ನಿರಂಜನಾನಂದ ಪುರಿ ಸ್ವಾಮೀಜಿ ಮುಂದಿನ ದಿನ ಸಂಗೊಳ್ಳಿ ರಾಯಣ್ಣ ಆಗ್ತಾರೆ -ಸಿಎಂ ಬೊಮ್ಮಾಯಿ

ನಿರಂಜನಾನಂದ ಪುರಿ ಸ್ವಾಮೀಜಿ ಮುಂದಿನ ದಿನ ಸಂಗೊಳ್ಳಿ ರಾಯಣ್ಣ ಆಗ್ತಾರೆ -ಸಿಎಂ ಬೊಮ್ಮಾಯಿ

ಬೆಂಗಳೂರು  ಸ್ವಾತಂತ್ರ ಹೋರಾಟಗಾರ  ಸಂಗೊಳ್ಳಿ ರಾಯಣ್ಣ ಅಂದ್ರೆ ನಮ್ಮ ಕೂದಲು ನೆಟ್ಟಗಾಗುತ್ತದೆ, ಈ ಭೂಮಿಗೆ ಅಪರೂಪವಾಗಿ ಜನ್ಮ ಪಡೆದ ಸಂಗೊಳ್ಳಿ ರಾಯಣ್ಣನನ್ನು ನೆನೆದಾಗ ರೋಮಾಂಚನವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ..

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 224 ಜಯಂತೋತ್ಸವ ಅಂಗವಾಗಿ ನಗರದ ಎನ್.ಆರ್ ವೃತ್ತದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಸಂಬಂಧ ತಾಯಿ ಮಗನ ಸಂಬಂಧದ ತರ ಇತ್ತು ಎಂದಿದ್ದಾರೆ. ಇಂದು ಸಂಗೊಳ್ಳಿ ರಾಯಣ್ಣ ಇದ್ರೆ ಕಿತ್ತೂರು ಉತ್ಸಾಹದಿಂದ ಇರ್ತಿತ್ತು. ಅಂತಹ ರಾಯಣ್ಣನನ್ನು ಮೋಸದಿಂದ ಸೆರೆ ಹಿಡಿದರು ಅಂತವರಿಗೆ ಶಾಪ ತಟ್ಟದೆ ಇರಲಾರದು ಎಂದರು.

blank

ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೆ ಏರಿಸುವಾಗ ಇಡೀ ನಾಡೆ ಕಣ್ಣೀರು ಹಾಕಿದೆ. ತಾಯಿ‌ ಕೂಡ ಸಂಗೊಳ್ಳಿ ರಾಯಣ್ಣಗೆ ಹೋಗಿ ಬಾ ಮಗನೇ ಅಂತ ಆಶೀರ್ವಾದ ಮಾಡಿದ್ರು ಅಂತಹ ವ್ಯಕ್ತಿಯ ನೆನೆಪು ಇಂದು ನಮ್ಮ ದೇಹದ ಕಣ ಕಣದಲ್ಲಿದೆ ಎಂದಿದ್ದು, ಇನ್ನು ನಮ್ಮ ಸರ್ಕಾರ ಸಂಗೊಳ್ಳಿ ಮತ್ತು ನಂದಗಡದ ಅಭಿವೃದ್ದಿಗೆ ಬದ್ಧವಾಗಿದೆ ಎಂದಿದ್ದಾರೆ.

blank

ಇದನ್ನೂ ಓದಿ:  ಸಿಎಂಗೆ ಬೆಳ್ಳಿ ಗದೆ ನೀಡಿ ಅದ್ಧೂರಿ ಸ್ವಾಗತ ಕೋರಿದ ಸಚಿವ ಎಂಟಿಬಿ

ಮುಂದುವರೆದು ಮಾತನಾಡಿದ ಅವರು ನಂದಗಡದಲ್ಲಿ ಸೈನಿಕ ಶಾಲೆ ಹಾಗೂ ಮ್ಯೂಜಿಯಮ್ ಸೇರಿದಂತೆ 80ಕೋಟಿ ಮಂಜೂರು ಮಾಡಲಾಗಿದೆ. ಇನ್ಮುಂದೆ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಂಗೊಳ್ಳಿ ರಾಯಣ್ಣ ಜಯಂತಿ ಮಾಡಲು‌ ಹೇಳಿದ್ದೇನೆ ಮತ್ತು ರಾಜಧಾನಿ ದೆಹಲಿಯಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣ ಕುರಿತು ಚರ್ಚೆ ಮಾಡುತ್ತೇನೆ ಎಂದಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಬೇಡಿಕೆ ಬಂದಿದೆ. ನಿರಂಜನಾನಂದ ಪುರಿ ಸ್ವಾಮೀಜಿ ಕನಕದಾಸರ ಗುಣ ಅಳವಡಿಸಿಕೊಂಡಿದ್ದಾರೆ. ನಿರಂಜನಾನಂದ ಪುರಿ ಸ್ವಾಮೀಜಿ ಮುಂದಿನ ದಿನ ಸಂಗೊಳ್ಳಿ ರಾಯಣ್ಣ ಆಗ್ತಾರೆ. ಈಗಾಗಲೇ ಕಾಗಿನೆಲೆ ಅಭಿವೃದ್ಧಿ 40 ಕೋಟಿಯಲ್ಲಿ ಆಗಿದೆ ಎಂದರು.

ಕಾರ್ಯಕ್ರಮದಲ್ಲಿ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ದಿನೇಶ್​ ಗುಂಡೂರಾವ್​, ಆರ್.ಅಶೋಕ್​, ಎಂಟಿಬಿ ನಾಗರಾಜ್​ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಭಾಗವಹಿಸಿದ್ದರು.

 

Source: newsfirstlive.com Source link