ಫೈಟರ್ ವಿವೇಕ್​ ಸಾವಿನ ಕುರಿತು ಕೊನೆಗೂ ಮೌನ ಮುರಿದ ನಟಿ ರಚಿತಾ ರಾಮ್ -ಹೇಳಿದ್ದೇನು?

ಫೈಟರ್ ವಿವೇಕ್​ ಸಾವಿನ ಕುರಿತು ಕೊನೆಗೂ ಮೌನ ಮುರಿದ ನಟಿ ರಚಿತಾ ರಾಮ್ -ಹೇಳಿದ್ದೇನು?

ಅಜಯ್​ ರಾವ್ ಮತ್ತು ರಚಿತಾ ರಾಮ್​ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಲವ್​ ಯೂ ರಚ್ಚು’ ಸಿನಿಮಾದ ಶೂಟಿಂಗ್​ ವೇಳೆ ದುರ್ಘಟನೆ ಸಂಭವಿಸಿ ಫೈಟರ್​ ವಿವೇಕ್ ​ಸಾವನ್ನಪ್ಪಿನಪ್ಪಿರೋದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಇನ್ನು ಘಟನೆ ಸಂಭವಿಸಿದಾಗ ರಚಿತಾ ಶೂಟಿಂಗ್​ ಸ್ಟಾಟ್​ನಲ್ಲಿ ಇದ್ದರೋ ಇಲ್ಲವೋ ಅಂತಾ ಮೊನ್ನೆಯಿಂದ ಚರ್ಚೆ ನಡಿತ್ತಾ ಇತ್ತು.

ಇನ್ನು ಹಲವರು ಈ ವಿಚಾರವನ್ನು ಇಟ್ಟು ಕೊಂಡು ರಚಿತಾರನ್ನ ಟ್ರೋಲ್​ ಕೂಡ ಮಾಡಿದ್ರು. ಇದೀಗ ರಚಿತಾ ರಾಮ್​ ಮೊದಲ ಬಾರಿಗೆ ಈ ವಿಷಯವಾಗಿ ಮೌನ ಮುರಿದಿದ್ದಾರೆ. ಫೈಟರ್​ ವಿವೇಕ್ ಸಾವಿನ ಕುರಿತು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ರಚಿತಾ ರಾಮ್​ ಪೋಸ್ಟ್​ ಒಂದನ್ನ ಮಾಡಿದ್ದಾರೆ.

ಲವ್​ ಯೂ ರಚ್ಚು ಶೂಟಿಂಗ್​ ವೇಳೆ ನಡೆದ ಆ ದುರ್ಘಟನೆಯಿಂದ ನಾನ್ನು ಆಘಾತಕ್ಕೆ ಒಳ್ಳಗಾಗಿದೆ. ಘಟನೆ ಬಳಿಕ ನಾನ್ನು ಸೈಲೆಂಟ್​ ಆಗಿದೆ, ಅದ್ರೆ ಅದರೆ ಜನರು ಅದನ್ನೆ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಈ ದುರ್ಘಟನೆ ನಡೆದ ಸಂದರ್ಭದಲ್ಲಿ ನಾನು ಶೂಟಿಂಗ್​ ಸೆಟ್​ನಲ್ಲಿ ಇರ್ಲಲ . ಆಗ ನಾನು ಮೈಸೂರಿನಲ್ಲಿ ಶಬರಿ ಸಿನಿಮಾದ ಶೂಟಿಂಗ್​ಗೊಸ್ಕರ ಮೈಸೂರಿನಲ್ಲಿದೆ.

ಸತ್ಯವನ್ನು ಒಂದೇ ಒಂದು ಸಲ ಪುನರ್​ ಪರಿಶೀಲಿಸಿದ್ರೆ ನನ್ನ ಬಗ್ಗೆ ಕೆಟ್ಟ ಕಮೆಂಟ್​ಗಳನ್ನು ಬರೆಯುವ, ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವ ಪ್ರಮೇಯ ಒದಗಿಬರುತ್ತಿರಲಿಲ್ಲ ಎನಿಸುತ್ತೆ’ ಎಂದು ರಚಿತಾ ರಾಮ್​ ಹೇಳಿದ್ದಾರೆ.

ಇದನ್ನೂ ಓದಿ: ಮಾನ್ಸೂನ್ ಮಳೆಯಲ್ಲಿ ಡಾಲಿ-ರಚ್ಚು ಪ್ರೇಮ ಗೀತೆ

ಇದನ್ನೂ ಓದಿ: ರಚಿತಾ ರಾಮ್​ಗೆ ತರಾಟೆ ತೆಗೆದುಕೊಂಡಿದ್ಯಾಕೆ ಅಭಿಮಾನಿಗಳು..?! 

Source: newsfirstlive.com Source link