ಮಗ ಉಗ್ರ.. ತಂದೆ ದೇಶಭಕ್ತ; ಪುಲ್ವಾಮಾದಲ್ಲಿ ಮೃತ ಉಗ್ರನ ತಂದೆಯಿಂದ ಧ್ವಜಾರೋಹಣ

ಮಗ ಉಗ್ರ.. ತಂದೆ ದೇಶಭಕ್ತ; ಪುಲ್ವಾಮಾದಲ್ಲಿ ಮೃತ ಉಗ್ರನ ತಂದೆಯಿಂದ ಧ್ವಜಾರೋಹಣ

ಪುಲ್ವಾಮ: ಭಾರತೀಯ ಸೇನೆ ನಡೆಸಿದ್ದ ಕಾರ್ಯಾಚರಣೆಯಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದ ಹಿಜ್ಬುಲ್​ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್​ ಬುರ್ಹಾನ್​​ ವಾನಿಯ ತಂದೆ ಮುಜಾಫರ್​ ವಾನಿ ಈಗ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಮುಜಾಫರ್ ವಾನಿ 75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಪುಲ್ವಾಮಾದ ಸರ್ಕಾರಿ ಶಾಲೆಯೊಂದರಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ.

ಇದನ್ನೂ ಓದಿ: ನಿರಂಜನಾನಂದ ಪುರಿ ಸ್ವಾಮೀಜಿ ಮುಂದಿನ ದಿನ ಸಂಗೊಳ್ಳಿ ರಾಯಣ್ಣ ಆಗ್ತಾರೆ -ಸಿಎಂ ಬೊಮ್ಮಾಯಿ

ಪುಲ್ವಾಮಾದಲ್ಲಿ ಮುಜಾಫರ್ ವಾನಿ ತ್ರಿವರ್ಣ ಧ್ವಜ ಹಾರಿಸಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿವೆ. ಮೃತ ಉಗ್ರನ ತಂದೆ ಧ್ವಜಾರೋಹಣ ಮಾಡಿರುವ ಸುದ್ದಿ ಸೋಷಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ: ಸ್ವಾತಂತ್ರ್ಯ ಸಂಭ್ರಮಕ್ಕೆ ಅಮೃತ ಘಳಿಗೆ -ಪ್ರಧಾನಿ ಮೋದಿಯಿಂದ ಧ್ವಜಾರೋಹಣ

ಮುಜಾಫರ್​ ವಾನಿ ಮಗ ಬುರ್ಹಾನ್​ ವಾನಿ ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ. ಸದಾ ಕಾಶ್ಮೀರಿ ಯುವಕರನ್ನು ಉಗ್ರಸಂಘಟನೆಗೆ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದ ಈತನನ್ನು 2016ರಲ್ಲಿ ಹತ್ಯೆ ಮಾಡಲಾಗಿತ್ತು. ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಇಂತಹ ದೊಡ್ಡ ಉಗ್ರನ ತಂದೆ ಈಗ ರಾಷ್ಟ್ರಧ್ವಜ ಹಾರಿಸಿದ್ದು ಭಾರೀ ಪ್ರಶಂಸೆಗೆ ಕಾರಣವಾಗಿದೆ.

Source: newsfirstlive.com Source link