ದೆಹಲಿ ರಸ್ತೆಗಳಿಗೆ ಯೂರೋಪ್​​​​ ದರ್ಜೆಯ ಮರುವಿನ್ಯಾಸ; ಸಿಎಂ ಅರವಿಂದ್​​ ಕೇಜ್ರಿವಾಲ್​

ದೆಹಲಿ ರಸ್ತೆಗಳಿಗೆ ಯೂರೋಪ್​​​​ ದರ್ಜೆಯ ಮರುವಿನ್ಯಾಸ; ಸಿಎಂ ಅರವಿಂದ್​​ ಕೇಜ್ರಿವಾಲ್​

ನವದೆಹಲಿ: ದೆಹಲಿ ಸರ್ಕಾರ ನಗರದ 540 ಕಿ.ಮೀ ವಿಸ್ತಾರದ ರಸ್ತೆಗಳನ್ನು ಮರುವಿನ್ಯಾಸಗೊಳಿಸಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಕಟಿಸಿದ್ದಾರೆ. ನಗರದ ರಸ್ತೆಗಳನ್ನು ಯೂರೋಪ್​​ ದೇಶದ ಮಾನದಂಡಗಳೊಂದಿಗೆ ಮರುವಿನ್ಯಾಸಗೊಳಿಸಲಾಗುವುದು ಎಂದು ತಿಳಿಸಿದರು.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಅರವಿಂದ್​ ಕೇಜ್ರಿವಾಲ್​​, 540 ಕಿ.ಮೀ ವಿಸ್ತರದ ಹಲವು ಪಿಡಬ್ಲ್ಯೂಡಿ ರಸ್ತೆಗಳನ್ನು ಪೈಲಟ್ ಆಧಾರದ ಮೇಲೆ ಮರುವಿನ್ಯಾಸಗೊಳಿಸಲಾಗುವುದು. ಈಗಾಗಲೇ ಕಾಮಗಾರಿಗಳನ್ನು ಹಂಚಿಕೆ ಮಾಡಲಾಗಿದೆ ಎಂದರು.

ಇನ್ನು, ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಈ ವಿನ್ಯಾಸದಿಂದಾಗಿ ರಸ್ತೆಗಳು ಸುಂದರವಾಗಿ ಇರಲಿವೆ. ಇದು ಸಂಚಾರ ಸಮಸ್ಯೆಗಳಿಗೆ ಅಂತ್ಯ ಹಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಕೈಗೊಂಡ ಕ್ರಮಗಳೇನು? ಫೇಸ್​​​ಬುಕ್​​ಗೆ ಮಕ್ಕಳ ಹಕ್ಕು ಆಯೋಗದ ಸಮನ್ಸ್

ಯುರೋಪ್​​ ದೇಶದ ಮಾನದಂಡಗಳೊಂದಿಗೆ ಮರುವಿನ್ಯಾಸಗೊಳಿಸುವ ರಸ್ತೆಗಳ ಜಾಗವನ್ನು ಗರಿಷ್ಠ ಬಳಕೆ ಮಾಡಲಾಗುವುದು. ಉತ್ತಮ ರಸ್ತೆಗಳ ನಿರ್ಮಾಣ ಮಾತ್ರವಲ್ಲದೇ ಫುಟ್‌ಪಾತ್‌ಗಳನ್ನು ಮರುವಿನ್ಯಾಸಗೊಳಿಸಿ ಅಗಲಗೊಳಿಸಲಾಗುವುದು ಎಂದು ಹೇಳಿದರು.

Source: newsfirstlive.com Source link