ಅಮೃತ ಮಹೋತ್ಸವದ ವೇಳೆ ಅಮೃತ ಯೋಜನೆಗಳನ್ನ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

ಅಮೃತ ಮಹೋತ್ಸವದ ವೇಳೆ ಅಮೃತ ಯೋಜನೆಗಳನ್ನ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಅಮೃತ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ ನೂತನ ಯೋಜನೆಗಳು..

 1. ಅಮೃತ ಗ್ರಾಮ ಪಂಚಾಯತಿ ಯೋಜನೆ; 750 ಪಂಚಾಯತ್ ನ ಪ್ರತಿ ಮನೆಗೆ ಕುಡಿಯುವ ನೀರು, ಬೀದಿ ದೀಪ, ಡಿಜಿಟಲ್ ಲೈಬ್ರರಿ
 2. ಅಮೃತ ಗ್ರಾಮೀಣ ವಸತಿ ಯೋಜನೆ: 750 ಪಂಚಾಯತ್ ನ ವಸತಿ ರಹಿತರಿಗೆ ವಸತಿ ಯೋಜನೆ ಜಾರಿ
 3. ಅಮೃತ ರೈತ ಉತ್ಪಾದಕ ಯೋಜನೆ; 750 ಪಂಚಾಯತ್ ನ ರೈತರು, ನೇಕಾರರು, ಮೀನುಗಾರರ ಉತ್ಪಾದನೆಯ ಮಾರಟಕ್ಕೆ 750 ರೈತರು, ನೇಕಾರರು, ಮೀನುಗಾರರಿಗೆ 30 ಲಕ್ಷ ವೆಚ್ಚದಲ್ಲಿ ಮಾರಾಟ ಕೇಂದ್ರ ಸ್ಥಾಪನೆ
 4. ಅಮೃತ ನಿರ್ಮಲ ನಗರ ಯೋಜನೆ : ಆಯ್ದ 75 ನಗರ ಸ್ಥಳೀಯ ಸಂಸ್ಥೆಗಳಿಗೆ ನೈರ್ಮಲ್ಯ ಹಾಗೂ ಸ್ವಚ್ಛತೆ ಯೋಜನೆ
 5. ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆ; ಮೈಕ್ರೋ ಎಂಟರ್ ಪ್ರೈಸಸ್ 7500 ಸ್ವಸಹಾಯ ಸಂಸ್ಥೆಗಳಿಗೆ ತಲಾ 1 ಲಕ್ಷ ಸೀಡ್ ಮನಿ ನೀಡಲಾಗುವುದು
 6. ಆರೋಗ್ಯ ಮೂಲ ಸೌಕರ್ಯ ಉನ್ನತೀಕರಣ ಯೋಜನೆ.. 750 ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ
 7. ಕೌಶಲ್ಯ ತರಬೇತಿ ಯೋಜನೆ.. 75 ಸಾವಿರ ಯುವ ಯುವತಿಯರಿಗೆ ಕೌಶಲ್ಯ ತರಬೇತಿ ಯೋಜನೆ
 8. 75 ಸ್ಮಾರ್ಟ್ ಉದ್ದಿಮೆಗಳ ಸ್ಟಾರ್ಟಪ್ ಗೆ ಉತ್ತೇಜನ
 9. ಅಮೃತ ಕ್ರೀಡಾ ಯೋಜನೆ : 75 ಕ್ರೀಡಾಪಟುಗಳ ದತ್ತು ಪಡೆದು ಅವರಿಗೆ ತರಬೇತಿ ನೀಡಿ ಪ್ಯಾರಿಸ್ ಒಲಂಪಿಕ್ ಗೆ ಕಳಿಸಲು ದತ್ತು ಯೋಜನೆ
 10. 750 ಅಂಗನವಾಡಿಗಳ ಅಭಿವೃದ್ಧಿ ಯೋಜನೆ
 11. ಅಮೃತ ಶಾಲಾ ಸೌಲಭ್ಯ ಯೋಜನೆ
 12. ಅಮೃತ ಸಮುದಾಯ ಅಭಿವೃದ್ಧಿ ಯೋಜನೆ
 13. ಬೆಂಗಳೂರಿನಲ್ಲಿ 75 ಸ್ಲಂ, ಕೆರೆ ಹಾಗೂ ಉದ್ಯಾನ ಅಭಿವೃದ್ಧಿ ಯೋಜನೆ

ಇದನ್ನೂ ಓದಿ: ನನ್ನ ಬಗೆಗಿನ ಅನುಮಾನದ ಮಾತುಗಳು, ಟೀಕೆ ನನ್ನ ಪಾಲಿಗೆ ಆಶೀರ್ವಾದ -ಸಿಎಂ ಬೊಮ್ಮಾಯಿ

Source: newsfirstlive.com Source link