ಮುಂಬೈನಲ್ಲೂ ಸುದೀಪ್​​​ ಅಭಿನಯದ ವಿಕ್ರಾಂತ್​ ರೋಣ​​ ಸಿನಿಮಾದ್ದೇ ಹವಾ..

ಮುಂಬೈನಲ್ಲೂ ಸುದೀಪ್​​​ ಅಭಿನಯದ ವಿಕ್ರಾಂತ್​ ರೋಣ​​ ಸಿನಿಮಾದ್ದೇ ಹವಾ..

ವಿಕ್ರಾಂತ್​ ರೋಣ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಮೊನ್​ ಮೊನ್ನೆಯಷ್ಟೆ IMDB ಪ್ರಕಟಿಸಿರುವ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು ವಿಕ್ರಾಂತ್ ರೋಣ ಸಿನಿಮಾ. ಅಗಾಗ ಎನಾದ್ರೂ ಒಂದು ಡಿಫ್ರೆಂಟ್ ಸಮಾಚಾರಗಳಿಂದ ವಿಕ್ರಾಂತ್ ರೋಣ ಚಿತ್ರತಂಡ ಸದ್ದು ಗದ್ದಲ ಮಾಡ್ತಾನೇ ಇರುತ್ತೆ.

blank

ಕಳೆದ ತಿಂಗಳು ಜುಲೈ 31ನೇ ತಾರೀಖು ವಿಕ್ರಾಂತ್​ ರೋಣದ ಚಿತ್ರದ ನಿರ್ಮಾಪಕ ಜಾಕ್​ ಮಂಜು, ಶ್ರಿಲಂಕನ್​ ಚೆಲುವೆ ಜಾಕ್ವೆಲಿನ್ ಫರ್ನಾಂಡಿಸ್ ವಿಕ್ರಾಂತ್​ ರೋಣ ಚಿತ್ರದಲ್ಲಿ ನಿರ್ವಹಿಸುತ್ತಿರುವ ಪಾತ್ರದ ಹೆಸರನ್ನ ​ ಮುಂಬೈನಲ್ಲಿ ಬಹಳ ಅದ್ದೂರಿಯಾಗಿ ರೀವಿಲ್​ ಮಾಡಿದ್ರು. ಅದಾದ ಬಳಿಕ ಈಗಲೂ ಮುಂಬೈನಲ್ಲಿ ವಿಕ್ರಾಂತ್​ ರೋಣನ ಕ್ರೆಜ್​ ಸ್ವಲನೂ ಕಡಿಮೆ ಆಗಿಲ್ಲ. ಮುಂಬೈನಲ್ಲಿ ವಿಕ್ರಾಂತ್​ ರೋಣನ ಕ್ರೇಜ್​ ಎಷ್ಟರ ಮಟ್ಟಿಗೆ ಇದೆ ಅಂತಾ ಕಬ್ಜ ಚಿತ್ರದ ನಿರ್ದೇಶಕ ಆರ್​ ಚಂದ್ರು ಹೇಳಿದ್ದಾರೆ.

blank

ಮುಂಬೈಗೆ ಭೇಟಿ ನೀಡಿದ ಆರ್​. ಚಂದ್ರು ಮಂಬೈನಲ್ಲಿ ಸಂಚರಿಸುತ್ತಿದ್ದಾಗ ಮುಂಬೈನ ಬೀದಿಗಳಲ್ಲಿ ದೊಡ್ಡದಾಗಿ ಹಾಕಿದ ವಿಕ್ರಾಂತ್​ ರೋಣನ ಪೋಸ್ಟರ್​ನ ವೀಡಿಯೊ ಮಾಡಿ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಹಂಚಿಕೊಂಡು “ವಿಕ್ರಾಂತ ರೋಣ ಸಿನಿಮಾ ಮುಂಬೈನ ಬೀದಿ ಬೀದಿಗಳಲ್ಲೂ ಪ್ರಕಾಶಿಸುತ್ತಿದೆ. ಆಲ್ ದಿ ಬೆಸ್ಟ್ “ವಿಕ್ರಾಂತ ರೋಣ” ಕಿಚ್ಚ ಸುದೀಪ್​​​ ಮತ್ತು ಮಂಜುನಾಥ್​​ ಗೌಡ ಎಂದು ಬರೆದುಕೊಂಡಿದ್ದಾರೆ.

Source: newsfirstlive.com Source link