‘ಭ್ರಷ್ಟರಿಗೆ ಬಸವ ನಾಡಿನಲ್ಲಿ ಅವಕಾಶ ಇಲ್ಲ’ -ಧ್ವಜಾರೋಹಣ ಮಾಡದಂತೆ ಸಚಿವೆ ಜೊಲ್ಲೆಗೆ ಮುತ್ತಿಗೆ

‘ಭ್ರಷ್ಟರಿಗೆ ಬಸವ ನಾಡಿನಲ್ಲಿ ಅವಕಾಶ ಇಲ್ಲ’ -ಧ್ವಜಾರೋಹಣ ಮಾಡದಂತೆ ಸಚಿವೆ ಜೊಲ್ಲೆಗೆ ಮುತ್ತಿಗೆ

ವಿಜಯಪುರದ: ಧ್ವಜಾರೋಹಣ ಮಾಡದಂತೆ ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆಯೂ ಆಗಿರುವ ಶಶಿಕಲಾ ಜೊಲ್ಲೆ ಅವರಿಗೆ ಮಹಿಳೆಯರು ಮುತ್ತಿಗೆ ಹಾಕಿದ ಘಟನೆ ಇಂದು ನಡೆದಿದೆ.

blank

ಇಂದು 75 ನೇ ಸ್ವಾತಂತ್ರೋತ್ಸವ ಹಿನ್ನೆಲೆ ನಗರದ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿ ಧ್ವಜಾರೋಹಣಕ್ಕ ಆಗಮಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆಯನ್ನು ತಡೆದ ಮಹಿಳೆಯರು, ಭ್ರಷ್ಟಾಚಾರ ಆರೋಪ ಹೊತ್ತಿರುವ ನೀವು ಧ್ವಜಾರೋಹಣ ಮಾಡದಂತೆ ಆಕ್ರೋಶ ವ್ಯಕ್ತ ಪಡಿಸಿದ್ದಾರು. ಸಚಿವೆ ಬರುತ್ತಿದ್ದಂತೆ ಭ್ರಷ್ಟರಿಗೆ ಬಸವ ನಾಡಿನಲ್ಲಿ ಅವಕಾಶ ಇಲ್ಲ ಎಂದು ಧಿಕ್ಕಾರ ಕೂಗಿದ 50ಕ್ಕೂ ಹೆಚ್ಚು ಮಹಿಳೆಯರು ಭ್ರಷ್ಟಾಚಾರ ಆರೋಪ ಹೊತ್ತಿರುವ ಶಶಿಕಲಾ ಜೊಲ್ಲೆ ವಿರುದ್ಧ  ಪ್ರತಿಭಟನೆಗೆ ನಡೆಸಲು ಮುಂದಾದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಪೊಲೀಸರು, ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯರನ್ನು ವಶಕ್ಕೆ ಪಡೆದು ಸಚಿವರು ಧ್ವಜಾರೋಹಣ ಮಾಡಲು ಅವಕಾಶ ಮಾಡಿಕೊಟ್ಟರು.

blank

Source: newsfirstlive.com Source link