‘ಲಂಕಾದಿಂದ ಶಾಂತಿ, ಪ್ರೀತಿ & ಗೌರವ ಸಿಗುತ್ತೆ’ -ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದ ವಿಕ್ರಂತ್​ ರೋಣನ ಬೆಡಗಿ

‘ಲಂಕಾದಿಂದ ಶಾಂತಿ, ಪ್ರೀತಿ & ಗೌರವ ಸಿಗುತ್ತೆ’ -ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದ ವಿಕ್ರಂತ್​ ರೋಣನ ಬೆಡಗಿ

ಜಾಕ್ವೆಲಿನ್ ಫರ್ನಾಂಡಿಸ್.. ಶ್ರೀಲಂಕನ್ ಪ್ರಜೆಯಾಗಿದ್ದರು ಇಂಡಿಯನ್ ಸಿನಿ ರಸಿಕರಿಗೆ ಜಾಕ್ವೆಲಿನ್ ಅಂದ್ರೆ ಅಚ್ಚುಮೆಚ್ಚು. ಈ ಶ್ರೀಲಂಕನ್​ ಕ್ಯೂಟಿ ಬಾಲಿವುಡ್​ ಬ್ಯೂಟಿ ಹುಟ್ಟಿದು ಬೆಳೆದಿದು ಶ್ರೀಲಂಕದಲ್ಲಾದ್ರು ಈಕೆ ಬದುಕಿಗೆ ಸಕ್ಸಸ್​ ತಂದುಕೊಟ್ಟಿದು ಮಾತ್ರ ಭಾರತ . ಹೀಗಾಗಿ ಸ್ಯಾಂಡಲ್​ವುಡ್​ನ ಗಡಂಗ್​ ರಕ್ಕಮ ಭಾರತದ ಮೇಲೆ ಅಪಾರ ಗೌರವವನ್ನು ಹೊಂದಿದ್ದಾರೆ.

2009 ರಲ್ಲಿ ಅಲಾಡಿನ್​ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಈ ಶ್ರೀಲಂಕನ್​ ಚೆಲುವೆ ಬಹಳ ಕಡಿಮೆ ಅವಧಿಯಲ್ಲೆ ಬಾಲಿವುಡ್​ನ ಟಾಪ್​ ನಟಿಮಣಿಯರ ಪೈಕಿ ಒಬ್ಬರಾದರು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿ ಬಾಲಿವುಡ್​ನ ಸ್ಟಾರ್​ ನಟರ ಜೊತೆ ನಟಿಸಿ ಸೈ ಎನಿಸಿಕೊಂಡು, ಮೊನ್ನೆಯಷ್ಟೆ ನಮ್ಮ ಸ್ಯಾಂಡಲ್​ವುಡ್​ನ ಕಿಚ್ಚ ಸುದೀಪ್​ ಆಭಿನಯದ ವಿಕ್ರಾಂತ್​ ರೋಣ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸಲ್ಲು ಮುಂಬೈನಿಂದ ಬೆಂಗಳೂರಿಗೆ ಬಂದು ಹೋಗಿದ್ದಾರೆ.

ಇನ್ನು ಇಂದು ಭಾರತದ 75ನೇ ಸ್ವಾತಂತ್ರೋತ್ಸವವಾಗಿದು ಭಾರತದ ಬಗ್ಗೆ ಅಪಾರ ಗೌರವ ಹೊಂದಿರೋ ಜಾಕ್ವೆಲಿನ್ ಫರ್ನಾಂಡಿಸ್ ಭಾರತದ ಬಗ್ಗೆ ಎನ್ನು ಹೇಳಿದ್ದಾರೆ ಗೊತ್ತಾ..?

“ಭಾರತದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು !! ನೀವು ನನಗೆ ನನ್ನ ಜೀವನದಲ್ಲಿ ಎಲ್ಲದನ್ನೂ ನೀಡಿದಕ್ಕಾಗಿ ನಿಮಗೆ ಧನ್ಯವಾದಗಳು. ಶ್ರೀಲಂಕಾದಿಂದ ಯಾವಾಗಲೂ ನಿಮಗೆ ಶಾಂತಿ ,ಪ್ರೀತಿ ಮತ್ತು ಗೌರವವನ್ನು ಅರ್ಪಿಸುತ್ತೇನೆ ” ಅಂತಾ ಜಾಕ್ವೆಲಿನ್ ಫರ್ನಾಂಡಿಸ್ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Source: newsfirstlive.com Source link