ಬೆಚ್ಚಿ ಬಿದ್ದೀರಿ ಜೋಕೆ.. ಗ್ರೆನೇಡ್​​ ಅಲ್ಲಿ ಸಿಗರೇಟ್​ ಹಚ್ಚೋ ಆ್ಯಕ್ಷನ್ ಪ್ರಿನ್ಸ್ ಪೋಸ್ಟರ್ ರಿಲೀಸ್..!

ಬೆಚ್ಚಿ ಬಿದ್ದೀರಿ ಜೋಕೆ.. ಗ್ರೆನೇಡ್​​ ಅಲ್ಲಿ ಸಿಗರೇಟ್​ ಹಚ್ಚೋ ಆ್ಯಕ್ಷನ್ ಪ್ರಿನ್ಸ್ ಪೋಸ್ಟರ್ ರಿಲೀಸ್..!

ಲೈಟರ್​ ಅಲ್ಲಿ ಸಿಗರೇಟ್ ಹಚ್ಚೋದು ಕಾಮನ್.. ಕಾದ ಬಂದೂಕಿನ ಕೊಳವೆಯಲ್ಲೂ ಸಿಗರೇಟ್ ಹಚ್ಚೋದು..ಲೆಜೆಂಡ್ಸ್​​.. ಆದ್ರೆ.. ಗ್ರೆನೇಡ್​​ನಲ್ಲಿ ಸಿಗರೇಟ್​ ಹಚ್ಚಿದ್ರೆ? ಯೆಸ್ ನೀವು ಕರೆಕ್ಟ್ ಆಗಿಯೇ ಕೇಳಿಸಿಕೊಂಡ್ರಿ ಗ್ರೆನೇಡ್​​ನಲ್ಲಿ ಸಿಗರೇಟ್ ಹಚ್ಚೋದು.. ಅಲ್ಲಾ ಸ್ವಾಮಿ ಅದು ಹೆಂಗೆ ಸಾಧ್ಯ ಅಂತೀನಿ.. ಗ್ರೆನೆಡ್​ ಸಿಡಿದ್ರೆ ದೇಹಗಳೇ ಪೀಸ್​ ಪೀಸ್​ ಆಗ್ತಾವೆ.. ಇನ್ನು ಅದ್ರಿಂದ ಬೆಂಕಿ ಬರುತ್ತಾ? ಆ ಬೆಂಕಿಯಿಂದ ಸಿಗರೇಟ್ ಹಚ್ಚೋಕೆ ಸಾಧ್ಯಾನಾ? ಸಾಧ್ಯ ಅಂತಾರೆ ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ..!

blank

ಹೌದು.. ಮಾರ್ಟಿನ್ ಅನ್ನೋ ಹೆಸರಿನ ಚಿತ್ರದಲ್ಲಿ ಧ್ರುವ ಸರ್ಜಾ ನಟಿಸ್ತಿದ್ದಾರೆ.. ಅದಕ್ಕೆ ಸಂಬಂಧಿಸಿದ ಮೋಷನ್​ ಪೋಸ್ಟರ್​ ಅನ್ನೂ ಇಂದು ಅವರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಿಲೀಸ್​ ಮಾಡಿದ್ದಾರೆ. ಅದ್ರಲ್ಲಿ ಅವ್ರು ರಾ ಲುಕ್​​ನಲ್ಲಿ ಗ್ರೆನೇಡ್ ಕೈಯಲ್ಲಿ ಹಿಡಿದು.. ಅದ್ರಿಂದ ಬರ್ತಿರೋ ಬೆಂಕಿಯಿಂದ ಸಿಗರೇಟ್ ಹಚ್ಚುತ್ತಿದ್ದಾರೆ.. ಇದನ್ನ ನೋಡಿದ ಜನ ಮಾತ್ರ ಅಲ್ಲಾ ಸ್ವಾಮಿ ಶಾಟ್​​ಗನ್​ಗೆ ಸ್ನೈಪರ್​​ ರೈಫಲ್​​ಗೆ ಹಾಕೋ ಟೆಲಿಸ್ಕೋಪ್​ ಹಾಕಿರೋ ಬೀಸ್ಟ್​​ ಅನ್ನೋ ಪೋಸ್​​ ಕೊಟ್ಟೋರ್ನೇ ನಂಬೋ ಈ ಸಮಾಜದಲ್ಲಿ.. ಗ್ರೆನೇಡ್​​ನಿಂದ ಸಿಗರೇಟ್ ಹಚ್ಚೋಕೆ ಆಗಲ್ಲ ಅಂತಾ ಹೇಳೋಕೆ ಆಗುತ್ತಾ..? ಅಂತ ಪ್ರಶ್ನೆ ಮಾಡಿಕೊಳ್ತಿದ್ದಾರೆ..!

ಒಟ್ಟಿನಲ್ಲಿ ಌಕ್ಷನ್​ ಪ್ರಿನ್ಸ್​, ಅದ್ಧೂರಿ ಹುಡುಗ ಧ್ರುವ ಸರ್ಜಾ ಅಭಿನಯಿಸುತ್ತಿರುವ, ಉದಯ್​ ಕೆ. ಮೆಹ್ತಾ ನಿರ್ಮಾಣದ, ಎ.ಪಿ. ಅರ್ಜುನ್​ ನಿರ್ದೇಶನದ ‘ಮಾರ್ಟಿನ್​’ ಚಿತ್ರದ ಮೋಶನ್​ ಪೋಸ್ಟರ್​ ಇಂದು ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಭಜರಂಗಿ ಭಕ್ತ ಧ್ರುವ ಸರ್ಜಾ ಗ್ರೇನೆಡ್​ ಉರಿಗೆ ಸಿಗರೇಟ್​ ಹಚ್ಚುತ್ತಿರುವ ದೃಶ್ಯ ಸಾಕಷ್ಟು ವೈರಲ್​ ಆಗುತ್ತಿದೆ.

ಮೊದಲ ಬಾರಿಗೆ ಡಾರ್ಕ್​ ಲುಕ್​ನಲ್ಲಿ ಕಾಣಿಸಿಕೊಂಡ ಧ್ರುವ ಸರ್ಜಾ ಗ್ರೇನೆಡ್​ನ ಕೆನ್ನಾಲಿಗೆಗೆ ಸಿಗರೇಟ್​ ತಾಕೀಸಿ ಬೆಂಕಿ ಹೊತ್ತಿಸುತ್ತಿದ್ದಾರೆ. ಸದ್ಯ ದೃಶ್ಯ ಎಲ್ಲೆಡೆ ವೈರಲ್​ ಆಗುತ್ತಿದೆ. ಒಟ್ಟಿನಲ್ಲಿ ನೋ ಲಾಜಿಕ್.. ಓನ್ಲಿ ಮ್ಯಾಜಿಕ್ ಅಟೆಯಾ..!!!

 

Source: newsfirstlive.com Source link