ಸ್ವಾತಂತ್ರ್ಯ ಸಂಭ್ರಮಕ್ಕೆ ಅಮೃತ ಘಳಿಗೆ -ಪ್ರಧಾನಿ ಮೋದಿಯಿಂದ ಧ್ವಜಾರೋಹಣ

ಸ್ವಾತಂತ್ರ್ಯ ಸಂಭ್ರಮಕ್ಕೆ ಅಮೃತ ಘಳಿಗೆ -ಪ್ರಧಾನಿ ಮೋದಿಯಿಂದ ಧ್ವಜಾರೋಹಣ

ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆ ಮೇಲೆ ದ್ವಜಾರೋಹಣ ನೆರವೇರಿಸಿದರು. ಕೊರೊನಾ ಹಿನ್ನೆಲೆ ಸರಳವಾಗಿ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಅವಕಾಶ ನೀಡದೆ ಗಣ್ಯರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ದೇಶದ ಗಣ್ಯರು ಸೇರಿ ಕೊರೊನಾ ವಾರಿಯರ್ಸ್​​ ಹಾಗೂ ಒಲಿಂಪಿಕ್ಸ್ ಪದಕ ವಿಜೇತರು, ಒಲಿಂಪಿಯನ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಮೊದಲ ಬಾರಿಗೆ ಪ್ರಧಾನಮಂತ್ರಿಗಳು ರಾಷ್ಟ್ರ ಧ್ವಜವನ್ನು ಹಾರಿಸಿದ ತಕ್ಷಣ ಭಾರತೀಯ ವಾಯುಪಡೆಯ ಎರಡು Mi 17 1V ಹೆಲಿಕಾಪ್ಟರ್‌ಗಳಿಂದ ಪುಷ್ಪ ವೃಷ್ಟಿ ಮಾಡಿ ಗೌರವ ಸೂಚಿಸಿದ್ದಾರೆ.

Source: newsfirstlive.com Source link