ನನ್ನ ಬಗೆಗಿನ ಅನುಮಾನದ ಮಾತುಗಳು, ಟೀಕೆ ನನ್ನ ಪಾಲಿಗೆ ಆಶೀರ್ವಾದ -ಸಿಎಂ ಬೊಮ್ಮಾಯಿ

ನನ್ನ ಬಗೆಗಿನ ಅನುಮಾನದ ಮಾತುಗಳು, ಟೀಕೆ ನನ್ನ ಪಾಲಿಗೆ ಆಶೀರ್ವಾದ -ಸಿಎಂ ಬೊಮ್ಮಾಯಿ

ಬೆಂಗಳೂರು: ನಾಡಿನಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ವೇಳೆ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಇಂದಿನಿಂದ ನವ ಕರ್ನಾಟಕ ನಿರ್ಮಾಣ ಆಗಲಿದೆ. ನಾನಿಂದು ಈ ವೇದಿಕೆ ಮೂಲಕ ಘೋಷಣೆ ಮಾಡ್ತಿದ್ದೇನೆ ಎಂದು ಹೇಳಿದರು.

ರಾಜ್ಯದ ಜನತೆಯನ್ನು ಉದ್ದೇಶಿ ಮಾತನಾಡುವ ವೇಳೆ ತಮ್ಮ ಸರ್ಕಾರದ ಆಡಳಿತದ ಮುನ್ನೋಟವನ್ನು ತಿಳಿಸಿದ ಬಸವರಾಜ್ ಬೊಮ್ಮಾಯಿ‌ ಅವರು, ಇಂದಿನಿಂದ ನವ ಕರ್ನಾಟಕ ನಿರ್ಮಾಣ ಆಗಲಿದೆ. ನಾನಿಂದು ಈ ವೇದಿಕೆ ಮೂಲಕ ಘೋಷಣೆ ಮಾಡ್ತಿದ್ದೇನೆ. ಪ್ರಧಾನಿ ಮೋದಿ ನವ ಭಾರತದ ಕನಸಿಗಾಗಿ ಹಲವು ಯೋಜನೆ ತಂದಿದ್ದಾರೆ. ಕೃಷಿಕ್ ಸಮ್ಮಾನ್ ಯೋಜನೆ, ಆಯುಷ್ಮಾನ್ ಭಾರತ್, ಆತ್ಮನಿರ್ಭರ ಭಾರತ, ಸರ್ವಶಿಕ್ಷಣ ಅಭಿಯಾನ, ಸರ್ವರಿಗೂ ಆರೋಗ್ಯದ ಅಭಿಯಾನ ಹೀಗೆ ಹಲವಾರು ಯೋಜನೆಗಳ ಪ್ರಧಾನಿ ಮೋದಿ ನೀಡಿದ್ದಾರೆ. ಪ್ರಧಾನಿ ಮೋದಿಯವರ ಕನಸಿನಂತೆ ನಾವೂ ಸಹ ಕರ್ನಾಟಕದಲ್ಲಿ ನವ ಕರ್ನಾಟಕ ನಿರ್ಮಾಣ ಮಾಡಲಿದ್ದೇವೆ.

blank

ದೇವರು ರೈತನ ಶ್ರಮದಲ್ಲಿದ್ದಾನೆ, ಕೂಲಿ ಕಾರ್ಮಿಕನ ಬೆವರಿನಲ್ಲಿದ್ದಾನೆ ಅಂತ ರವೀಂದ್ರನಾಥ ಠಾಗೋರ್ ಹೇಳಿದ್ರು, ಅದೇ ರೀತಿಯಲ್ಲಿ ನಮ್ಮ ಕಾರ್ಯಕ್ರಮ ಇರಲಿದೆ. ರೂಲಿಂಗ್ ಈಸ್ ಡಿಫರೆಂಟ್ ಅಡ್ಮಿನಿಸ್ಟ್ರೇಶನ್ ಈಸ್ ಡಿಫರೆಂಟ್. ರೂಲಿಂಗ್ ಈಸ್ ಡಿಫರೆಂಟ್ ಅಡ್ಮಿನಿಸ್ಟ್ರೇಶನ್ ಈಸ್ ಡಿಫರೆಂಟ್. ರೂಲ್ ಮಾಡೋರು ರೂಲ್ ಮಾಡ್ತಿದ್ದಾರೆ, ಅಡ್ಮಿನಿಸ್ಟ್ರೇಶನ್ ಮಾಡೋರು ಅಡ್ಮಿನಿಸ್ಟ್ರೇಶನ್ ಮಾಡ್ತಿದ್ದಾರೆ. ರಾಜಕೀಯ ಇಚ್ಛಾಶಕ್ತಿಯ ನಾಯಕತ್ವ ನೀಡಲಿದ್ದೇನೆ. ಮೈ ಗೌರ್ಮೆಂಟ್ ಈಸ್ ಡಿಲಿವೆರಿ ಓರಿಯೆಂಟೆಂಡ್. ನನ್ನ ಕನ್ನಡ ನಾಡಿನ ಕಟ್ಟಕಡೆಯ ಕುಟುಂಬ, ಶ್ರಮಿಕರ, ಹಿಂದುಳಿದ, ದಲಿತ, ಅಲ್ಪಸಂಖ್ಯಾತ, ಸೇರಿದಂತೆ ಪ್ರತಿಯೊಬ್ಬರ ಏಳಿಗೆಯ ಗುರಿಯೊಂದಿಗೆ ಕೆಲಸ ಮಾಡ್ತಿದ್ದೇನೆ.

ನನಗೆ 20 ತಿಂಗಳು ಮಾತ್ರ ಅಧಿಕಾರವಿದೆ…
ಕೇವಲ 20 ತಿಂಗಳ ಅವಧಿ ಮಾತ್ರ ನನಗಿದೆ ಎಂಬುವುದು ನನಗೆ ಅರಿವಿದೆ. 20 ತಿಂಗಳಲ್ಲೇ ಫಲಿತಾಂಶ ಕೊಡುವ ಯೋಜನೆಗಳ ಕೊಡುತ್ತೇನೆ. ಜನರ ಸುತ್ತಲೂ ಅಭಿವೃದ್ಧಿ ಇರಬೇಕು, ಅಭಿವೃದ್ಧಿ ಸುತ್ತ ಜನರು ಸುತ್ತುವಂತೆ ಆಗಬಾರದು. ಜನಸ್ನೇಹಿ ಆಡಳಿತವೇ ನನ್ನ ಆದ್ಯತೆ. 20 ತಿಂಗಳ ಅವಧಿ ಇರೋ ಹಿನ್ನೆಲೆಯಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆಗಳ ಪ್ರತ್ಯೇಕವಾಗಿ ರೂಪಿಸುವೆ. ನನ್ನ ಬಗೆಗಿನ ಅನುಮಾನದ ಮಾತುಗಳು, ಟೀಕೆ ನನ್ನ ಪಾಲಿಗೆ ಆಶೀರ್ವಾದ ಎಂದರು.

ಕೊರೋನಾದಿಂದ ಜನ ಬಸವಳಿದಿದ್ದಾರೆ. ಕೊರೋನಾ ಒಂದು ಸವಾಲು. ಈ ಸಂದರ್ಭದಲ್ಲಿ ನಮ್ಮ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರ ನೆನೆಯುವೆ. ಅವರು ಕೊರೊನಾ ಸಂದರ್ಭದಲ್ಲಿ ಶ್ರಮವಹಿಸಿ ಕೆಲಸ ಮಾಡಿದರು. ಅವರಿಗೆ ಈ ವೇದಿಕೆ ಮೂಲಕ ಅಭಿನಂದನೆ ಸಲ್ಲಿಸುವೆ. ಜನರ ಸುರಕ್ಷೆಗಾಗಿ ಕೆಲಸ ಮಾಡ್ತೇವೆ, ಈ ಅಭಯ ನಾನು ರಾಜ್ಯದ ಜನರಿಗೆ ನೀಡುವೆ. ನಮ್ಮ ಸರ್ಕಾರ ಬಂದ ಕೂಡಲೇ ಪ್ರವಾಹ ಬಂತು, ಪರಿಹಾರ ನೀಡುವ ಕೆಲಸ ಮಾಡ್ತಿದ್ದೇವೆ. ನಮ್ಮ ಸರ್ಕಾರ ಬಂದ ಕೂಡಲೇ ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡಿದ್ದೇವೆ. ವಿಧವಾ ವೇತನ, ಅಂಗವಿಕಲರ ವೇತನ, ಸಂಧ್ಯಾಸುರಕ್ಷಾ ವೇತನ ಹೆಚ್ಚಳ ಮಾಡಿದ್ದೇವೆ. ನನ್ನ ಸರ್ಕಾರ ಹೆಣ್ಣುಮಕ್ಕಳಿಗೆ ಆರ್ಥಿಕ, ಸಾಮಾಜಿಕ ಸುರಕ್ಷತೆಯ ಭರವಸೆ ನೀಡಲಿದೆ. ನಾಡು ಕಟ್ಟಲು ತಾಯಂದಿರ ಶಕ್ತಿ ಬಹಳ ಇದೆ, ಅದನ್ನು ಈವರೆಗೂ ಬಳಸಿಕೊಂಡಿರಲಿಲ್ಲ, ನನ್ನ ಸರ್ಕಾರ ತಾಯಂದಿರ, ಮಹಿಳೆಯರ, ಸ್ತ್ರೀಶಕ್ತಿಯ ನಾಡು ಕಟ್ಟಲು ಬಳಸಿಕೊಳ್ಳಲಿದೆ.

ಮೇಕೆದಾಟು ಹಾಗೂ ಮಹದಾಯಿ ಯೋಜನೆ ಆರಂಭಿಸಿ ಪೂರ್ಣಗೊಳಿಸಬೇಕಿದೆ. ಮೇಕೆದಾಟು ಯೋಜನೆಗೆ ಕೇಂದ್ರದ ಜೊತೆ ಮಾತನಾಡಿ ಪರವಾನಗಿ ಪಡೆದು ಆದಷ್ಟು ಬೇಗ ಜಾರಿ ಮಾಡ್ತೇವೆ. ಬದಲಾವಣೆಯನ್ನು ಶೀಘ್ರವೇ, ಕೆಲ ದಿನಗಳಲ್ಲೇ ನೋಡುತ್ತೀರಿ ಎಂದರು.

Source: newsfirstlive.com Source link