ಲಾರ್ಡ್ಸ್​ ಬಾಲ್ಕನಿಯಲ್ಲಿ ಕ್ಯಾಪ್ಟನ್​​​​ ವಿರಾಟ್​ ಕೊಹ್ಲಿ ‘ನಾಗಿನ್​’ ಡ್ಯಾನ್ಸ್

ಲಾರ್ಡ್ಸ್​ ಬಾಲ್ಕನಿಯಲ್ಲಿ ಕ್ಯಾಪ್ಟನ್​​​​ ವಿರಾಟ್​ ಕೊಹ್ಲಿ ‘ನಾಗಿನ್​’ ಡ್ಯಾನ್ಸ್

ವಿರಾಟ್ ಕೊಹ್ಲಿ ಮೈದಾನದಲ್ಲಿ ಎಷ್ಟು ಅಗ್ರೇಸ್ಸಿವ್ ಆಗಿ ಕಾಣಿಸ್ತಾರೋ, ಮೈದಾನದ ಹೊರಗೆ ಅಷ್ಟೇ ಕೂಲ್ ಆ್ಯಂಡ್ ಕಾಮ್ ಆಗಿರ್ತಾರೆ. ತಮ್ಮ ಬ್ಯಾಟಿಂಗ್​ನಿಂದ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡುವ ವಿರಾಟ್​, ಫೀಲ್ಡಿಂಗ್ ಮಾಡುವ ವೇಳೆಯೂ ಒಂದಿಲ್ಲೊಂದು ವಿಚಾರಕ್ಕೆ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಇತ್ತೀಚಿಗಷ್ಟೆ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯದಲ್ಲಿ ಪಂಜಾಬಿ ಬಾಂಗ್ರಾ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದ ವಿರಾಟ್, ಈಗ ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ ಪಂದ್ಯದ ವೇಳೆಯೂ, ಇಂಥದ್ದೇ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ಲಾರ್ಡ್ಸ್​ನ ಬಾಲ್ಕನಿಯಲ್ಲಿ ನಾಗಿನಿ ಡ್ಯಾನ್ಸ್​ ಮಾಡಿ ಸಹ ಆಟಗಾರರನ್ನ ರಂಜಿಸಿದ್ದಾರೆ. ಈ ವೇಳೆ ಪಕ್ಕದಲ್ಲೇ ಇದ್ದ ಕನ್ನಡಿಗರಾದ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ಪ್ರಸಿದ್ಧ್​ ಕೃಷ್ಣ ಹಾಗೂ ಮೊಹಮ್ಮದ್ ಸಿರಾಜ್, ನಗೆಗಡಲಲ್ಲಿ ತೇಲಾಡಿದರು. ಸದ್ಯ ಈ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

Source: newsfirstlive.com Source link