ಸುಧಾರಾಣಿಗೆ ಬಿಗ್​​ ಸರ್ಪ್ರೈಸ್ ಕೊಟ್ಟ ನಟಿ ಶ್ರುತಿ, ಮಾಳವಿಕಾ ಅವಿನಾಶ್

ಸುಧಾರಾಣಿಗೆ ಬಿಗ್​​ ಸರ್ಪ್ರೈಸ್ ಕೊಟ್ಟ ನಟಿ ಶ್ರುತಿ, ಮಾಳವಿಕಾ ಅವಿನಾಶ್

ಸುಧಾರಾಣಿ 90 ರ ದಶಕದ ಸ್ಯಾಂಡಲ್​ವುಡ್​ನ ಟಾಪ್​ ನಟಿಮಣಿಯಲೊಬ್ಬರು, 1978ರಲ್ಲಿ ತರೆಕಂಡ ಕಿಲಾಡಿ ಕಿಟ್ಟು ಚಿತ್ರದ ಮೂಲಕ ಬಾಲ ಕಲಾವಿದೆಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟು ಬಳಿಕ 1986ರಲ್ಲಿ ಬಿಡುಗಡೆಯಾದ ಅನಂದ್​ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿ ಕನ್ನಡ ಚಿತ್ರರರಂಗದಲ್ಲಿ ಸೈ ಎನಿಸೊಕೊಂಡವರು.

blank

ಅಂದಿನಿಂದ ಇಂದಿನ ವರೆಗೂ ಅನೇಕ ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರಪ್ರೇಮಿಗಳನ್ನು ರಂಜಿಸುತ್ತಲೆ ಬಂದಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್​ ನಟಿಮಣಿಯಾಗಿ ಮಿಂಚಿ ಇಂದು ಸ್ಟಾರ್​ ಪೋಷಕ ನಟಿಯಾಗಿ ಮಿಂಚುತಿದ್ದಾರೆ. ಅಂದದ ಚೆಂದದ ಈ ನಟಿ ನಿನ್ನೆಯಷ್ಟೆ 51 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

blank

ಇನ್ನು ಸುಧಾರಾಣಿಯವರ ಹುಟ್ಟು ಹಬ್ಬದ ಸಲುವಾಗಿ ಅವರ ಅಚುಮೆಚ್ಚಿನ ಗೆಳತಿಯರಾದ ನಟಿ ಶ್ರುತಿ ಹಾಗೂ ನಟಿ ಮಾಳವಿಕಾ ಅವಿನಾಶ್,​ ಸುಧಾರಾಣಿಯಾವರಿಗೆ ಬ್ಯುಟಿಫುಲ್​ ಬರ್ತ್​ಡೇ ಸರ್ಪ್ರೈಸ್ ನೀಡಿದ್ದಾರೆ. ಟೈಮ್​ ಸಿಕ್ಕಿದಾಗ ಎಲ್ಲ ಈ ನಟಿಯರು ಒಟ್ಟಿಗೆ ಸೇರಿ ಹರಟೆ ಹೊಡೆದು ಪಾರ್ಟಿ ಗಿರ್ಟಿ ಮಾಡಿ ಎಂಜಾಯ್ ಮಾಡತ್ತಾರೆ. ಮೊನ್ನೆಯಷ್ಟೆ ಎಲ್ಲರೂ ಹಿರಿಯ ಕಲಾವಿದೆ ಲೀಲಾವತಿ ಮನೆಗೆ ಭೇಟಿ ಕೊಟಿದ್ರು.

blank

ಈಗ ಸುಧಾರಾಣಿ ಬರ್ತ್​ಡೇ ಪ್ರಯುಕ್ತ ಮತ್ತೆ ಎಲ್ಲರೂ ಒಟ್ಟಾಗಿ ಸೇರಿ ಕೇಕ್​ ಕತ್ತರಿಸುವ ಮೂಲಕ ಸುಧಾರಾಣಿಯವರ ಬರ್ತ್​ಡೇ ಸೆಲೆಬ್ರೆಟ್​ ಮಾಡಿದ್ದಾರೆ. ಇನ್ನು ತಮ್ಮ ನೆಚ್ಚಿನ ಗೆಳತಿಯ ಬರ್ತ್​ಡೇ ಸಂಭ್ರಮದಿಂದ ಆಚರಿಸಿದ ಶ್ರುತಿ ಬರ್ತ್​ಡೇ ಸೆಲಬ್ರೇಶನ್​ ವೀಡಿಯೊವನ್ನು ತಮ್ಮ ಇನ್​ಸ್ಟಾ ಗ್ರಾಮ್​ ನಲ್ಲಿ ಹಂಚಿಕೊಂಡು, “ಪ್ರೀತಿಯ ಗೆಳತಿ ಚುಮ್ಮಿಗೆ ಹುಟ್ಟುಹಬ್ಬದ ಶುಭಾಶಯಗಳು ಜಗತ್ತಿನ ಎಲ್ಲಾ ಸಂತೋಷ, ನೆಮ್ಮದಿ ನಿನ್ನ ದಾಗಲಿ ಪ್ರತಿವರ್ಷ ಹೀಗೆ birthday surprise ಕೊಡುವ ಅವಕಾಶ ಸಿಗಲಿ…. Have a wonderful life dear ಎಂದು ಬರೆದು ಕೊಂಡಿದ್ದಾರೆ.”

Source: newsfirstlive.com Source link