ಗಡಿ ಜಿಲ್ಲಾಡಳಿತಗಳ ನಿದ್ದೆಗೆಡಿಸಿದ ನಕಲಿ RTPCR ವರದಿಗಳ ಹಾವಳಿ

ಗಡಿ ಜಿಲ್ಲಾಡಳಿತಗಳ ನಿದ್ದೆಗೆಡಿಸಿದ ನಕಲಿ RTPCR ವರದಿಗಳ ಹಾವಳಿ

ದಕ್ಷಿಣ ಕನ್ನಡ/ಚಾಮರಾಜನಗರ : ನೆರೆರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಾದ ಬೆನ್ನಲ್ಲೇ ಇದೀಗ ರಾಜ್ಯದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ,  ಚಾಮರಾಜನಗರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಂಡಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು ಆತಂಕಕ್ಕೀಡು ಮಾಡುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಕೇರಳದಿಂದ ರಾಜ್ಯಕ್ಕೆ ಬರುವವರು ನಕಲಿ RTPCR ನೆಗೆಟಿವ್​ ವರದಿ ತರುತ್ತಿರುವದಾಗಿ ಶಂಕೆ ವ್ಯಕ್ತವಾಗಿದ್ದು ನಕಲಿ ವರದಿ ತಂದಿರುವ ಶಂಕೆಯಡಿ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ.

ಸದ್ಯದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ನಿನ್ನೆ ಒಂದೇ ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 411 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, 3682 ಕೊರೊನಾ ಆಕ್ಟಿವ್ ಪ್ರಕರಣಗಳು ಜಿಲ್ಲೆಯಲ್ಲಿವೆ..
ಕೇರಳ ಕಾಸರಗೋಡು ಜಿಲ್ಲೆಯ ದಂಪತಿಯನ್ನು ಕೊಡಗಿನ ಕೇರಳ ಗಡಿ ಅಮ್ಮತ್ತಿ ಚೆಕ್ ಪೋಸ್ಟ್ ನಲ್ಲಿ ನಕಲಿ RTPCR ನೆಗೆಟಿವ್ ವರದಿ ತಂದ ಸಂಶಯದಡಿ ಪೊಲೀಸರು ಬಂಧಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದಿದೆ.

blank

ಇದನ್ನೂ ಓದಿ:  ಅಪ್ರಾಪ್ತ ವಿದ್ಯಾರ್ಥಿನಿ ಮೇಲೆಯೇ ಶಿಕ್ಷಕನ ಲೈಂಗಿಕ ದೌರ್ಜನ್ಯ ಆರೋಪ; ನ್ಯಾಯಕ್ಕಾಗಿ ಪ್ರತಿಭಟನೆ

ಜಿಲ್ಲೆಯ ಎಲ್ಲಾ 16 ಗಡಿ ಚೆಕ್ ಪೋಸ್ಟ್ ಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಡಾಳಿತ ಸೂಚನೆ ನೀಡಿದ್ದರು ಸಹ ಅಲ್ಲಲ್ಲಿ ನಕಲಿ ವರಿದಿಗಳ ಹಾವಳಿ ಹೆಚ್ಚಾಗಿದ್ದು, ಜಿಲ್ಲಾಡಳಿತದ ನಿದ್ದೆಗೆಡಿಸಿದೆ..

ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಹಾಗು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅಲರ್ಟ್ ಆಗಿ ಇರುವಂತೆ ಸೂಚನೆ ನೀಡಿದ ಜಿಲ್ಲಾಡಳಿತ, ಕೇರಳದಿಂದ ಬರುತ್ತಿರುವವರ RTPCR ನೆಗೆಟಿವ್ ರಿಪೋರ್ಟ್ ಅಸಲಿಯತ್ತನ್ನ ಕೂಲಂಕುಶವಾಗಿ ಪರಿಶೀಲಿಸುವಂತೆ ಖಡಕ್​ ಎಚ್ಚರಿಕೆ ನೀಡಿದ್ದಾರೆ..

ಇನ್ನು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಯಲ್ಲಿ ತಾಲೂಕು ಹಂಗಳ ಗ್ರಾಮದಲ್ಲಿ ಕೂಡ ನಕಲಿ RTPCR ನೆಗೆಟಿವ್​ ವರದಿ ದಂಧೆ ಬಯಲಾಗಿದ್ದು, ನಕಲಿ ವರದಿ ತಯಾರಿಸಿ ಕೊಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ಇದನ್ನೂ ಓದಿ: 2% ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಆ.23 ರಿಂದ ಶಾಲೆ-ಕಾಲೇಜ್ ಓಪನ್..- ಬೊಮ್ಮಾಯಿ ಘೋಷಣೆ

ಅನಿಲ್ ಬಂಧಿತ ಯುವಕ. ಈ ಯುವಕ ಕಂಪ್ಯೂಟರ್​ ಸೆಂಟರ್​ ನಡೆಸುತ್ತಿದ್ದು, ತಮಿಳುನಾಡು, ಕೇರಳಕ್ಕೆ ತೆರಳುತ್ತಿದ್ದವರಿಗೆ ನಕಲಿ ವರದಿಗಳನ್ನು ತಯಾರಿಸಿ ಮಾರುತ್ತಿದ್ದ ಎನ್ನಲಾಗಿದೆ.

ತಮಿಳುನಾಡು ಗಡಿಭಾಗದ ಬಂಡೀಪುರ ಕೆಕ್ಕನಹಳ್ಳ ಚೆಕ್ ಪೋಸ್ಟ್ ನಲ್ಲಿ ಪರಿಶೀಲಿಸುತ್ತಿದ್ದಾಗ ನಕಲಿ ವರದಿಗಳು ಬೆಳಕಿಗೆ ಬಂದಿದ್ದು ವಿಚಾರಣೆ ನಡೆಸಿದಾಗ ಯುವಕನ ಈ ವಂಚನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಸದ್ಯ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ…

Source: newsfirstlive.com Source link