‘ನಮ್ದು ಕಣೋ ಇದು’ ಧ್ವಜಸ್ತಂಭಕ್ಕೆ ಮುತ್ತಿಟ್ಟು ದೇಶಪ್ರೇಮ ಮೆರೆದ ಶಾಸಕ ಜಮೀರ್

‘ನಮ್ದು ಕಣೋ ಇದು’ ಧ್ವಜಸ್ತಂಭಕ್ಕೆ ಮುತ್ತಿಟ್ಟು ದೇಶಪ್ರೇಮ ಮೆರೆದ ಶಾಸಕ ಜಮೀರ್

ಬೆಂಗಳೂರು: ಶಾಶ್ವತವಾಗಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕು ಆಗ್ರಹಿಸಿ ತ್ರಿರಂಗಾ ಧ್ವಜ ಹರಿಸಿದ ವಿಚಾರವಾಗಿ ಕನ್ನಡ ಸಂಘಟನೆ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದ ಘಟನೆ ನಡೆಯಿತು. ಈ ವೇಳೆ ಪ್ರತಿಭಟನಾನಿರತರ ಮನವೊಲಿಸಲು ಮುಂದಾದ ಶಾಸಕ ಜಮೀರ್ ಅವರು, ಈ ಧ್ವಜ ನಮ್ದು ಕಣೋ ಎಂದು ಧ್ವಜಸ್ತಂಭಕ್ಕೆ ಮುಟ್ಟಿದ್ದಾರೆ.

ಇಂದು ಬೆಳಗ್ಗೆ ಕನ್ನಡ ಸಂಘಟನೆಯ ರಾಜೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಧ್ವಜ ಹಾರಿಸಲು ಬಿಟ್ಟರೂ ಸ್ಥಳದಿಂದ ರಾಜೇಶ್ ತೆರಳಲು ನಿರಾಕರಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಜಮೀರ್ ಅವರು ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು.

ಮೈದಾನದಲ್ಲಿ ಧ್ವಜಕಟ್ಟೆ ನಿರ್ಮಿಸಬೇಕು ಎಂದು ಒತ್ತಾಯ ಮಾಡಿದ ಕನ್ನಡ ಸಂಘಟನೆ ಕಾರ್ಯಕರ್ತರು, ಜಮೀರ್ ಮನವೊಲಿಸಿದರೂ ಸ್ಥಳದಿಂದ ತೆರಳಲು ನಿರಾಕರಿಸಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಪೊಲೀಸರು, ಕತ್ತಿಗೆ ಹಗ್ಗ ಕಟ್ಟಿಕೊಂಡ ಸೀನ್‌ಕ್ರಿಯೇಟ್ ಮಾಡೋದು ತಪ್ಪು ಎಂದು ತಿಳಿ ಹೇಳುವ ಪ್ರಯತ್ನ ಮಾಡಿದರು.

ಕೊನೆಗೂ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಶಾಸಕ ಜಮೀರ್, ಧ್ವಜಾರೋಹಣ ಮಾಡಿದ ಸ್ಥಳದಿಂದ ಎದ್ದೇಳಿ.. ಹಠ ಬಿಡಿ.ಇದು ಧ್ವಜ ನಮ್ದು ಕಣೋ. ಕೆಲವು ವಿವಾದ ಇರೋ ಏರಿಯಾದಲ್ಲಿ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕು. ಏಕಾಏಕಿ ನಾವು ಅನುಮತಿ ನೀಡಿದ್ರೂ ತಪ್ಪಾಗುತ್ತೆ. ಆದ್ರೂ ರಿಸ್ಕ್ ತೆಗೆದುಕೊಂಡು ಅನುಮತಿ ಕೊಡುತ್ತಿದ್ದೇನೆ. ಪ್ರತಿ ವರ್ಷ ಧ್ವಜರೋಹಣ ಮಾಡಲು ಅನುಮತಿ ಕೊಡಿಸುವುದಾಗಿ ಹೇಳಿದರು. ಆ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಟ್ಟರು. ಇದರಂತೆ ಆ.15 ಮತ್ತು ನ.1 ರಂದು ಧ್ವಜ ಹಾರಿಸೋಕೆ ಕಾನೂನಿ ಅನ್ವಯ ಅನುಮತಿ ಕೊಡಿಸಲು ಶಾಸಕ ಜಮೀರ್ ಸೂಚನೆ ನೀಡಿದರು.

Source: newsfirstlive.com Source link