‘ಹುತಾತ್ಮರಾದ ಸೋನಿಯಾ ಗಾಂಧಿ.. ಸಾರಿ ಇಂದಿರಾ ಗಾಂಧಿ’ -ಭಾಷಣದ ವೇಳೆ ಡಿಕೆಎಸ್​ ಎಡವಟ್ಟು

‘ಹುತಾತ್ಮರಾದ ಸೋನಿಯಾ ಗಾಂಧಿ.. ಸಾರಿ ಇಂದಿರಾ ಗಾಂಧಿ’ -ಭಾಷಣದ ವೇಳೆ ಡಿಕೆಎಸ್​ ಎಡವಟ್ಟು

ಬೆಂಗಳೂರು: ನಗರದ ಕಾಂಗ್ರೆಸ್​ ಭವನದಲ್ಲಿ 75 ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಮುಖಂಡರು, ಇತರೆ ನಾಯಕರು ಭಾಗವಹಿಸಿದ್ದರು..ಈ ವೇಳೆ ಭಾಷಣ ಮಾಡುತ್ತಿದ್ದ ಡಿ. ಕೆ.ಶಿವಕುಮಾರ್​ ಎಡವಟ್ಟುವೊಂದನ್ನು ಮಾಡಿಕೊಂಡಿದ್ದಾರೆ.

ಧ್ವಜಾರೋಹಣ ನೆರವೇರಿದ ಬಳಿಕ ಭಾಷಣಕ್ಕೆ ಆಗಮಿಸಿದ ಡಿ.ಕೆ ಶಿವಕುಮಾರ್​ ಮಾತನಾಡುವ ವೇಳೆಯಲ್ಲಿ ಹುತಾತ್ಮರಾದ ಇಂದಿರಾಗಾಂಧಿ ಎನ್ನುವ ಬದಲು, ಹುತಾತ್ಮರಾದ ಸೋನಿಯಾ ಗಾಂಧಿ ಎಂದು ಹೇಳಿ ಪೇಚಿಗೆ ಸಿಲುಕಿದ್ದಾರೆ.. ಬಳಿಕ ಎಚ್ಚೆತ್ತುಕೊಂಡ ಅವರು ಸಾರಿ, ಸಾರಿ ಎಂದು ಹೇಳಿ ತಮ್ಮ ತಪ್ಪನ್ನು ತಿದ್ದಿಕೊಂಡು ಭಾಷಣ ಮುಂದುವರೆಸಿದ್ದರು.

blank

ದೇಶ ಕಟ್ಟುವ ವೇಳೆ ಟೀಕೆ ಎದುರಾದರೂ ಸ್ವಾತಂತ್ರ್ಯಕ್ಕಾಗಿ ಹಿರಿಯರು ಹೋರಾಟ ನಡೆಸಿದ್ದಾರೆ. ಈಗ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನ ಬುಡಮೇಲು ಮಾಡಲಾಗುತ್ತಿದೆ. ಇದರ ವಿರುದ್ಧ ಹೋರಾಟ ಮಾಡಬೇಕಿದೆ. ಸ್ವಾತಂತ್ರ್ಯ ಹೋರಾಟವನ್ನ ಜಾತಿ, ಧರ್ಮದ ಆಧಾರದ ಮೇಲೆ ಬಳಸಿಕೊಳ್ಳಲಾಗುತ್ತಿದೆ. ಇದು ದುರ್ದೈವವೇ ಸರಿ. ದೇಶವನ್ನ ಕಟ್ಟಿದ ಮಹನಿಯರ ಹೆಸರನ್ನ ಬದಲಿಸುವ ಚರ್ಚೆ ನಡೆಯುತ್ತಿದೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಲು ಷಡ್ಯಂತ್ರ ನಡೆದಿದೆ. ಮಹನೀಯರ ಹೆಸರು ಬದಲಿಸಿದರೂ ಅವರು ಜನಮಾನಾದಲ್ಲಿ ಚಿರಸ್ಥಾಯಿ ಅನ್ನೋದನ್ನ ಮರೆಯಬಾರದು. ನಮ್ಮದು ಕಟ್ಟುವ ಪರಂಪರೆ.

blank

ಬಿಜೆಪಿಯವರದ್ದು ಉರುಳಿಸುವ ಪರಂಪರೆ. ಬಿಜೆಪಿ ಸಚಿವರು ಜನರ ಬಳಿಗೆ ಹೋಗಲಿಲ್ಲ. ಸಂಕಷ್ಟದಲ್ಲಿರುವ ಜನರ ಸಮಸ್ಯೆ ಆಲಿಸುವ ಕೆಲಸ ಮಾಡಲಿಲ್ಲ. ನಮ್ಮ‌ ಕಾರ್ಯಕರ್ತರು ಮನೆ ಮನೆಗೆ ಹೋಗಿ ಬಂದಿದ್ದಾರೆ. ಇಡೀ ದೇಶಕ್ಕೆ ಮಾದರಿಯಾಗುವಂತಹ ಕೆಲಸವನ್ನ ನಮ್ಮ ಕಾರ್ಯಕರ್ತರು ಮಾಡಿದ್ದಾರೆ. ಎಲ್ಲರೂ ಸೇರಿ ಪಕ್ಷವನ್ನ ಸಂಘಟಿಸೋಣ. ಒಗ್ಗಟ್ಟಿನಿಂದ ಸಾಗೋಣ. ಮತ್ತೆ ಪಕ್ಷವನ್ನ ಅಧಿಕಾರಕ್ಕೆ ತರಲು ಕೆಲಸ ಮಾಡೋಣ.. ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

Source: newsfirstlive.com Source link