ವಿಚ್ಚೇದನ ಪಡೆದು 5 ವರ್ಷಕ್ಕೆ ಮರು ಮದುವೆ.. ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯ್ತು ಮೈಸೂರು

ವಿಚ್ಚೇದನ ಪಡೆದು 5 ವರ್ಷಕ್ಕೆ ಮರು ಮದುವೆ.. ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯ್ತು ಮೈಸೂರು

ಮೈಸೂರು: ಐದು ವರ್ಷದ ಹಿಂದೆ ವಿಚ್ಛೇದನ ಪಡೆದಿದ್ದ ದಂಪತಿಗೆ ಜಿಲ್ಲಾ ಸತ್ರ ನ್ಯಾಯಾಲಯ ಮರು ಮದುವೆ ಮಾಡಿಸುವ ಮೂಲಕ ವಿನೂತನ ಸನ್ನಿವೇಶವೊಂದಕ್ಕೆ ಸಾಕ್ಷಿಯಾಗಿದೆ.

ಹೌದು ಮೈಸೂರಿನ ಜ್ಯೋತಿ ನಗರದ ದಂಪತಿಗಳು 25 ವರ್ಷ ದಾಂಪತ್ಯ ಜೀವನ ನಡೆಸಿ ಐದು ವರ್ಷಗಳ ಹಿಂದೆ ವಿಚ್ಚೇದನ ಪಡೆದಿದ್ದರು. 1 ಗಂಡು 2 ಹೆಣ್ಣು ಮಕ್ಕಳನ್ನು ಹೊಂದಿದ್ದ ದಂಪತಿ ವೈಯುಕ್ತಿಕ ಮನಃಸ್ತಾಪ ಗಳಿಂದ ವಿಚ್ಚೇದನ ಪಡೆದು ಜೀವನಾಂಶಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು ಎನ್ನಲಾಗಿದೆ.‌.

blank

ಆದರೆ ಜಿಲ್ಲಾ ಸತ್ರ ನ್ಯಾಯಾಲಯ ಮೆಗಾ ಲೋಕ ಅದಾಲತ್ ನಡೆಸಿದ ಹಿನ್ನೆಲೆ..ರಾಜಿ ಸಂಧಾನದ ಮೂಲಕ ದಂಪತಿಗಳ ಮನವೊಲಿಸಿ ವಿಚ್ಛೇದನ ರದ್ದು ಮಾಡಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್ ನೇತೃತ್ವದಲ್ಲಿ ಮರು ಮದುವೆ ಮಾಡಿಸಿದ್ದಾರೆ.

ಇದನ್ನೂ ಓದಿ:  ನಿಂಬೆ ಹಣ್ಣಿಗಿಂತ ವಿಭಿನ್ನ ನಿಂಬೆ ಹಣ್ಣು ಬಂತು ನೋಡು; ಈ ನಿಂಬೆಗೆ ಮನಸೋತಿತು ಮೈಸೂರು

ಸತ್ರ ನ್ಯಾಯಾಲಯ ಮೆಗಾ ಲೋಕ ಅದಾಲತ್​ನಲ್ಲಿ ಒಂದೇ ದಿನ 12 ಸಾವಿರ ಪ್ರಕರಣ ಸುಖಾಂತ್ಯ ಕಂಡಿದ್ದು, 19 ವಿಚ್ಛೇದನ ಪ್ರಕರಣಗಳನ್ನು ರಾಜಿ ಮೂಲಕ ಸಂಧಾನಗೊಂಡಿವೆ. ಇನ್ನೂ 2 ಸಾವಿರ ಪ್ರಕರಗಳು ಸದ್ಯದಲ್ಲೇ ಸುಖಾಂತ್ಯ ಕಾಣುವ ಸಾಧ್ಯತೆಗಳಿವೆ ಎಂದು ಸತ್ರ ನ್ಯಾಯಾಲಯ ತಿಳಿಸಿದೆ.

Source: newsfirstlive.com Source link