75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 6 ಸೇನಾ ಯೋಧರಿಗೆ ಶೌರ್ಯ ಚಕ್ರ ಪ್ರಶಸ್ತಿ

75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 6 ಸೇನಾ ಯೋಧರಿಗೆ ಶೌರ್ಯ ಚಕ್ರ ಪ್ರಶಸ್ತಿ

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಉಗ್ರರ ಹುಟ್ಟಡಗಿಸಿದ ಭಾರತೀಯ ಸೇನಾ ಸಿಬ್ಬಂದಿಗೆ ದೇಶದ ಮೂರನೇ ಅತ್ಯುನ್ನತ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಕಳೆದ ವರ್ಷ ಯೋಧರ ಸಾಧನೆಯನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಭಾರತೀಯ ಸೇನೆಯ ಪ್ರಕಾರ, ಮೇಜರ್ ಅರುಣ್ ಕುಮಾರ್ ಪಾಂಡೆ, ಮೇಜರ್ ರವಿಕುಮಾರ್ ಚೌಧರಿ, ಕ್ಯಾಪ್ಟನ್ ಅಶುತೋಷ್ ಕುಮಾರ್, ಕ್ಯಾಪ್ಟನ್ ವಿಕಾಸ್ ಖಾತ್ರಿ, ರೈಫಲ್ ಮ್ಯಾನ್ ಮುಖೇಶ್ ಕುಮಾರ್ ಮತ್ತು ಸಿಪಾಯಿ ನೀರಜ್ ಅಹ್ಲಾವತ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅಷ್ಟೇ ಅಲ್ಲದೇ, ನಾಳೆ, ನಾಲ್ಕು ಸೇನಾ ಸಿಬ್ಬಂದಿಗೆ ಬಾರ್ ಟು ಸೇನಾ ಪದಕವನ್ನು ನೀಡುವುದಕ್ಕೆ ಹಾಗೂ 116 ಇತರರನ್ನು ಸೇನಾ ಪದಕಕ್ಕಾಗಿ ಹೆಸರಿಸಲಾಗಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ. ಕ್ಯಾಪ್ಟನ್ ಕುಮಾರ್, ಕ್ಯಾಪ್ಟನ್ ವಿಕಾಸ್ ಖಾತ್ರಿ, ರೈಫಲ್‌ಮ್ಯಾನ್ ಕುಮಾರ್, ಸಿಪಾಯಿ ಅಹ್ಲಾವತ್ ಗ್ರೂಪ್​ ಕ್ಯಾಪ್ಟನ್​ ಪರ್​ಮಿಂದರ್​ ಅಂಟಿಲ್​, ಸಿಪಾಯಿ ನೀರಜ್​ ಅಹ್ಲಾವಟತ್​ ಈ 6 ಯೋಧರಿಗೆ ಶೌರ್ಯ ಪ್ರಶಸ್ತಿ ನೀಡಲಾಗ್ತಾಯಿದೆ.

Source: newsfirstlive.com Source link