ಮಂಡ್ಯದಲ್ಲಿ ಮತ್ತೆ ಕೊರೊನಾ ಸ್ಫೋಟ: ಗ್ರಾಮದ ಬರೋಬ್ಬರಿ 35 ಜನರಲ್ಲಿ ಸೋಂಕು ದೃಢ

ಮಂಡ್ಯದಲ್ಲಿ ಮತ್ತೆ ಕೊರೊನಾ ಸ್ಫೋಟ: ಗ್ರಾಮದ ಬರೋಬ್ಬರಿ 35 ಜನರಲ್ಲಿ ಸೋಂಕು ದೃಢ

ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಸ್ಫೋಟಗೊಂಡಿದೆ. ಒಂದೇ ಗ್ರಾಮದ ಬರೋಬ್ಬರಿ 35 ಜನರಿಗೆ ಕೊರೊನಾ ಮಹಾಮಾರಿ ವಕ್ಕರಿಸಿದ್ದು, ಜಿಲ್ಲೆಯಲ್ಲಿ ಆತಂಕ ಹುಟ್ಟು ಹಾಕಿದೆ.

ಜಿಲ್ಲೆಯ ಪಾಂಡವಪುರ ತಾಲೂಕಿನ ತಿಮ್ಮನಕೊಪ್ಪಲು ಗ್ರಾಮದಲ್ಲಿ 35 ಜನರಲ್ಲಿ ಕೊರೊನಾ ಸೋಂಕು ತಗುಲಿವುದು ಖಾತ್ರಿಯಾಗಿದ್ದು, ಮೂರನೇ ಅಲೆ ಸದ್ದಿಲ್ಲದೆ ರಾಜ್ಯದಲ್ಲಿ ತನ್ನ ದಾಂಗುಡಿ ಇಟ್ಟಿದೆ ಎಂಬ ಅನುಮಾನ ಎದುರಾಗಿದೆ. ಗ್ರಾಮದ ಮಕ್ಕಳಲ್ಲಿ ಮಹಾಮಾರಿ ಕಾಣಿಸಿಕೊಂಡಿದ್ದು ಗ್ರಾಮವನ್ನು ಸಂಪೂರ್ಣವಾಗಿ ಸೀಲ್​ಡೌನ್​ ಮಾಡಲಾಗಿದೆ.

blankಇದನ್ನೂ ಓದಿ: ಸಕ್ರಮ ಮಾಡಿ ಅನ್ನೋ ಮೊದಲು ಅಕ್ರಮ ಎಂದು‌ ಒಪ್ಪಿಕೊಳ್ಳಿ-ಸುಮಲತಾ ಅಂಬರೀಶ್​

ಕಳೆದ ವಾರ ಗ್ರಾಮದಲ್ಲಿನ ಓರ್ವ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ಕೊರೊನಾ ನಿಯಮ ಉಲ್ಲಂಘಿಸಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಅಂತ್ಯ ಸಂಸ್ಕಾರದ ಬಳಿಕ ಕೆಲವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದೆ. ಪರೀಕ್ಷೆ ಮಾಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅಂತ್ಯ ಸಂಸ್ಕಾರದ ಸಮಯದಲ್ಲೇ ಕೊರೊನಾ ಹರಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

blank

ಸದ್ಯ ತಿಮ್ಮನಕೊಪ್ಪಲು ಗ್ರಾಮವನ್ನು ಸೀಲ್​ಡೌನ್​ ಮಾಡಲಾಗಿದ್ದು, ಗ್ರಾಮದಲ್ಲಿರುವ ಎಲ್ಲರಿಗೂ ಕೊರೊನಾ ಟೆಸ್ಟ್ ಮಾಡಲು ಜಿಲ್ಲಾಡಳಿತ ಆರೋಗ್ಯ ಇಲಾಖೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ..

ಇದನ್ನೂ ಓದಿ: ಗಡಿ ಜಿಲ್ಲಾಡಳಿತಗಳ ನಿದ್ದೆಗೆಡಿಸಿದ ನಕಲಿ RTPCR ವರದಿಗಳ ಹಾವಳಿ

Source: newsfirstlive.com Source link