IPL 2 ನೇ ಹಂತದಲ್ಲಿ ಆಡಲು ಆಸ್ಟ್ರೇಲಿಯಾ ಆಟಗಾರರಿಗೆ ಗ್ರೀನ್ ಸಿಗ್ನಲ್

IPL 2 ನೇ ಹಂತದಲ್ಲಿ ಆಡಲು ಆಸ್ಟ್ರೇಲಿಯಾ ಆಟಗಾರರಿಗೆ ಗ್ರೀನ್ ಸಿಗ್ನಲ್

ಇಂಡಿಯನ್​​​ ಪ್ರೀಮಿಯರ್​ ಲೀಗ್​ನ 2ನೇ ಹಂತದಲ್ಲಿ ಆಡಲು ಆಸ್ಟ್ರೇಲಿಯಾ ಆಟಗಾರರಿಗೆ ಕ್ರಿಕೆಟ್​ ಆಸ್ಟ್ರೇಲಿಯಾ ಗ್ರೀನ್​ ಸಿಗ್ನಲ್​ ನೀಡಿದೆ.

ಇದನ್ನೂ ಓದಿ: ಲಾರ್ಡ್ಸ್​​ ಅಂಗಳಕ್ಕೆ ನುಗ್ಗಿದ ಟೀಮ್ ಇಂಡಿಯಾದ 12ನೇ ಆಟಗಾರ!

ಮುಂದಿನ ತಿಂಗಳು ಆರಂಭವಾಗಲಿರುವ ಐಪಿಎಲ್​ ಪಂದ್ಯಗಳನ್ನಾಡಲು ಆಟಗಾರರಿಗೆ, ಆಸಿಸ್​​ ಮಂಡಳಿ ನೋ ಆಬ್ಜೆಕ್ಷನ್​ ಸರ್ಟಿಪಿಕೇಟ್​ ನೀಡಿದೆ. ಹೀಗಾಗಿ ಇದೇ ಸಮಯದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದ ಅಫ್ಘಾನಿಸ್ತಾನ, ವೆಸ್ಟ್​ಇಂಡೀಸ್​​ ಜೊತೆಗಿನ ಟ್ರೈ ಸಿರೀಸ್​ ಅನ್ನ ಮುಂದೂಡಿಕೆ ಮಾಡಲು ತಿರ್ಮಾನಿಸಲಾಗಿದೆ.

ಇದನ್ನೂ ಓದಿ: ಲಾರ್ಡ್ಸ್​ ಬಾಲ್ಕನಿಯಲ್ಲಿ ಕ್ಯಾಪ್ಟನ್​​​​ ವಿರಾಟ್​ ಕೊಹ್ಲಿ ‘ನಾಗಿನ್​’ ಡ್ಯಾನ್ಸ್

ಇದರೊಂದಿಗೆ ಆಸಿಸ್​​ ಆಟಗಾರರು ಐಪಿಎಲ್​ನಲ್ಲಿ ಪಾಲ್ಗೊಳ್ಳುತ್ತಾರಾ..? ಇಲ್ವಾ..? ಎಂಬ ಪ್ರಶ್ನೆಗೂ ಬ್ರೇಕ್​ ಬಿದ್ದಿದೆ. ಸೆಪ್ಟೆಂಬರ್​ 19ರಿಂದ 14ನೇ ಆವೃತ್ತಿಯ ಐಪಿಎಲ್​ನ ಉಳಿದ 36 ಪಂದ್ಯಗಳು ಆರಂಭವಾಗಲಿದ್ದು, 27 ದಿನಗಳ ಕಾಲ ಟೂರ್ನಿ ನಡೆಯಲಿದೆ. ಐಪಿಎಲ್​ ಅಂತ್ಯವಾದ ಬೆನ್ನಲ್ಲೇ ಐಸಿಸಿ ಟಿ20 ವಿಶ್ವಕಪ್​ ಟೂರ್ನಿ ಯುಎಇನಲ್ಲೇ ಆರಂಭವಾಗಲಿದೆ.

Source: newsfirstlive.com Source link