8ನೇ ತರಗತಿಗೆ ಹೆಲಿಕಾಪ್ಟರ್ ತಯಾರಿಸಿದ ಯುವಕ ಹಾರುವ ಮುನ್ನ ಪ್ರಾಣಬಿಟ್ಟ ಕಥೆ

8ನೇ ತರಗತಿಗೆ ಹೆಲಿಕಾಪ್ಟರ್ ತಯಾರಿಸಿದ ಯುವಕ ಹಾರುವ ಮುನ್ನ ಪ್ರಾಣಬಿಟ್ಟ ಕಥೆ

ದೇಶದ 75 ನೇ ಸ್ವಾತಂತ್ರೋತ್ಸವ ದಿನಚರಣೆಗೆ ಆತನ ಬಳಿ ದೇಶಕ್ಕಾಗಿ ಒಂದು ಅತ್ಯುತ್ತಮ ಕೊಡುಗೆ ಇತ್ತು. ಅದಕ್ಕಾಗಿ ಅವನು ಹಗಲು ರಾತ್ರಿ ಶ್ರಮಿಸಿದ್ದನು. ಆದರೆ ವಿಧಿ ಅವನ ಕನಸಿನ ಮಹಾ ಗೋಡೆಯನ್ನು ತುಂಡು ತುಂಡಾಗಿಸಿದೆ. ಆಲ್ ಈಸ್ ವೆಲ್ ಎಂದು ಏನೋ ಸಾಧಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಒಬ್ಬ ಯುವಕನ ಕಥೆ ಇದು.

ಈ ಕನಸಿನ ಅಪಘಾತ ಸಾವಿನಲ್ಲಿ ಕೊನೆಗೊಂಡಿದೆ. ಆಲ್ ಈಸ್ ವೆಲ್.. ಈ ಮಾತುಗಳು ನೆನೆಪಿರ ಬೇಕಲ್ವಾ ನಿಮಗೆ.. ಇದನ್ನು ಮರೆಯಲು ಸಾಧ್ಯಾನಾ ? ಜ್ಞಾನ ಅನ್ನೋದು ಪಠ್ಯ ಪುಸ್ತಕದಲ್ಲಿಲ್ಲ.. ಪುಸ್ತಕದಲ್ಲಿರೋದು, ಕೇವಲ ಪದಗಳು, ಅದನ್ನು ಮಗ್ಗಿ ಹಾಕಿ ಕಲಿತರೆ ನಮಗೆ ಅದರಿಂದ ನಮ್ಮ ಜ್ಞಾನ ವೃದ್ಧಿಯಾಗುವುದಿಲ್ಲ.

ಬದಲಿಗೆ ನಮ್ಮ ಮೆಮೊರಿ ಪವರ್ ಹೆಚ್ಚಾಗುತ್ತಾದೆ. ವೆಲ್ ಟ್ರೈನ್ಡ್ ಅಂದ್ರೆನೇ ಬೇರೆ ವೆಲ್ ಎಜುಕೇಟೆಡ್ ಅಂದ್ರೇನೇ ಬೇರೆ. ಇದು ದೇಶದ ಯುವಕರನ್ನು ಹೆಚ್ಚು ಆಕರ್ಶಿತವನ್ನಾಗಿ ಮಾಡಿ.. ಹಲವರಲ್ಲಿ ಶಾಲೆ ಕಾಲೇಜುಗಳಲ್ಲಿ ಕಲಿಸುವ ಪಾಠ ನಿಜವಾದ ಜ್ಞಾನ ಸಂಪಾದನೆಯಲ್ಲ. ಎನ್ನುವ ಹೊಸ ಯೋಚನೆಯನ್ನು ತಂದು ಕೊಟ್ಟ ಸಿನಿಮಾ. 3 ಇಡಿಯಟ್ಸ್. ಇದಿಷ್ಟೆ ಅಲ್ಲ ಈ ಒಂದೇ ಸಿನಿಮಾದಲ್ಲಿ ಶಾಲೆಯಲ್ಲಿ ಪಾಠ ಮಾಡುವ ಬಗೆ ಹೇಗೆ, ಬದುಕುವ ಕಲೆ ಎಂದರೇನು. ನಾವೆಲ್ಲರೂ ಯಾವ ಕಾರಣಕ್ಕಾಗಿ ವಿಧ್ಯಾಭ್ಯಾಸ ಮಾಡುತ್ತಿದ್ದೇವೆ..? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ತಂದು ಕೊಟ್ಟ ಸಿನಿಮಾ.

ಈ ಸಿನಿಮಾದಿಂದ ಪ್ರೇರಿತರಾದವರು ಹಲವರು. ಅದೆಷ್ಟೋ ಜನ ಪಠ್ಯ ಪುಸ್ತಕದ ಜ್ಞಾನವನ್ನು ಹೊರತು ಪಡಿಸಿ… ವಿದ್ಯೆಯ ನಿಜವಾದ ಮಾರ್ಗವನ್ನು ಹುಡುಕಿಕೊಂಡರು. ಕೆಲಸವಿಲ್ಲದೆ, ನಪಾಸ್ ಆಗಿ ಮನಸೋತವರಿಗೆ ಈ ಸಿನಿಮಾ ಹೊಸ ಚಿಲುಮೆಯನ್ನು ನೀಡಿತ್ತು. ಬದುಕುವ ಕಲೆಯನ್ನ ಅಚ್ಚುಕಟ್ಟಾಗಿ ಕಟ್ಟಿಕೊಳ್ಳುವ ಹೊಸ ಮಾರ್ಗಗಳನ್ನು ತೋರಿಸಿತು. ಸೋತರು ಸಾಯಬಾರದು.. ಪ್ರಯತ್ನಗಳಿಂದ ಏನು ಬೇಕಾದರೂ ಮಾಡಲು ಸಾಧ್ಯ ಎನ್ನುವ ಚಿಂತನೆಗಳನ್ನು ಯುವಕರ ಮನಸಲ್ಲಿ ಬೇರೂರುವಂತೆ ಮಾಡಿತ್ತು.

ಈ ಸಿನಿಮಾದಿಂದ ಇಂದಿಗೂ ಅದೆಷ್ಟೊ ಯುವಕರು ಪ್ರೇರಿತರಾಗಿ., ಹೊಸ ಹೊಸ ಆವಿಷ್ಕಾರಕ್ಕೆ ಕೈಹಾಕಿದ್ದಾರೆ. ಕೆಲವರು ಯಶಸ್ವಿಯಾಗಿದ್ದಾರೆ.. ಒಂದಷ್ಟು ಜನ ಪ್ರಯತ್ನ ನಿಲ್ಲಿಸದೇ ದುಡಿಯತ್ತಿದ್ದಾರೆ. ಆದರೆ ಇಲ್ಲೊಬ್ಬ.. ತನ್ನ ಪ್ರಯತ್ನದ ಫಲದಿಂದ ಪ್ರಾಣವನ್ನೆ ಕೊಟ್ಟಿದ್ದಾನೆ.

ಅದೆ ಆತನ ಕನಸಾಗಿತ್ತು.. ಕೊನೆಗೆ ಅದರಲ್ಲೆ ಅವನ ಪ್ರಾಣವೂ ಹೋಯ್ತು. ಆ ಒಂದು ಹೆಲಿಕಾಫ್ಟರ್ ಅನ್ನು ಹಾರಿಸಿ ಬಿಡುವ ಉತ್ಸಾಹದಲ್ಲಿದ್ದ ಅವನು. ಅದು ಇನ್ನೇನು ಭೂಮಿ ಬಿಟ್ಟು ಹಾರಟಕ್ಕಿಳಿಯಬೇಕು.. ಅಷ್ಟರಲ್ಲಿ ಅವನ ಸಾವು ಬೆನ್ನ ಹಿಂದೆ ನಿಂತಂತೆ ಅವನ ಕನಸಿನ ಕೂಸಿಗೆ ಬಂದು ಅಪ್ಪಳಿಸಿತು. ಮುಂದೊಂದು ದಿನ ಅವನ ಸಾಧನೆಗೆ ಪ್ರೋತ್ಸಾಹ ಮಾತುಗಳನ್ನು ಆಲಿಸಲು ಆ ಹುಡುಗ ತಯಾರಾಗಿದ್ದ. ಭೂಮಿಯಿಂದ ಗಗನಕ್ಕೆ ತನ್ನ ಕೈಯಾರೆ ನಿರ್ಮಿಸಿದ ಆ ಹೆಲಿಕಾಪ್ಟರ್ ನಲ್ಲಿ ಹಾರಡಿ.. ಎಲ್ಲರಿಂದಲೂ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಕಾತುರನಾಗಿದ್ದ. ಆದರೆ ವಿಧಿ ಅವನನ್ನು ಈ ಸ್ಥಿತಿಗೆ ತಂದು ನಿಲ್ಲಿಸಿತ್ತು.

ಅದೆಷ್ಟೋ ಹೆಲಿಕಾಪ್ಟರ್ ದುರಂತಗಳನ್ನು ನಾವು ನೋಡಿದ್ದೆವೆ.. ಕಣ್ಣೆದುರೇ ಸುಟ್ಟು ಭಸ್ಮವಾದ ಸೇನಾ ವಿಮಾನಗಳನ್ನು ನೋಡಿದ್ದೆವೆ.. ಆದರೆ ಈ ಧಾರುಣ ಅಪಘಾತವನ್ನು ಮಾತ್ರ ಕಣ್ಣರಳಿಸಿ ನೋಡುವ ಹಾಗೆ ಇಲ್ಲ.. ಈ ಹೆಲಿಕಾಫ್ಟರ್ ನಲ್ಲಿ ಆ ಹುಡುಗನ ಕನಸಿತ್ತು.. ಸತತ 2 ವರ್ಷಗಳ ಶ್ರಮದ ಬೆವರಿತ್ತು .. ದೇಶವನ್ನು ಹೆಮ್ಮೆ ಪಡಿಸಬೇಕೆಂಬ ಆಸೆ ಇತ್ತು.. ಆಸೆಯನ್ನು ನೆರೆವೇರಿಸಿ ಬಿಡುವ ಸ್ಫೂರ್ತಿಯಿತ್ತು.., ಇದೆಲ್ಲದರ ಜೊತೆಗೆ ಆ ಹುಡುಗನ ಪ್ರಾಣವೂ ಅದರಲ್ಲೇ ಇದೆ ಅನ್ನೋದು ಆ ಗ್ರಾಮದಲ್ಲಿ ಯಾರು ಊಹಿಸಿರಲಿಲ್ಲ.

ಮಹಾರಾಷ್ಟ್ರದ ಮಹಗಾಂವ್ ತಾಲೂಕಿನ ಫುಲ್‍ಸಾವಂಗಿ ಎಂಬ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು. ಈ ಯುವಕನ ಹೆಸರು ಇಸ್ಲಾಂ ಶೇಖ್. ಕೇವಲ 24 ವರ್ಷ. ಮನೆಯವರೆಲ್ಲ ಈ ಹುಡುಗನನ್ನು ಮುನ್ನ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಇವನು ಎಂಟನೇ ತರಗತಿಯ ವರೆಗೂ ವಿಧ್ಯಾಭ್ಯಾಸ ಮಾಡಿ.. ತನ್ನ ವ್ಯಾಸಂಗವನ್ನು ಅರ್ಧಕ್ಕೆ ಕೈ ಬಿಟ್ಟಿದ್ದ. ಆದರೆ ಅವನಲ್ಲಿ ಉತ್ಸಾಹ ಕುಂದಿರಲಿಲ್ಲ.

ಇದಕ್ಕೆ ಪುಷ್ಟಿ ನೀಡುವುದಕ್ಕೆ ಅವನನ್ನು ಮತ್ತೆ ಉತ್ತೆಜಿಸಿದ್ದು ಆ ಒಂದು ಸಿನಿಮಾ. 3 ಇಡಿಯಟ್ಸ್ ಸಿನಿಮಾದ ಪ್ರತಿ ದೃಶ್ಯಾವಳಿಗಳೂ ಅವನಲ್ಲಿ ಸಾಕಷ್ಟು ಸ್ಫೂರ್ತಿ ತುಂಬಿದೆ. ಶಾಲೆ, ಪಠ್ಯದಿಂದ ಮಾತ್ರವಲ್ಲ ಎಲ್ಲರೂ ಜ್ಞಾನ ಸಂಪಾಧನೆಗೆ ಹೆಚ್ಚು ಮಹತ್ವ ಕೊಡಬೇಕು ಎನ್ನುವ ಅಮೀರ್ ಡೈಲಾಗ್ ಗಳು ಅವನನ್ನು ಹುರಿದುಂಬಿಸಿತ್ತು. ಇದೆ ಜೋಷ್ ನಲ್ಲಿ ತಾನು ಏನ್ನನ್ನಾದರು ಸಾಧಿಸಬೇಕು ಎಂದು ಯಾವಾಗಲೂ ಅದೇ ಮಾತುಗಳನ್ನಾಡುತ್ತಿದ್ದ ಮುನ್ನ. ಇದರಿಂದ ಅವನ ಗಲ್ಲಿಯಲ್ಲಿ ಅವನನ್ನು ಲೋಕಲ್ ಱಂಚು ಎನ್ನುವ ಅಡ್ಡ ಹೆಸರುಗಳನ್ನು ನೀಡಿದ್ದರು ಜನ.

ತನ್ನ ಕೈಯಾರೆ ದೇಶಕ್ಕೆನಾದರೂ ಕೊಡುಗೆ ನೀಡಲೇ ಬೇಕು ಎನ್ನುವ ಮನಸ್ಥಿತಿಯಲ್ಲಿದ್ದ ಮುನ್ನನಿಗೆ. ಆವನ ತಲೆಗೆ ಹೊಳೆದಿದ್ದು ಹೆಲಿಕಾಪ್ಟರ್ ನಿರ್ಮಾಣ. 3 ಇಡಿಯಟ್ಸ್ ಸಿನಿಮಾದಲ್ಲಿ ಱಂಚು ಅರ್ಧ ಪೂರ್ಣಗೊಂಡಿರುವ ಹಾರುವ ಹೆಲಿಕ್ಯಾಮ್​ನನ್ನು ಪೂರ್ಣಗೊಳಿಸಿ ಕಾಲೇಜ್ ವಿದ್ಯಾರ್ಥಿಗಳ ಜೊತೆ ಕುಣಿದು ಕುಪ್ಪಳಿಸಿದ್ದ. ಈ ಸಿನಿಮಾದಿಂದ ಸಂಪೂರ್ಣ ಪ್ರೇರಿತನಾಗಿದ್ದ ಮುನ್ನ.. ತನ್ನ ಬಳಿಯಲ್ಲೂ ಇದೆ ರೀತಿಯ ಪ್ಲಾನ್ ಇಟ್ಟುಕೊಂಡಿದ್ದ. ಹಾರುವ ಹೆಲಿ ಕ್ಯಾಮ್ ಅಲ್ಲ.. ಬದಲಿಗೆ ಒನ್ ಸೀಟರ್ ಹೆಲಿಕ್ಯಾಫ್ಟರ್.

ಎಂಟನೇ ತರಗತಿ ಬಿಟ್ಟ ಬಳಿಕ.., ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಆಗಿದ್ದ ಮುನ್ನನಿಗೆ ಅಲ್ಲಿ ಆಟೋಮೇಟಿಕ್ ಪಾರ್ಟ್ ಗಳ ಬಗ್ಗೆ ಹೆಚ್ಚು ಜ್ಞಾನವಿತ್ತು.. ಯಾವ ಇಂಜಿನ್ ಬಳಸಿದರೆ ಹಾರೋ ಪವರ್ ಬರುತ್ತೆ ಅನ್ನೋದರ ಬಗ್ಗೆ ಆತನಿಗೆ ಐಡಿಯಾ ಇತ್ತು.. ಜೊತೆಗೆ ವೆಲ್ಡಿಂಗ್ ಮಾಡುವುದನ್ನು ಆತ ಬಹಳವಾಗಿ ಅಭ್ಯಾಸ ಮಾಡಿದ್ದ. ಇಷ್ಟು ಜ್ಞಾನ ಸಾಕಿತ್ತು ಆತನಿಗೆ ಈ ಒಂದು ಹೆಲಿಕಾಫ್ಟರ್ ನಿರ್ಮಾಣ ಮಾಡಲು.

ಹೇಗಿತ್ತು ಗೊತ್ತಾ ಮುನ್ನನ ಹೆಲಿಕಾಫ್ಟರ್ ತಯಾರಿ ?
ಮಾರುತಿ 800 ಇಂಜಿನ್ ಬಳಸಿ ಮಿನಿ ಚಾಪರ್ ಸಿದ್ದ

ಮೆಕ್ಯಾನಿಕ್ ಶಾಪ್ ನಲ್ಲಿ ಹಗಲು ಹೊತ್ತಲ್ಲಿ, ಗ್ಯಾರೇಜ್ ಗೆ ಬರುವ ಗಾಡಿಗಳನ್ನು ರಿಪೇರಿ ಮಾಡಿ, ಅಷ್ಟೊ ಇಷ್ಟೋ ಹಣ ಸಂಪಾಧನೆ ಮಾಡುತ್ತಿದ್ದ ಮುನ್ನ. ರಾತ್ರಿ ಹೊತ್ತಲ್ಲಿ ತನ್ನ ಕನಸಿನ ಕೆಲಸಕ್ಕೆ ಕೈ ಹಾಕುತ್ತಿದ್ದ. ತನ್ನ ಸಂಪಾದನೆಯ ಅರ್ಧಭಾಗವನ್ನು ಈ ನಿರ್ಮಾಣ ಕಾರ್ಯಕ್ಕೆ ಬಳಸುತ್ತಿದ್ದ. ಯೂಟ್ಯೂಬ್ ನಲ್ಲಿ ಮಾಹಿತಿ ಕಲೆ ಹಾಕಿ ಸಿಂಗಲ್ ಸೀಟರ್ ಹೆಲಿಕಾಪ್ಟರ್ ತಯಾರಿಕೆಯ ಮಾರ್ಗವನ್ನು ಕಲೆ ಹಾಕಿದ್ದ. ಈ ಒಂದು ವಿಮಾನಕ್ಕೆ ಮಾರುತಿ 800 ಕಾರ್ ನ ಇಂಜಿನ್ ಬಳಸಿಕೊಂಡಿದ್ದ ಮುನ್ನ. ಸ್ಟೀಲ್ ಮತ್ತು ಆಲ್ಯೂಮಿನಿಯಂ ಶೀಟ್ ಗಳ ನೆರವಿನಿಂದ ಒಂದು ಮಾದರಿಯನ್ನು ಸಿದ್ಧಪಡಿಸಿ, ಅದರ ಮೇಲೆ ಮುನ್ನ ಹೆಲಿಕಾಫ್ಟರ್ ಎಂದು ಬರೆದು ಹೆಮ್ಮೆ ಪಡುತ್ತಿದ್ದ.

ಸ್ವಾತಂತ್ರೋತ್ಸವಕ್ಕೆ ದೇಶಕ್ಕೆ ಕೊಡುಗೆ ಎನ್ನುವ ಪ್ಲಾನ್
ಒಮ್ಮೆ ಹಾರಿ ಇಳಿದಿತ್ತು ಮುನ್ನನ ಹೆಲಿಕಾಪ್ಟರ್

ಈತನ ಕನಸನ್ನು ಒಮ್ಮೆ ನೋಡಿ.. ತನ್ನ ಕೈಯಾರೆ ತಯಾರಿಕೆಯಾಗಿದ್ದ ಆ ಹೆಲಿಕಾಫ್ಟರ್ ಅನ್ನು ಆತ ದೇಶದ 75 ನೇ ಸ್ವಾತಂತ್ರೋತ್ಸವದ ದಿನದಂದು ಹಾರಾಟ ನಡೆಸಿ, ದೇಶಕ್ಕೆ ಕೊಡುಗೆ ನೀಡಬೇಕೆಂದು ಬಯಸಿದ್ದ. ಇದಕ್ಕಾಗಿ ಹೆಲಿಕಾಫ್ಟರ್ ಮೇಲೆ ಭಾರತದ ಬಾವುಟದ ಚಿತ್ರವನ್ನು ಬರೆದಿದ್ದ. ಅಲ್ಲದೆ ಪ್ರಾಕ್ಟೀಸ್ ದಿನಗಳಲ್ಲಿ ಯಾವುದೇ ತೊಂದರೆ ಇಲ್ಲದೆ ಹೆಲಿಕಾಫ್ಟರ್ ಚಾಲನೆ ಮಾಡಿದ್ದ. ಹಾರುವ ಮುಂಚೆ ಅದೆಷ್ಟು ಬಾರಿ ಇಂಜಿನ್ ಪರೀಕ್ಷೆ, ವಿಂಗ್ಸ್ ಪರೀಕ್ಷೆ .. ಎನ್ನುವ ಹಾಗೆ ದಿನ ರಾತ್ರಿ ಈ ಕೆಲಸದಲ್ಲೆ ತೊಡಗಿದ್ದ ಮುನ್ನ. ಹಿಂದಿನ ದಿನ ರಾತ್ರಿ ಭೂಮಿ ಬಿಟ್ಟು 5 ಅಡಿಗಳ ಎತ್ತರಕ್ಕೆ ಹೆಲಿಕಾಫ್ಟರ್ ಹಾರಿತ್ತು ಎನ್ನುತ್ತಾರೆ ಆತನ ಸ್ನೇಹಿತರು. ಆದರೆ ಆ ರಾತ್ರಿ ಅವನ ಹಣೆಯಲ್ಲಿ ಈ ರೀತಿಯ ಸಾವು ಬರೆದಿತ್ತೋ ಏನೋ.. ತಾನು ತಯಾರು ಮಾಡಿದ ಆ ವಾಹನವೇ ಆತನ ಸಾವಿನ ಯಾತ್ರವಾಹನವಾಗಿತ್ತು.

ಪ್ರತಿದಿನ ಹೆಲ್ಮೆಟ್ ಧರಿಸುತ್ತಿದ್ದ ಮುನ್ನ
ಮುನ್ನ ದುರಂತದಲ್ಲಿ ಭಾಗಿಯಾಗಿದ್ದ ಸ್ನೇಹಿತರು

ಇದು ಮುನ್ನನಿಗೆ ನೀಡಿದ ಮುನ್ಸೂಚನೆ ಇರಬೇಕು. ಅವನ ಸ್ನೇಹಿತ ಹೇಳುವ ಪ್ರಕಾರ.., ಮುನ್ನ ಪ್ರತಿಬಾರಿ ಹೆಲಿಕಾಫ್ಟರ್ ಚಾಲನೆ ಮಾಡುವ ಮುನ್ನ, ತಲೆಗೆ ಹೆಲ್ಮೆಟ್ ಹಾಗೂ ಕಿವಿಗೆ ಹೆಡ್ ಫೋನ್ ಧರಿಸುತ್ತಿದ್ದನಂತೆ. ಆದರೆ ಕೊನೆಯ ಬಾರಿ ಹೆಲ್ಮೆಟ್ ಇಲ್ಲದೆ ಚಾಲಿಸಿ ಬಿಡ್ತೀನಿ ಎನ್ನುವ ಹುಮ್ಮಸಿನಲ್ಲಿ, ಚಾಲ್ತಿ ಮಾಡಿದ್ದಾನೆ. ಹೆಲಿಕಾಫ್ಟರ್ ವಿಂಗ್ಸ್ ಗಳು ನಿಧಾನವಾಗಿ ತಿರುಗಲು ಶುರು ಮಾಡಿ.. ಹಿಂದಿನ ರೆಕ್ಕೆಗೆ, ಮೇಲಿರುವ ರಕ್ಕೆ ತಾಗಿ.. ಹೆಲಿಕಾಫ್ಟರ್ ಅನ್ನು ಅಲುಗಾಡಿಸಿದೆ..

ಸೀಟ್ ಬೆಲ್ಟ್, ಹೆಲ್ಮೆಟ್ ಧರಿಸದೆ ಇದ್ದ ಮುನ್ನ ತೂಗಾಡಿ.. ಅದೆ ಹೆಲಿಕಾಪ್ಟರ್ ರೆಕ್ಕೆಗೆ ತಲೆ ಕೊಟ್ಟಿದ್ದಾನೆ.. ಚೂಪಾದ ರೆಕ್ಕೆ ಆತನ ತಲೆಯನ್ನು ತುಂಡರಿಸಿದೆ.. ನಿಧಾನವಾಗಿ ಆ ಜಾಗದಿಂದ ನೆಲಕ್ಕೆ ಜಾರಿದ್ದಾನೆ ಇಸ್ಲಾಂ.. ಈ ದೃಶ್ಯವನ್ನು ಕಣ್ಣಾರೆ ನೋಡಿದ ಆತನ ಸ್ನೇಹಿತರು ತಲೆ ಮೇಲೆ ಕೈ ಹೊತ್ತಿ ಕುಳಿತಿದ್ದಾರೆ.. ಆಸ್ಪತ್ರೆಗೆ ಧಾವಿಸುವ ಮುನ್ನ.. ಉಸಿರು ಚಲ್ಲಿದ್ದಾನೆ ಮುನ್ನ.

ಎಷ್ಟೋ ಜನರಿಗೆ ಕನಸು ಕಟ್ಟಿ ಕೊಟ್ಟ.. ಸ್ಫೂರ್ತಿ ತುಂಬಿದ 3 ಇಡಿಯಟ್ಸ್ ಸಿನಿಮಾದ ತಪ್ಪು ಏನು ಇಲ್ಲ. ಆದರೆ ಅದನ್ನು ಅರ್ಥೈಸಿಕೊಂಡ ಈ ಹುಡುಗನ ತಪ್ಪು.., ಸಿನಿಮಾದಿಂದ ಪ್ರೇರಿತನಾಗಿ, ಸಾಧಿಸ ಬಹುದು ಎನ್ನುವ ಹುಮ್ಮಸ್ಸಿನಲ್ಲಿ.. ತನ್ನಲ್ಲಿದ್ದ ಅಲ್ಪ ಜ್ಞಾನವನ್ನು ಇಲ್ಲಿ ಪ್ರಯೋಗಿಸಲು ಮುಂದಾಗಿದ್ದಾನೆ. ಆದರೆ ಯಾವ ಸಾಧನೆಗಾಗಲಿ ಅದರದೇ ಆದ ಸಮಯ.. ತಿಳುವಳಿಕೆ ಬೇರೇನೆ ಇರುತ್ತದೆ. ಎಷ್ಟೆ ಆದರೂ, ತನ್ನ ಕನಸನ್ನು ಸಾಕಾರಗೊಳಿಸಲು.. ತಾನು ಪಟ್ಟಿದ್ದ ಶ್ರಮವನ್ನು ಕಡೆಗಣಿಸುವಂತಿಲ್ಲ. ಈತ ಈಗಲೂ ತನ್ನ ಗ್ರಾಮದಲ್ಲಿ ಲೋಕಲ್ ಱಂಚೋವಾಗೆ ಉಳಿದಿದ್ದಾನೆ. ಅವನ ಇಷ್ಟು ದಿನಗಳ ಸಾಧನೆ.. ನೆನೆಪಿನಲ್ಲಿ ಉಳಿಯುವಂತೆ ಮಾಡಿ ಹೋಗಿದ್ದಾನೆ.

ಕೊನೆಯ ಬಾರಿ ಹೆಲಿಕಾಫ್ಟರ್ ಹಾರಿಸುವಾಗಲು, ಆತನ ಹೃದಯ ಬಡಿತಕ್ಕೆ ಇಸ್ಲಾಂ.. ಆಲ್ ಈಸ್ ವೆಲ್ ಅಂದನೋ ಬಿಟ್ನೋ.. ಅದು ಹಾರಾಡುವ ಮುನ್ನ.. ಮುನ್ನ ನಮ್ಮನ್ನು ಬಿಟ್ಟು ಬಹು ದೂರ ಹೋಗಿದ್ದಾನೆ. ಆತನ ಕನಸಿನ ಹೆಲಿಕಾಫ್ಟರ್ ಹಾಗೂ ಅವರ ಮನೆಯವರು ಮುನ್ನನಿಲ್ಲದೆ ಅನಾಥರಾಗಿದ್ದಾರೆ.

Source: newsfirstlive.com Source link