3ನೇ ದಿನ ಬೌಲರ್​ಗಳ ನೀರಸ ಪ್ರದರ್ಶನ- ನಿದ್ರೆಗೆ ಜಾರಿದ ಕೋಚ್ ರವಿ ಶಾಸ್ತ್ರಿ..!

3ನೇ ದಿನ ಬೌಲರ್​ಗಳ ನೀರಸ ಪ್ರದರ್ಶನ- ನಿದ್ರೆಗೆ ಜಾರಿದ ಕೋಚ್ ರವಿ ಶಾಸ್ತ್ರಿ..!

ಭಾರತ-ಇಂಗ್ಲೆಂಡ್​ ನಡುವಿನ 2ನೇ ಟೆಸ್ಟ್​ ಪಂದ್ಯ ಕುತೂಹಲದ ಘಟ್ಟ ತಲುಪಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಟೀಮ್ ಇಂಡಿಯಾ, 364 ರನ್​ ಪೇರಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್, ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದ್ರೆ ಮೂರನೇ ದಿನದಾಟದಲ್ಲಿ ನಾಯಕ ಜೋ ರೂಟ್ ಜವಾಬ್ದಾರಿಯುತ ಆಟದ ನೆರವಿನಿಂದ ಇಂಗ್ಲೆಂಡ್,​ 27 ರನ್​ಗಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯ್ತು. ಜೋ ರೂಟ್ ಹಾಗೂ ಜಾನಿ ಬೇರ್​ಸ್ಟೋ ವಿಕೆಟ್ ಪಡೆಯಲು ಟೀಮ್ ಇಂಡಿಯಾ ಬೌಲರ್​ಗಳು ಪರದಾಟ ನಡೆಸಿದ್ರು.

ಮತ್ತೊಂದೆಡೆ ಟೀಮ್ ಇಂಡಿಯಾ ಬೌಲರ್​ಗಳ ನೀರಸ ಪ್ರದರ್ಶನ ಕಂಡು ಕೋಚ್ ರವಿ ಶಾಸ್ತ್ರಿ ನಿದ್ದೆಗೆ ಜಾರಿದರು. ಶಾಸ್ತ್ರಿ ನಿದ್ದೆಗೆ ಜಾರಿದ್ದೆ ತಡ, ನೆಟ್ಟಿಗರಿಗೆ ಆಹಾರವಾಗಿದ್ದಾರೆ. ಲಂಕಾ ಸರಣಿಯಲ್ಲಿ ರಾಹುಲ್ ದ್ರಾವಿಡ್ ಕೋಚಿಂಗ್ ಕಂಪೇರ್​ ಮಾಡಿ ಕಾಲೆಳೆದಿದ್ದಾರೆ. ಅಷ್ಟೇ ಅಲ್ಲ..! ಈ ಹಿಂದೆ 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ರಾಂಚಿ ಟೆಸ್ಟ್​ ಪಂದ್ಯದ ವೇಳೆ ಹಾಗೂ ಇಂಗ್ಲೆಂಡ್​ನ ಎಡ್ಜ್​ಬಾಸ್ಟನ್ ಟೆಸ್ಟ್​ ವೇಳೆಯೂ ಕೋಚ್ ರವಿ ಶಾಸ್ತ್ರಿ ನಿದ್ದೆಗೆ ಜಾರಿ, ಟ್ರೋಲ್​ಗೆ ಒಳಗಾಗಿದ್ದರು.

Source: newsfirstlive.com Source link