ಕಳೆದ ವರ್ಷ ‘ನನ್ನ ನಿವೃತ್ತಿಯನ್ನ ಪರಿಗಣಿಸಿ’ ಎಂದಿದ್ದ ಧೋನಿ..!

ಕಳೆದ ವರ್ಷ ‘ನನ್ನ ನಿವೃತ್ತಿಯನ್ನ ಪರಿಗಣಿಸಿ’ ಎಂದಿದ್ದ ಧೋನಿ..!

ಮಹೇಂದ್ರ ಸಿಂಗ್ ಧೋನಿ, ಟೀಮ್ ಇಂಡಿಯಾದ ಶ್ರೇಷ್ಟ ನಾಯಕ.. ದಿ ಗ್ರೇಟ್ ಲೀಡರ್.. ಅಂತರಾಷ್ಟ್ರೀಯ ವೈಟ್​ಬಾಲ್​​ ಕ್ರಿಕೆಟ್​ಗೆ ಧೋನಿ ಗುಡ್​ಬೈ ಹೇಳಿ, ಇಂದಿಗೆ ಒಂದು ವರ್ಷ ಆಯ್ತು. ಕಳೆದ ವರ್ಷ ಆಗಸ್ಟ್ 15ರಂದು ಟಿ20 ಹಾಗೂ ಏಕದಿನ ಕ್ರಿಕೆಟ್​ಗೆ ವಿದಾಯ ಘೋಷಿಸಿದ ಧೋನಿ, ಸ್ವಾತಂತ್ರ್ಯ ದಿನಾಚರಣೆಯಂದೇ ಬಹುದೊಡ್ಡ ನಿರ್ಧಾರ ಕೈಗೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಅದ್ರಲ್ಲೂ ದೇಶಭಕ್ತರಾಗಿರುವ ಮಹೇಂದ್ರ ಸಿಂಗ್ ಧೋನಿ, ಸ್ವಾತಂತ್ರ್ಯ ಬಂದ ದಿನಕ್ಕಿಂತ ಮಹತ್ವದ ದಿನ ಮತ್ತೊಂದಿಲ್ಲ ಎಂಬ ಕಾರಣಕ್ಕೆ, ಇದೇ ದಿನ ಅಂತರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್ ಗುಡ್​ಬೈ ಹೇಳಿದ್ದರು.

ಇನ್ನು ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ, 2007 ಐಸಿಸಿ ಟಿ20 ವಿಶ್ವಕಪ್, ನಂತರ, 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್​ಗೆ ಮುತ್ತಿಟ್ಟಿತ್ತು. ಅಷ್ಟೇ ಅಲ್ಲದೆ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ತಂದುಕೊಟ್ಟಿದ್ದರು. ಆ ಮೂಲಕ ಐಸಿಸಿ ಹೆಚ್ಚು ಟ್ರೋಫಿಗಳನ್ನ ಗೆದ್ದ ಭಾರತದ ಏಕೈಕ ನಾಯಕ ಎಂಬ ಹೆಗ್ಗಳಿಕೆ ಧೋನಿಯವರದ್ದಾಗಿದೆ. ಸದ್ಯ ಈ ಶ್ರೇಷ್ಠ ದಿಗ್ಗಜನ ವಿದಾಯವನ್ನ ನೆನಪಿಸಿಕೊಳ್ಳತ್ತಾ ಬಿಸಿಸಿಐ ಟ್ವಿಟ್​ ಮಾಡಿದೆ. ಅಷ್ಟೇ ಅಲ್ಲ.. ಧೋನಿ ನಿವೃತ್ತಿ ಘೋಷಣೆ ಬೆನ್ನಲ್ಲೇ ಇದೇ ದಿನ ಸುರೇಶ್​ ರೈನಾ ಕೂಡ ನಿವೃತ್ತಿ ಪ್ರಕಟಿಸಿ ಅಚ್ಚರಿ ಮೂಡಿಸಿದ್ದರು..

Source: newsfirstlive.com Source link