ಸೈನಿಕ ಶಾಲೆಗಳಲ್ಲಿನ್ನು ಬಾಲಕಿಯರಿಗೂ ದಾಖಲಾತಿ; ಹೇಗಿರುತ್ತೆ ಪ್ರವೇಶ ಪರೀಕ್ಷೆ? ಅರ್ಹತೆ ಏನು?

ಸೈನಿಕ ಶಾಲೆಗಳಲ್ಲಿನ್ನು ಬಾಲಕಿಯರಿಗೂ ದಾಖಲಾತಿ; ಹೇಗಿರುತ್ತೆ ಪ್ರವೇಶ ಪರೀಕ್ಷೆ? ಅರ್ಹತೆ ಏನು?

ನವದೆಹಲಿ: ದೇಶದಲ್ಲಿ ಇದುವರೆಗೂ ಬಾಲಕರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದ್ದ ಸೈನಿಕ ಶಾಲೆಗಳಲ್ಲಿ ಬಹುದೊಡ್ಡ ಬದಲಾವಣೆ ಮಾಡೋದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದಾರೆ. ಇದುವರೆಗೂ ಬಾಲಕರಿಗೆ ಮಾತ್ರ ಪ್ರವೇಶ ನೀಡುತ್ತಿದ್ದ ಸೈನಿಕ ಶಾಲೆಗಳಲ್ಲಿ ಈ ವರ್ಷದಿಂದ ಬಾಲಕಿಯರಿಗೂ ದಾಖಲಾತಿ ನೀಡೋದಾಗಿ ಮೋದಿ ತಿಳಿಸಿದ್ದಾರೆ.

75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಂಪುಕೋಟೆಯಲ್ಲಿ ಧ್ವಜರೋಹಣ ನೆರವೇರಿಸಿ ಭಾಷಣ ಮೋದಿ ಅವರು, ತಮ್ಮ ಭಾಷಣದಲ್ಲಿ ಈ ಕುರಿತ ಘೋಷಣೆಯನ್ನು ಮಾಡಿದರು. ಶಿಕ್ಷಣ, ಕ್ರೀಡೆ, ಒಲಿಂಪಿಕ್ಸ್‌ನ ಪದಕಗಳು ದೇಶಕ್ಕೆ ಹೆಮ್ಮೆಯ ವಿಷಯ. ನಮ್ಮ ಹೆಣ್ಣು ಮಕ್ಕಳು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಮಿಜೋರಾಂನ ಸೈನಿಕ್ ಶಾಲೆಯಲ್ಲಿ ಮೊದಲ ಬಾರಿಗೆ ಹೆಣ್ಣುಮಕ್ಕಳ ಪ್ರವೇಶದ ಪ್ರಯೋಗವನ್ನು ಮಾಡಲಾಯಿತು. ಈಗ ದೇಶದ ಎಲ್ಲಾ ಸೈನಿಕ ಶಾಲೆಗಳನ್ನು ದೇಶದ ಹೆಣ್ಣು ಮಕ್ಕಳಿಗಾಗಿ ತೆರೆಯಲು ಸರ್ಕಾರ ನಿರ್ಧರಿಸಿದೆ. ಇಂದು ನಾನು ದೇಶವಾಸಿಗಳೊಂದಿಗೆ ಸಂತೋಷವನ್ನು ಹಂಚಿಕೊಳ್ಳುತ್ತಿದ್ದೇನೆ. ಹೆಣ್ಣುಮಕ್ಕಳು ಕೂಡ ಸೈನಿಕ ಶಾಲೆಯಲ್ಲಿ ಕಲಿಯಲು ಬಯಸುತ್ತಾರೆ, ಆದ್ದರಿಂದ ಸೈನಿಕ್ ಶಾಲೆಗಳ ಬಾಗಿಲು ಅವರಿಗೂ ತೆರೆಯಲಿದೆ ಎಂದು ತಿಳಿಸಿದರು.

blank

ಸೈನಿಕರ ಶಾಲೆಗಳನ್ನು ಕೇಂದ್ರ ರಕ್ಷಣಾ ಇಲಾಖೆಯ ಅಡಿ ಸೈನಿಕ್​ ಸ್ಕೂಲ್​ ಸೊಸೈಟಿ ನಡೆಸುತ್ತಿದೆ. ಈ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಸೇನೆಯಲ್ಲಿ ಅಧಿಕಾರಿಗಳಾಗಲು ತರಬೇತಿ ನೀಡಲಾಗುತ್ತದೆ. ಭಾರತೀಯ ಸೇನೆಗೆ ಅಗತ್ಯವಿರುವಂತೆ ಮಕ್ಕಳಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. 1960ರಲ್ಲಿ ಮೊದಲ ಬಾರಿಗೆ ಸೈನಿಕ್ ಶಾಲೆಯನ್ನು ಲಕ್ನೋದಲ್ಲಿ ಆರಂಭ ಮಾಡಲಾಯಿತು. ದೇಶದಲ್ಲಿ ಸದ್ಯ 33 ಸೈನಿಕ್ ಶಾಲೆಗಳಿದ್ದು, ಇಲ್ಲಿ ಸಿಬಿಎಸ್​​ಸಿ ಬೋರ್ಡ್​ ಅಡಿ ಕಾರ್ಯ ನಿರ್ವಹಿಸುತ್ತದೆ. ಆಂಗ್ಲ ಮಾಧ್ಯಮದಲ್ಲಿ ಇಲ್ಲಿ ಶಿಕ್ಷಣ ನೀಡಲಾಗುತ್ತದೆ.

ಸೈನಿಕ್​ ಶಾಲೆಗಳಿಗೆ 6ನೇ ತರಗತಿ ಮತ್ತು 9ನೇ ತರಗತಿವರೆಗೂ ಪ್ರವೇಶ ನೀಡಲಾಗುತ್ತದೆ. ಪ್ರತಿ ವರ್ಷ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ ನಡೆಯಲಿದೆ. ಶಾಲೆಗೆ ದಾಖಲಾಗಲು ಬಯಸುವವರು aissee.nta.nic.in. ವೈಬ್​ಸೈಟ್​​ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ನಿಗದಿತ ದಿನಾಂಕದಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಎಸ್​​ಟಿ-ಎಸ್​ಸಿ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಮಾಡಲು 400 ರೂ. ಹಾಗೂ ಒಬಿಸಿ, ಜನರಲ್ ಮತ್ತು ಇತರೇ ಕ್ಯಾಟಗಿರಿಗೆ 550 ರೂಪಾಯಿ ಶುಲ್ಕ ಪಾವತಿ ಮಾಡಬೇಕಿದೆ. 6ನೇ ತರಗತಿಗೆ ಪ್ರವೇಶ ಪಡೆಯಲು 10 ರಿಂದ 12 ವರ್ಷ, 9ನೇ ತರಗತಿಗೆ 13 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಮಾತ್ರ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿದೆ.

Source: newsfirstlive.com Source link