ತಮಿಳುನಾಡಿನಲ್ಲಿ 9 ತಿಂಗಳಿನಿಂದ ಒಂದು ವರ್ಷದವರೆಗೂ ಹೆರಿಗೆ ರಜೆ

ತಮಿಳುನಾಡಿನಲ್ಲಿ 9 ತಿಂಗಳಿನಿಂದ ಒಂದು ವರ್ಷದವರೆಗೂ ಹೆರಿಗೆ ರಜೆ

ಚೆನ್ನೈ: ಸರ್ಕಾರಿ ಸೇವೆಯಲ್ಲಿರುವ ಮಹಿಳೆಯರ ಹೆರಿಗೆ ರಜೆಯನ್ನು ಆರು ತಿಂಗಳಿನಿಂದ ಒಂಬತ್ತು ತಿಂಗಳಿನಿಂದ ಒಂದು ವರ್ಷದವರೆಗೂ ಏರಿಕೆ ಮಾಡಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಆದೇಶ ಹೊರಡಿಸಿದೆ.

ವಿಧಾನಸಭಾ ಚುನಾವಣೆಗೆ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದಂತೆಯೇ ಈಗ ಮಹಿಳೆ ಹೆರಿಗೆ ರಜೆಯನ್ನು ಏರಿಸಲಾಗಿದೆ. ಈ ಕಾನೂನು ಜುಲೈ 1ನೇ ತಾರೀಕಿನಿಂದಲೇ ಜಾರಿಯಲ್ಲಿದ್ದು, ಸರ್ಕಾರ ಈಗ ಅಧಿಕೃತ ಘೋಷಣೆ ಮಾಡಿದೆ.

ಇನ್ನು, ಕೇವಲ ಎರಡು ಮಕ್ಕಳು ಆಗುವತನಕ ಮಾತ್ರ ಈ ಕಾನೂನು ಸರ್ಕಾರಿ ಸೇವೆಯಲ್ಲಿರುವ ಮಹಿಳೆಯರಿಗೆ ಅನ್ವಯವಾಗಲಿದೆ. ಎರಡು ಮಕ್ಕಳಾದ ಬಳಿಕ ಯಾವುದೇ ಕಾರಣಕ್ಕೂ ಹೆರಿಗೆ ರಜೆ ನೀಡಲಾಗುವುದಿಲ್ಲ ಎಂದು ಖಡಕ್​​ ಆಗಿ ಹೇಳಿದೆ.

blank

ಈ ಹಿಂದೆ 1980ರಿಂದ 2011 ರವರೆಗೂ ತಮಿಳುನಾಡು ಸರ್ಕಾರ ಮಹಿಳಾ ನೌಕರರಿಗೆ 90 ದಿನ ಹೆರಿಗೆ ರಜೆ ನೀಡುತ್ತಿತ್ತು. 2011ರಿಂದ ಜಯಲಲಿತಾ ನೇತೃತ್ವದ ಎಐಎಡಿಎಂಕೆ ನೇತೃತ್ವದ ಸರ್ಕಾರ ಮೂರು ತಿಂಗಳಿನಿಂದ ಆರು ತಿಂಗಳಿಗೆ ಹೆರಿಗೆ ರಜೆಯನ್ನು ಏರಿಕೆ ಮಾಡಿತ್ತು.

Source: newsfirstlive.com Source link