75ನೇ ಸ್ವಾತಂತ್ರ್ಯ ದಿನಾಚರಣೆ -ಅಮೃತ ಘಳಿಗೆಯ ಕೇಂದ್ರ ಬಿಂದುವಾದ ನೀರಜ್ ಚೋಪ್ರಾ

75ನೇ ಸ್ವಾತಂತ್ರ್ಯ ದಿನಾಚರಣೆ -ಅಮೃತ ಘಳಿಗೆಯ ಕೇಂದ್ರ ಬಿಂದುವಾದ ನೀರಜ್ ಚೋಪ್ರಾ

ದೇಶಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಆದರೆ ಕೊರೊನಾ ಸೋಂಕಿನ ಆತಂಕದ ನಡುವೆ ಸ್ವಾತಂತ್ರ್ಯೋತ್ಸವ ಉತ್ಸಾಹ ಅಲ್ಪಮಟ್ಟಿಗೆ ಕಡಿಮೆಯಾಗಿದೆ. ಕೊರೊನಾ ಮಧ್ಯೆಯೇ ಹಲವು ಕಾರ್ಯಕ್ರಮಗಳು ಜರುಗಲಿದ್ದು, ಇಂದಿನ ಕಾರ್ಯಕ್ರಮದ ಪ್ರಮುಖ ಕೇಂದ್ರವಾಗಿ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಕೇಂದ್ರ ಬಿಂದುವಾಗಿದ್ದಾರೆ.

blank

ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಚಿನ್ನದ ಹುಡುಗ ನೀರಜ್ ಚೋಪ್ರಾ ಸೇರಿದಂತೆ ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಭಾಗಿಯಾಗಿದ್ದ 32 ಪದಕ ವಿಜೇತರು ಹಾಗೂ 240 ಒಲಿಂಪಿಯನ್ಸ್ ಸೇರಿದಂತೆ ಕೊರೊನಾ ವಾರಿಯರ್ಸ್​​ ಭಾಗಿಯಾಗಲಿದ್ದು, ವಿಶೇಷ ಗೌರವ ಪಡೆಯಲಿದ್ದಾರೆ. ಅಲ್ಲದೇ ಇದೇ ಮೊದಲ ಬಾರಿಗೆ ಮೊದಲ ಬಾರಿಗೆ ಪ್ರಧಾನಮಂತ್ರಿಗಳು ರಾಷ್ಟ್ರ ಧ್ವಜವನ್ನು ಹಾರಿಸಿದ ತಕ್ಷಣ ಭಾರತೀಯ ವಾಯುಪಡೆಯ ಎರಡು Mi 17 1V ಹೆಲಿಕಾಪ್ಟರ್‌ಗಳಿಂದ ಪುಷ್ಪ ವೃಷ್ಟಿ ಸುರಿಯಲಾಗುತ್ತದೆ.

Source: newsfirstlive.com Source link