ಸೈನಿಕನ ಗೆಟಪ್​​ನಲ್ಲಿ ನಟಸಾರ್ವಭೌಮ ಅಪ್ಪು -ಬ್ಲಾಕ್ ಕಮಾಂಡೋ ಮಿಂಚಿನಲ್ಲಿ ಪವರ್ ಜೇಮ್ಸ್

ಸೈನಿಕನ ಗೆಟಪ್​​ನಲ್ಲಿ ನಟಸಾರ್ವಭೌಮ ಅಪ್ಪು -ಬ್ಲಾಕ್ ಕಮಾಂಡೋ ಮಿಂಚಿನಲ್ಲಿ ಪವರ್ ಜೇಮ್ಸ್

ಸಲಾಂ ಸೋಲ್ಜರ್ , ದೇಶಕ್ಕೆ ನೀನೆ ಪವರ್ ; ಇದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಬಳಗದ ಹೊಸ ಸ್ಲೋಗನ್​​​..ಭಾರತದ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನದ ಶುಭಾಶಯವನ್ನ ಪವರ್ ಫುಲ್ ಆಗಿ ಹೇಳಿದೆ ಜೇಮ್ಸ್ ಸಿನಿ ಬಳಗ… ಅದ್ ಹೇಗೆ ? ಅನ್ನೋದನ್ನ ನೋಡೋಣ ಬನ್ನಿ ದೇಶ ಪ್ರೇಮಿಗಳೇ..

ವಿವಿಧತೆಯಲ್ಲಿ ಏಕತೆಯನ್ನ ಸಾರುವ ದೇಶ ನಮ್ಮ ಭಾರತ.. ಸದಾ ಎಲ್ಲರಲ್ಲೂ ಸಾಗುತ್ತಿರಲಿ ದೇಶಾಭಿನದ ರಥ.. ಸೈನಿಕನಾಗಿ ದೇಶ ಸೇವೆ ಮಾಡೋದು ಪವರ್ ಸ್ಟಾರ್ ಸಿನಿ ಪಥ.. ಅಮೃತ ಮಹೋತ್ಸವದ ಸಂಭ್ರಮದಲ್ಲಿರೋ ದೇಶ ಪ್ರೇಮಿಗಳಿಗೆ ‘ಜೇಮ್ಸ್’ ಬಳಗ ಹೊಸ ಪೋಸ್ಟರ್ ಮೂಲಕ ಶುಭಾಯಗಳನ್ನ ಸಲ್ಲಿಸಿದೆ.

ಕೆಲವಾರು ದಿನಗಳ ಹಿಂದೆ ಕಾಶ್ಮೀರಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೇಮ್ಸ್ ಬಳಗದೊಟ್ಟಿಗೆ ಶೂಟಿಂಗ್​​ಗೆಂದೆ ಬೀಡು ಬಿಟ್ಟಿದ್ರು. ಆಗೊಂದು ಸಿನಿಮಾ ಸ್ಟೆಲ್ ಲೀಕ್ ಆಗಿತ್ತು.. ವೀರ ಯೋಧನ ಗೆಟಪ್​ನಲ್ಲಿ ಅಪ್ಪು ಕಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೆಲವೇ ಕ್ಷಣವಿದ್ದ ಆ ಫೋಟೋವನ್ನ ನೋಡಿದ ಪವರ್ ಅಭಿಮಾನಿಗಳಿಗೆ ಅಚ್ಚರಿಯಾ ಆನಂದವಾಗಿತ್ತು ಸೈನಿಕನ ಗೆಟಪ್​​ನಲ್ಲಿ ಯುವರತ್ನ ಹೆಂಗೆ ಕಾಣಿಸಿ ಕಂಗೋಳಿಸ ಬಹುದು ಅನ್ನೋ ಕನಸು ಮೂಡಿತ್ತು.. ಆದ್ರೆ ಫೋಟೋವನ್ನ ಚಿತ್ರತಂಡ ಸೋಶಿಯಲ್ ಮೀಡಯಾದಿಂದ ತೆರೆವು ಗೊಳಿಸಿತ್ತು.. ಈಗ ಅಸಲಿ ಸತ್ಯ ಹೊರ ಬಂದಿದೆ.. ಬಹದ್ಧೂರ್ , ಭರ್ಜರಿ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಸಿನಿಮಾದಲ್ಲಿ ಪವರ್ ಸ್ಟಾರ್ ಅಪ್ಪು ಬ್ಲಾಕ್ ಕಮಾಂಡೋ ಅವತಾರದಲ್ಲಿ ವಿಜೃಂಭಿಸಿದ್ದಾರೆ.

ನಿಮ್ಮ ಚಿತ್ರಪ್ರೇಮಿಗಳೇ ತಂಡಕ್ಕೆ ನಿರ್ದೇಶಕ ಚೇತನ್ ಕುಮಾರ್ ಹೇಳಿದ್ರು ಜೇಮ್ಸ್ ಸಿನಿಮಾ ಪಕ್ಕಾ ಆ್ಯಕ್ಷನ್ ಪ್ಯಾಕ್ಡ್ ಮನೋರಂಜನೆ ಅಂತ.. ಅದ್ಯಾವ ರೀತಿಯ ಮನೋರಂಜನೆಯನ್ನ ಆ್ಯಕ್ಷನ್ ಅಚ್ಚರಿಯನ್ನ ಚೇತನ್ ಕುಮಾರ್ ನೀಡಬಹುದು ಎಂದು ಊಹಿಸಿದ ಪವರ್ ಫ್ಯಾನ್ಸ್ ಗೆ ಈ ಹೋಸ ಪೋಸ್ಟರ್ ಭರವಸೆಯ ಮುದ್ರೆಯನ್ನ ಒತ್ತುತ್ತಿದೆ.. ಸಲಾಂ ಸೋಲ್ಜರ್ , ದೇಶಕ್ಕೆ ನೀನೆ ಪವರ್ ಟ್ಯಾಗ್ ಲೈನ್ ಮೂಲಕ ಜೇಮ್ಸ್ ಸಿನಿಮಾ ಬಳಗ 75ನೇ ಸ್ವಾತಂತ್ರ್ಯ ದಿನ ಶುಭಾಶಯಗಳನ್ನ ಹಂಚಿದೆ.

ಚೇತನ್ ಕುಮಾರ್ ನಿರ್ದೇಶನದ ಈ ಜೇಮ್ಸ್ ಸಿನಿಮಾವನ್ನ ಕಿಶೋರ್ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಸದ್ಯ ಅರಮನೆ ಮೈದಾನದಲ್ಲಿ ಚಿತ್ರದ ಶೂಟ್ ಮೂಡ್​ನಲ್ಲಿದೆ.. ಈ ತಿಂಗಳಾಂತ್ಯದಕ್ಕೆ ಜೇಮ್ಸ್ ಸಿನಿಮಾ ಶೂಟಿಂಗ್ ಪೂರ್ಣವಾಗೋ ಸಾಧ್ಯತೆಗಳಿವೆ. ಜೊತೆಗೆ ಮುಂದಿನ ದಿನಗಳಲ್ಲಿ ಜೇಮ್ಸ್ ಬಳಗದಿಂದ ಮತ್ತಷ್ಟು ಸ್ವೀಟ್ ನ್ಯೂಸ್ ಹೊರ ಬರೋ ಸಾಧ್ಯತೆಗಳು ಇವೆ.

Source: newsfirstlive.com Source link