ನಕ್ಕು ನಗಿಸಲು ಬಂದ ನಾಣಿ.. ಫಸ್ಟ್​​ ಬಾಲೇ ಸಿಕ್ಸು..!

ನಕ್ಕು ನಗಿಸಲು ಬಂದ ನಾಣಿ.. ಫಸ್ಟ್​​ ಬಾಲೇ ಸಿಕ್ಸು..!

ರಂಗ ಭೂಮಿಯ ಪ್ರತಿಭೆ ಸುಜಯ್​ ಶಾಸ್ತ್ರಿ.. ಈ ಹೆಸರು ಹೇಳಿದ್ರೆ ಎಷ್ಟು ಜನರಿಗೆ ನೆನಪಾಗುತ್ತೋ ಇಲ್ಲವೋ.. ಆದ್ರೆ ನೊಂದ ನಾಣಿ ಅಂದ್ರೆ ಸಾಕು.. ನಕ್ಕು ನಕ್ಕು ಸುಸ್ತಾಗೋರಿಗೇನು ಕಡಿಮೆ ಇಲ್ಲ.. ಗುಬ್ಬಿ ಮೇಲೆ ಬ್ರಹ್ಮಾಸ್ತ್ರದಲ್ಲಿ ಇವರ ಅಭಿನಯ ಕಂಡವರಂತೂ ಫಿದಾ ಆಗದವರೇ ಇಲ್ಲ.. ಕೇವಲ ನಟನೆ ಮಾತ್ರವಲ್ಲ ನಿರ್ದೇಶನದಲ್ಲೂ ಛಾಪು ಮೂಡಿಸಿರೋ ಸುಜಯ್​ ಶಾಸ್ತ್ರಿ ನಿರ್ದೇಶನದ ಚಾರ್ಲಿ ಅಲ್ಫಾ ಟ್ಯಾಂಗೋ ಚಿತ್ರ ಕೂಡ ರಿಲೀಸ್​​ ಸಿದ್ಧತೆಯಲ್ಲಿದೆ.

ಈಗಾಗಲೇ ಬೆಲ್​ ಬಾಟಂ, ಬೀರ್​ಬಲ್ ಟ್ರೈಯಾಲಜಿ ಚಿತ್ರಗಳಿಂದ ಉತ್ತಮ ಹೆಸರು ಗಳಿಸಿರೋ.. ಸುಜಯ್​ ಶಾಸ್ತ್ರಿ.. ಮನೆ ಮಾತಾಗಿದ್ದು ಮಾತ್ರ ನೊಂದ ನಾಣಿ ಪಾತ್ರದ ಮೂಲಕ.. ನಾಟಕ, ಧಾರಾವಾಹಿ, ಚಲನಚಿತ್ರ ಹೀಗೆ ಪ್ರತಿ ರಂಗದಲ್ಲೂ ತನ್ನದೇ ಆದ ಛಾಪು ಮೂಡಿಸಿರೋ ನೊಂದ ನಾಣಿ ಅಲಿಯಾಸ್ ಸುಜಯ್ ಶಾಸ್ತ್ರಿ ಈಗ ಯೂಟ್ಯೂಬ್​ಗೆ ಎಂಟ್ರಿಕೊಟ್ಟಿದ್ದಾರೆ. ಪ್ರದೀಪ್ ಬಿವಿ ನಿರ್ದೇಶನದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ನೊಂದ ನಾಣಿ ಪಾತ್ರದ ಮೂಲಕ ಚಿಕ್ಕ ಚಿಕ್ಕ ಎಪಿಸೋಡ್​ ಮೂಲಕ ಜನರನ್ನು ನಕ್ಕು ನಗಿಸಲು ಯೂಟ್ಯೂಬ್​​ಗೆ ಬಂದಿರೋ ಸುಜಯ್​ ಶಾಸ್ತ್ರಿ ಇಂದು ಮೊದಲ ಎಪಿಸೋಡ್​ ರಿಲೀಸ್​ ಮಾಡಿದ್ದಾರೆ. ಮೊದಲ ಬಾಲಲ್ಲೇ ಸಿಕ್ಸು ಹೊಡೆದ ಹಾಗೆ, ಸಖತ್ ನಗುವಿನ ಆರಂಭ ಮಾಡಿದ್ದಾರೆ.

ಇನ್ನು ಈ ಸಿರೀಸ್​ ಶಿರ್ಶಿಕೆಗೆ ಚಂದನ್​ ಶೆಟ್ಟಿ ಮ್ಯೂಸಿಕ್​ ನೀಡಿದ್ದು, ಪ್ರಸನ್ನ ವಿ.ಎಮ್ ಡೈಲಾಗ್ಸ್ ಬರೆದಿದ್ದಾರೆ. ವಿಶ್ವಜಿತ್ ರಾವ್ ಡೈರೆಕ್ಟರ್ ಆಫ್ ಫೊಟೋಗ್ರಾಫಿ ಆಗಿದ್ದು, ಕಿನೊ ಕ್ಲೌಡ್ಸ್​ ಎಡಿಟಿಂಗ್ ಮಾಡಿದೆ.

 

Source: newsfirstlive.com Source link