ಲಾರ್ಡ್ಸ್​​ ಅಂಗಳಕ್ಕೆ ನುಗ್ಗಿದ ಟೀಮ್ ಇಂಡಿಯಾದ 12ನೇ ಆಟಗಾರ!

ಲಾರ್ಡ್ಸ್​​ ಅಂಗಳಕ್ಕೆ ನುಗ್ಗಿದ ಟೀಮ್ ಇಂಡಿಯಾದ 12ನೇ ಆಟಗಾರ!

ಭಾರತ-ಇಂಗ್ಲೆಂಡ್ 2ನೇ ಟೆಸ್ಟ್ ಪಂದ್ಯದ 3ನೇ ದಿನದಾಟ ವಿಶೇಷ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಟೀಮ್ ಇಂಡಿಯಾ ಫೀಲ್ಡಿಂಗ್ ಮಾಡುತ್ತಿದ್ದಾಗ 12ನೇ ಆಟಗಾರನಾಗಿ ಇಂಗ್ಲೆಂಡ್ ಜಾರ್ವೋ ಎಂಬಾತ ಮೈದಾನಕ್ಕೆ ನುಗ್ಗಿದ್ದಾನೆ. ಟೀಮ್​​ ಇಂಡಿಯಾದ ಜರ್ಸಿ ಧರಿಸಿದ್ದ ಅಭಿಮಾನಿಯನ್ನ ಕಂಡ ಉಭಯ ತಂಡಗಳ ಆಟಗಾರರು ಕ್ಷಣಕಾಲ ದಂಗಾಗಿದ್ದಾರೆ.

ನೇರ ಪಿಚ್ ಬಳಿ ಬಂದಿರುವ ಅಭಿಮಾನಿ ಕಂಡು ಗೊಂದಲಕ್ಕೀಡದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಕರೆದೊಯ್ದರು. ಈ ವೇಳೆ ಮೈದಾನಕ್ಕೆ ಬಂದಿದ್ದೇಕೆ ಎಂದು ಪ್ರಶ್ನಿಸಿದ ಅಧಿಕಾರಿಗಳಿಗೆ, ಜರ್ಸಿ ತೋರಿಸಿ ತಾನು ಟೀಮ್ ಇಂಡಿಯಾ ಕ್ರಿಕೆಟಿಗ ಎಂದಿದ್ದಾನೆ. ಈ ಸಂದರ್ಭ ಪ್ರತ್ಯಕ್ಷವಾಗಿ ಕಾಣುತ್ತಿದ್ದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ನಕ್ಕು ನೀರಾಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖರ್ ವೈರಲ್ ಕೂಡ ಆಗ್ತಿದೆ. ಈ ಘಟನೆ ಫನ್ನಿ ಎನಿಸಿದರು ಕೋವಿಡ್ ಆತಂಕ ಹೆಚ್ಚಿಸುವಂತಿದೆ ಎಂದು ಕೆಲ ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ..

Source: newsfirstlive.com Source link