ಬೆಂಗಳೂರಲ್ಲೊಂದು ಶ್ವಾನಗಳಿಗೂ ಒಂದು ಮಾಲ್; ಇಲ್ಲೇ ಸ್ನಾನ, ಕೆಫೆ, ಕ್ಲಿನಿಕ್ ಎಲ್ಲವೂ ಇದೆ

ಬೆಂಗಳೂರಲ್ಲೊಂದು ಶ್ವಾನಗಳಿಗೂ ಒಂದು ಮಾಲ್; ಇಲ್ಲೇ ಸ್ನಾನ, ಕೆಫೆ, ಕ್ಲಿನಿಕ್ ಎಲ್ಲವೂ ಇದೆ

ಬೆಂಗಳೂರು: ಬಹುಶಃ ಸಿಲಿಕಾನ್‌ ಸಿಟಿಯಲ್ಲಿರುವಷ್ಟು ಡಾಗ್‌ ಲವರ್ಸ್‌ ಬೇರೆ ಸಿಟಿನಲ್ಲಿ ಇಲ್ವೆನೋ. ಅಷ್ಟೊಂದು ಕ್ರೇಜ್‌ ಡಾಗ್‌ಗಳ ಬಗ್ಗೆ ಇಲ್ಲಿನ ಜನ್ರಿಗೆ. ಹಾಗಂತ ಅವುಗಳನ್ನ ಸಾಕೋದು ಈಸಿನಾ.. ಅದ್ರ ಫುಡ್‌, ಬಾತ್‌, ಟ್ರೀಟ್ಮೆಂಟ್‌ ಎಲ್ಲಾ ಆಗ್ಬೇಕು. ಇದೆಲ್ಲಾ ಆಗ್ಬೇಕು ಅಂದ್ರೆ ಹತ್ತಾರು ಕಡೆ ಹೋಗ್ಬೇಕು. ಆದ್ರೆ ಇನ್ಮುಂದೆ ನಗರದಲ್ಲಿರೋರಿಗೆ ಆ ಟೆನ್ಶನ್ನೇ ಇಲ್ಲ. ಬೆಂಗ್ಳೂರಲ್ಲಿ ಪ್ರಪ್ರಥಮ ಬಾರಿಗೆ ಶುರುವಾಗಿದೆ ಪೆಟ್‌ ಮಾಲ್‌.

blank

ಅಬ್ಬಬ್ಬಾ.. ಏನ್‌ ಸೂಪರ್‌ ಆಗಿದೆ.. ಎಷ್ಟೊಂದು ಐಟಮ್ಸ್‌ ನೋಡಿ.. ನಿಮ್ಮ ಪ್ರೀತಿಯ ಡಾಗಿಗೆ ಹಾಕೋ ಫುಡ್‌ನಿಂದ ಹಿಡಿದು.. ಬಟ್ಟೆ.. ಸ್ಪಾ.. ಟಾಯ್ಸ್‌.. ಆಕ್ಸೆಸರೀಸ್‌… ಏನಿಲ್ಲ ಕೇಳಿ.. ಬೆಂಗಳೂರಿನಲ್ಲಿರೋ ಶ್ವಾನ ಪ್ರಿಯರು ಬರ್ಲೇಬೇಕಾದ ಶಾಪ್‌ ಇದು.. ಬೆಂಗಳೂರಿನಲ್ಲಿ ಫಸ್ಟ್‌ ಎವರ್‌ ಓಪನ್‌ ಆಗಿರೋ ಪೆಟ್‌ ಮಾಲ್‌..

ಕ್ಯೂಟ್ ಕ್ಯೂಟ್ ಪಪ್ಪಿಗಳಿಗೆ ಚೆಂದದ ಟ್ಯಾಗ್ ಹಾಕ್ಬೇಕು, ಚೈನ್ಸ್ ಹಾಕ್ಬೇಕು, ಚೆಂದ ಡಿಸೈನ್ ಮಾಡಿಸ್ಬೇಕು ಅನ್ನೋದು ಎಲ್ಲಾ ಡಾಗ್‌ ಪ್ರಿಯರ ಬಯಕೆ. ಇಂಥಾ ಡಾಗ್ ಲವರ್ಸ್​ಗೋಸ್ಕರವೇ ಇವತ್ತು ಹೆಚ್​​ಎಸ್​ಆರ್ ಲೇಔಟ್​ನ ನಾಲ್ಕನೇ ಸೆಕ್ಟರ್​​ನಲ್ಲಿ ಓಪನ್ ಆಗಿದೆ ಪಾಸ್‌ ಆನ್ ಕಾಲರ್ಸ್. ಪ್ಯೂರ್‌ಲೀ ಪೆಟ್‌ಗಳಿಗೆ ಅಂತಾನೇ ಇರೋ ಶಾಪಿಂಗ್‌ ಮಾಲ್‌. ಉದ್ಯಮಿ ಡಾ. ಸುಧಾಮೂರ್ತಿ ವಿಡಿಯೋ ಕಾಲ್‌ ಮೂಲಕ ಈ ಪಾಸ್‌ ಆನ್‌ ಸ್ಟೋರ್‌ನ ಉದ್ಘಾಟನೆ ಮಾಡಿ ಶುಭ ಹಾರೈಸಿದ್ರು.

blank

ಈ ಪಾಸ್‌ ಆನ್ ಕಾಲರ್ಸ್ ಸ್ಟೋರ್​​ನಲ್ಲಿ ಶ್ವಾನಗಳಿಗೆ ಬೇಕಾದ ಭಿನ್ನ ವಿಭಿನ್ನ ಬೆಲ್ಟ್​ಗಳು, ನೇಮ್ ಟ್ಯಾಗ್​​ಗಳು, ಬೆಸ್ಟ್ ಫುಡ್ ಸಹ ಸಿಗುತ್ತವೆ. ಅಷ್ಟೇ ಅಲ್ಲ, ಇದೇ ಸ್ಟೋರ್​​ನಲ್ಲಿ ಶ್ವಾನಗಳಿಗೆ ಬಾಥಿಂಗ್ ಹಾಗೂ ಚಿಕಿತ್ಸೆ ನೀಡೋಕು ಕ್ಲಿನಿಕ್ ತೆರೆಯಲಾಗಿದೆ.

ಈ ಪಾಸ್‌ ಆನ್‌ ಕಾಲರ್ಸ್ ಸ್ಟೋರ್​​ನಲ್ಲಿ ನಾಯಿ ಮರಿಗಳಿಗಾಗಿ ಆಟಿಕೆಗಳೂ ಸಿಗುತ್ತವೆ. ಡಿಫ್ರೆಂಟ್, ಡಿಫ್ರೆಂಟ್ ಕಾಲರ್ಸ್, ಶೂಸ್, ಐಡಿ ಟ್ಯಾಗ್ಸ್ ಲಭ್ಯವಿದೆ. ರೇನ್ ಕೋಟ್ಸ್ ಸಹ ನಾಯಿ ಮರಿಗಳಿಗೆ ಲಭ್ಯವಿದ್ದು, ಇವೆಲ್ಲವೂ ಅಮೆರಿಕಾ ಮೂಲದ ಪ್ರಾಡೆಕ್ಟ್​ಗಳಾಗಿವೆ.

blank

ನಾಯಿಮರಿಗಳಿಗೆ ಗೋಲ್ಡ್ ಪ್ಲೇಟ್ ನೇಮ್ ಟ್ಯಾಗ್ ಕೂಡ ಸಿಗುತ್ತದೆ. ಪಾವ್ಸ್ ಆನ್ ಕಾಲರ್ಸ್ ಸ್ಟೋರ್​​ನಲ್ಲಿ ಪೆಟ್ ಕೆಫೆ ಲಭ್ಯವಿದ್ದು, ನಾಯಿಗಳಿಗೆ ಬೇಕಾದ ಪ್ರೊಟೀನ್ ಫುಡ್ ದೊರೆಯುತ್ತವೆ. ಆರ್ಗ್ಯಾನಿಕ್ ಫುಡ್, ಡ್ರೈಫುಡ್, ವೆಟ್ ಫುಡ್ ಸಹ ಸಿಗುತ್ತವೆ. ಒಟ್ಟಾರೆಯಾಗಿ ನಿಮ್ಮ ಶ್ವಾನಕ್ಕೆ ಏನೆಲ್ಲಾ ಬೇಕೋ ಅದೆಲ್ಲವೂ ಒಂದೇ ಸೂರಿನಡಿ ಈ ಪೆಟ್‌ ಮಾಲ್‌ನಲ್ಲಿ ಲಭ್ಯ.

blank

ಬೆಂಗಳೂರಿನಲ್ಲಿ ಇಂಥಾದ್ದೊಂದು ಪೆಟ್‌ ಮಾಲ್‌ ಇದೇ ಮೊದಲು. ಜೊತೆಗೆ ಎಲ್ಲಾ ಫೆಸಿಲಿಟಿ ಜೊತೆ ಶ್ವಾನ ಪ್ರಿಯರ ಗಮನ ಸೆಳೀತಿದೆ. ಅಟ್ರ್ಯಾಕ್ಟ್ ಮಾಡ್ತಿದೆ. ನಿಮ್ಮ ಪೆಟ್‌ಗೆ ಏನಾದ್ರೂ ಶಾಪಿಂಗ್‌ ಮಾಡ್ಬೇಕು ಅಂದ್ರೆ ಪಾಸ್‌ ಆನ್‌ ಕಾಲರ್ಸ್‌ ಬಹುಶಃ ಬೆಸ್ಟ್‌ ಚಾಯ್ಸ್‌.

Source: newsfirstlive.com Source link