂಭವಾಗ್ತಿದ್ದಂತೆ ಕೇಜ್ರಿವಾಲ್​ ಸರ್ಕಾರ ಶುರು ಮಾಡಲಿದೆ. ಈ ನಿಟ್ಟಿನಲ್ಲಿ, ಪ್ರತಿ ದಿನ ‘ದೇಶಭಕ್ತಿ’ ಎಂಬ ತರಗತಿ ಒಂದೊಂದು ದಿನ ಒಂದೊಂದು ತರಗತಿಯ ಮಕ್ಕಳಲ್ಲಿ ನಡೆಯಲಿದೆ ಅಂತ ಶುಕ್ರವಾರ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಜ್ಯ ಮಂಡಳಿ ಒಂದು ಸರ್ಕ್ಯೂಲರ್​ನಲ್ಲಿ ಪ್ರಕಟಿಸಿದೆ. ಈ ದೇಶಭಕ್ತಿ ಪಾಠ 9ರಿಂದ 12ನೇ  ತರಗತಿವರೆಗೆ ಅನ್ವಯಾವಾಗಲಿದೆ.

Source: newsfirstlive.com Source link