ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ತಾಲಿಬಾನಿಗಳ ವಶ; ಅಶ್ರಫ್ ಗನಿ ರಾಜೀನಾಮೆ

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ತಾಲಿಬಾನಿಗಳ ವಶ; ಅಶ್ರಫ್ ಗನಿ ರಾಜೀನಾಮೆ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರೆದಿದ್ದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ ನಗರವನ್ನ ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ತಾಲಿಬಾನ್ ಸದ್ದಿಗೆ ಅಫ್ಘಾನ್ ಸರೆಂಡರ್ ಆಗಿದ್ದು ಶಾಂತಿಯುತವಾಗಿ ಸರ್ಕಾರವನ್ನ ಹಸ್ತಾಂತರಿಸಲು ನಿರ್ಧಾರ ಮಾಡಿದ್ದಾರೆ.

ಕಾಬೂಲ್​ ವಶವಾದ ತಕ್ಷಣವೇ ಅಫ್ಘಾನಿಸ್ತಾನ ಸರ್ಕಾರ ತಾಲಿಬಾನಿಗಳಿಗೆ ಶರಣಾಗಿದೆ. ಅಧಿಕೃತವಾಗಿ ಅಫ್ಘಾನ್ ಸರ್ಕಾರ​ ಹಸ್ತಾಂತರ ಪ್ರಕ್ರಿಯೆ ಶುರುವಾಗಿದ್ದು ಈ ಬಗ್ಗೆ ಅಫ್ಘಾನಿಸ್ತಾನ ಆಂತರಿಕ ಸಚಿವರಿಂದ ಅಧಿಕೃತ ಘೋಷಣೆ ಹೊರಬಿದ್ದಿದೆ.

blank

ಕಾಬೂಲ್​ ವಶದ ಬಳಿಕ ಇಡೀ ಅಫ್ಘಾನ್​​​ ತಾಲಿಬಾನ್​ ತೆಕ್ಕೆಗೆ ಸಿಲುಕಿದಂತಾಗಿದೆ. ಸತತ ಒಂದು ತಿಂಗಳ ಕಾದಾಟದಲ್ಲಿ ಕೊನಗೆ ಸರ್ಕಾರ ಸೋಲೊಪ್ಪಿಕೊಂಡಿದೆ. ಹಂತ ಹಂತವಾಗಿ ಅಫ್ಘಾನ್​​​​ನ 18ಕ್ಕೂ ಹೆಚ್ಚು ಪ್ರಾಂತ್ಯಗಳು ತಾಲಿಬಾನ್​ ವಶವಾಗಿವೆ.

blank

ಇನ್ನು ಅಫ್ಘಾನಿಸ್ತಾನದ ಅಧ್ಯಕ್ಷ ಸ್ಥಾನಕ್ಕೆ ಆಶ್ರಫ್​ ಗನಿ ರಾಜೀನಾಮೆ ನೀಡಿದ್ದಾರೆ.. ಅಫ್ಘಾನ್​ ವಶವಾದ ತಕ್ಷಣ ತಾಲಿಬಾನಿಗಳಿಂದ ಸಂದೇಶವೊಂದು ಹೊರಬಿದ್ದಿದ್ದು ನಾವು ಯಾರ ಮೇಲೂ ಸೇಡು ತೀರಿಸಿಕೊಳ್ಳುವ ಉದ್ದೇಶ ಹೊಂದಿಲ್ಲ. ಸರ್ಕಾರ ಮತ್ತು ಸೇನೆಗೆ ಸೇವೆ ಸಲ್ಲಿಸಿದ ಎಲ್ಲರನ್ನೂ ಕ್ಷಮಿಸಲಾಗುವುದು. ನಾಗರಿಕರು ಭಯಪಡುವ ಅಗತ್ಯವಿಲ್ಲ, ಯಾರೂ ಅಫ್ಘಾನ್​ ತೊರೆಯಬೇಡಿ ಎಂದು ತಾಲಿಬಾನ್ ವಕ್ತಾರರು ಅಫ್ಘಾನಿಸ್ತಾನ್​ ಜನತೆಯಲ್ಲಿ ಮನವಿ ಮಾಡಿದ್ದಾರೆ.

blank

ಇನ್ನು ತಾಲಿಬಾನಿಗಳು ಕಾಬೂಲ್​ನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆಯೇ ಇತ್ತ ಅಮೆರಿಕಾ ರಾಯಭಾರಿ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಯನ್ನು ಸೇನೆಯ ಹೆಲಿಕಾಪ್ಟರ್ ಮೂಲಕ ಅಮೆರಿಕಾ ಸರ್ಕಾರ ವಾಪಸ್ ಕರೆಸಿಕೊಂಡಿದೆ.

Source: newsfirstlive.com Source link