ಸ್ವಾತಂತ್ರ್ಯ ದಿನದಂದು ನನ್ನನ್ನು ಸ್ವತಂತ್ರವಾಗಿರಲು ಬಿಡಿ- ಸಚಿವ ಆನಂದ್ ಸಿಂಗ್​ ಹೀಗಂದಿದ್ದೇಕೆ..?

ಸ್ವಾತಂತ್ರ್ಯ ದಿನದಂದು ನನ್ನನ್ನು ಸ್ವತಂತ್ರವಾಗಿರಲು ಬಿಡಿ- ಸಚಿವ ಆನಂದ್ ಸಿಂಗ್​ ಹೀಗಂದಿದ್ದೇಕೆ..?

ಬಳ್ಳಾರಿ: ಸಚಿವ ಆನಂದ ಸಿಂಗ್​ ಇಂದು ನೂತನ ಜಿಲ್ಲೆಯಲ್ಲಿ ಪ್ರಪ್ರಥಮ ಧ್ವಜಾರೋಹಣವನ್ನು ನೆರವೇರಿಸಿದರು. ವಿಜಯನಗರ ಜಿಲ್ಲೆಯಾಗಿ ಘೋಷಣೆ ಬಳಿಕ ಪ್ರಥಮ ವರ್ಷದ ಧ್ವಜಾರೋಹಣವನ್ನು ನಗರದ ಮುನ್ಸಿಪಲ್ ಮೈದಾನದಲ್ಲಿ ಸಚಿವ ಆನಂದ ಸಿಂಗ್ ನೇರವೇರಿಸಿದರು.

ಧ್ವಜಾರೋಹಣ ಬಳಿಕ ರಾಜಕೀಯ ವಿಚಾರ ಕುರಿತು ಮಾತಿಗಿಳಿದ ಅವರು ಅಭಿವೃದ್ಧಿ ಎಂಬುದು ಯಾರಿಂದಲೂ ಕುಂಠಿತವಾಗೋದಿಲ್ಲ, ಯಾವ ಸಮಯದಲ್ಲಿ ಏನ್​ ಆಗ್ಬೇಕೋ ಅದು ಆಗುತ್ತೆ. ಎಲ್ಲರೂ ಅವರವರ ರಾಶಿ ನಕ್ಷತ್ರ ನೋಡಿ ಸಚಿವ ಸ್ಥಾನ ಅಲಂಕರಿಸಿದ್ದಾರೆ ಅದೇ ರೀತಿ ನಾನು ಒಂದೊಳ್ಳೆ ಮುಹೂರ್ತ ನೋಡಿ ಅಧಿಕಾರ ವಹಿಸಿಕೊಳ್ಳುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ನೂತನ ಜಿಲ್ಲೆ ವಿಜಯನಗರದಲ್ಲಿ 150 ಅಡಿ ಎತ್ತರಕೆ ಹಾರಿದ ತಿರಂಗಾ

ನಾನಿನ್ನೂ ಬೆಂಗಳೂರಿಗೆ ಹೋಗಿಲ್ಲ, ಹೋದ ಮೇಲೆ ಮುಂದಿನ ಮಾತು.. ನಾನು ಇನ್​ ಚಾರ್ಜ್ ತೆಗೆದುಕೊಳ್ಳದೇ ಇದ್ರೆ ಏನೂ ಅಗೋದಿಲ್ಲ.. ಸಮರ್ಥ ಅಧಿಕಾರಿಗಳು ಇದ್ದಾರೆ. ನಾನು ಅಧಿಕಾರ ತೆಗೆದುಕೊಳ್ಳದೇ ಇದ್ರೂ ಕೆಲಸ ಕಾರ್ಯ ನಡೆಯುತ್ತದೆ ಎಂದರು.
ನಾಳೆ ಮತ್ತೆ ಮಾತಾಡ್ತೇನೆ ಸದ್ಯ ಇವತ್ತು ಸ್ವಾತಂತ್ರ್ಯೋತ್ಸವ, ನನ್ನನ್ನು ಸ್ವತಂತ್ರವಾಗಿರಲು ಬಿಡಿ ಎನ್ನುವ ಮೂಲಕ ಮುಂದಿನ ರಾಜಕೀಯ ನಡೆಯ ಕುರಿತು ಏನನ್ನೂ ಸ್ಪಷ್ಟವಾಗಿ ಹೇಳದೇ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದಾರೆ..

Source: newsfirstlive.com Source link