ಯುವಕನನ್ನು ಮದುವೆಯಾಗಲು ಆಂಟಿ ಪ್ಲ್ಯಾನ್- ಪೊಲೀಸ್ ಮೊರೆ ಹೋದ ಯುವಕ

ಡೆಹ್ರಾಡೂನ್: ಮಹಿಳೆಯೊಬ್ಬಳು ಯುವಕನನ್ನು ಮದುವೆಯಾಗಲು ತನ್ನ ದಾಖಲೆಗಳನ್ನು ಫೋರ್ಜರಿ ಮಾಡಿ ಇದೀಗ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.

ಮೂಲತಃ ಉತ್ತರ ಪ್ರದೇಶದವರಾದ ಮಹಿಳೆ ಮತ್ತೊಂದು ಮದುವೆಯಾಗಲು ಬಯಸಿದ್ದರು. ಇದಕ್ಕಾಗಿ ಸುರಸುಂದರಾಂಗ ಯುವಕನ ಹುಡುಕಾಟದಲ್ಲಿದ್ದಳು. ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಯುವಕನೊಬ್ಬ ಪರಿಚಿತನಾಗುತ್ತಾನೆ. ಆತನೇ ನನಗೆ ಸರಿಯಾದ ಜೋಡಿ ಎಂದು ಆಕೆ ನಿರ್ಧರಿಸಿದ್ದಳು. ಅದರಂತೆ ಯುವಕನಿಗೆ ಮದುವೆ ಪ್ರಸ್ತಾಪ ಮುಂದಿಟ್ಟಿದ್ದಾಳೆ. ಆಗ ಯುವಕ ಮದುವೆಗೆ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ:  ಟಾಲೆಸ್ಟ್ ಲೀಡರ್‌ಗಳ ಬಗ್ಗೆ ಹೇಳಿಕೆ ನೀಡುವುದನ್ನು ಎಲ್ಲರೂ ನಿಲ್ಲಿಸಿ: ಶ್ರೀರಾಮುಲು

28 ವರ್ಷದ ಯುವಕ ಮದುವೆಯಾಗಲು ವಧುವಿಗಾಗಿ ಹುಡುಕಾಟ ನಡೆಸುತ್ತಿದ್ದನು. ಅದೇ ಸಮಯದಲ್ಲಿ ಈಕೆಯ ಪರಿಚಯವಾಗಿದೆ. ತನ್ನ ಪ್ರೋಫೈಲ್‍ನಲ್ಲಿ ಮಹಿಳೆ ತಾನು ಯುವತಿ ಎಂದು ಪರಿಚಯಿಸಿಕೊಂಡಿದ್ದಳು. ಅಲ್ಲದೆ ತನಗೆ ಇನ್ನು ಕೇವಲ 28 ವರ್ಷ ಎಂದು ತಿಳಿಸಿದ್ದಳು. ಇದೇ ಕಾರಣದಿಂದ ಆತ ಕೂಡ ತನಗೆ ಸರಿಯಾದ ಜೋಡಿ ಎಂದು ಒಪ್ಪಿಕೊಂಡಿದ್ದ. ಆದರೆ ಮದುವೆ 20 ದಿನವಿರುವಾಗ ಆಕೆಯ ಅಸಲಿಯತ್ತು ಬಹಿರಂಗವಾಗಿದೆ. ಆಕೆಗೆ 28 ಅಲ್ಲ 38 ವರ್ಷ ಎಂಬುದು ತಿಳಿದು ಬಂದಿದೆ. ಯುವಕನನ್ನು ಮದುವೆಯಾಗಲು ಆಂಟಿ ತನ್ನ ದಾಖಲಾತಿಗಳನ್ನು ಫೋರ್ಜರಿ ಮಾಡಿದ್ದಾರೆ. 1983ರಲ್ಲಿ ಹುಟ್ಟಿದ ದಿನಾಂಕವನ್ನು 1991 ಬದಲಿಸಿಕೊಂಡಿರುವುದು ಗೊತ್ತಾಗಿದೆ. ಆಗ ಯುವಕ ಮದುವೆಗೆ ನೀರಾಕರಿಸಿದ್ದಾನೆ.

blank

ಆಗ ಯುವತಿಯ ಕುಟುಂಬಸ್ಥರಿಂದ ಯುವಕನಿಗೆ ಕೊಲೆ ಬೇದರಿಕೆಯ ಕರೆ ಬಂದಿದೆ. ಇದರಿಂದ ಮತ್ತಷ್ಟು ಹೆದರಿದ ಕುಟುಂಬಸ್ಥರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಕುರಿತಾಗಿ ತನಿಖೆ ಮಾಡುತ್ತಿದ್ದಾರೆ.

Source: publictv.in Source link