ಧ್ವಜಾರೋಹಣ; ಡಿಕೆಎಸ್​ಗಾಗಿ ಕಾದು ಕುಳಿತ ಸಿದ್ದರಾಮಯ್ಯ

ಧ್ವಜಾರೋಹಣ; ಡಿಕೆಎಸ್​ಗಾಗಿ ಕಾದು ಕುಳಿತ ಸಿದ್ದರಾಮಯ್ಯ

ಬೆಂಗಳೂರು: ಸ್ವಾತಂತ್ರೋತ್ಸವದ ಅಂಗವಾಗಿ ರಾಜ್ಯ ಕಾಂಗ್ರೆಸ್​ ಇಂದು ನಗರದಲ್ಲಿ ಮೆರವಣಿಗೆ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗಮನ ತಡವಾದ್ದರಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾದು ಕುಳಿತ ಘಟನೆ ನಡೆದಿದೆ.

ನಗರದಲ್ಲಿ 75 ನೇ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ವತಿಯಿಂದ 1 ಕಿಮೀ ಉದ್ದವಿರುವ ರಾಷ್ಟ್ರ ಧ್ವಜವನ್ನು ಸಿದ್ಧಪಡಿಸಿಕೊಂಡು ಕ್ರಾಂತಿವೀರ ಸಂಗೊಳ್ಳಿ ರಾಯಣ ವೃತ್ತದಿಂದ ಮೆರವಣಿಗೆ ಆರಭಿಸಲು ಯೋಜನೆ ರೂಪಿಸಲಾಗಿತ್ತು.

blank

ಇದನ್ನೂ ಓದಿ: ‘ಹುತಾತ್ಮರಾದ ಸೋನಿಯಾ ಗಾಂಧಿ.. ಸಾರಿ ಇಂದಿರಾ ಗಾಂಧಿ’ -ಭಾಷಣದ ವೇಳೆ ಡಿಕೆಎಸ್​ ಎಡವಟ್ಟು

ಮೆರವಣಿಗೆ ಆರಂಭಕ್ಕೆ ನಿಗದಿಪಡಿಸಿದ ಸಮಯಕ್ಕೆ ತಕ್ಕಂತೆ ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್​ ಗುಂಡೂರಾವ್​ ಸೇರಿದಂತೆ ಇತರೆ ಪಕ್ಷದ ನಾಯಕರು, ಮುಖಂಡರು ಸ್ಥಳದಲ್ಲಿ ಹಾಜರಿದ್ದರು. ಆದರೆ ಡಿ.ಕೆ ಶಿವಕುಮಾರ್ ಸರಿಯಾದ ಸಮಯಕ್ಕೆ ಆಗಮಿಸದ ಕಾರಣ ಸಿದ್ದರಾಮಯ್ಯ ಸೇರದಂತೆ ಇತರೆ ಎಲ್ಲ ನಾಯಕರು ಡಿಕೆಎಸ್ ಆಗಮನಕ್ಕೆ ಕಾದು ಕುಳಿತಿರುವ ಪ್ರಸಂಗವೊಂದು ನಡೆದಿದೆ.

blank

ಈ ವೇಳೆ ಡಿಕೆಎಸ್​ ಆಗಮನದಿಂದ ಬೇಸತ್ತು ಕೈಕಟ್ಟಿ ನಿಂತ ಸಿದ್ದರಮಯ್ಯನವರಿಗೆ ಕಾರ್ಯಕರ್ತರು ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಬಳಿಕ ಆಗಮಿಸಿದ ಶಿವಕುಮಾರ್​ ಮರೆವಣಿಗೆಗೆ ಚಾಲನೆ ನೀಡಿದ್ದಾರೆ..

 

Source: newsfirstlive.com Source link