ಕೈ ನಾಯಕರ ಎಡವಟ್ಟು; 75 ನೇ ಗಣರಾಜ್ಯೋತ್ಸವ ಆಚರಿಸ್ತಿದ್ದೀವಿ ಎಂದ ಜಮೀರ್

ಕೈ ನಾಯಕರ ಎಡವಟ್ಟು; 75 ನೇ ಗಣರಾಜ್ಯೋತ್ಸವ ಆಚರಿಸ್ತಿದ್ದೀವಿ ಎಂದ ಜಮೀರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್​ ಭಾಷಣ ಮಾಡುವಾಗ ಹುತಾತ್ಮರಾದ ಇಂದಿರಾಗಾಂಧಿ ಎಂದು ಹೇಳುವ ಬದಲು ಸೋನಿಯಾ ಗಾಂಧಿ ಎಂದು ಹೇಳಿದ್ದರು.

ಇದನ್ನೂ ಓದಿ: ‘ನಮ್ದು ಕಣೋ ಇದು’ ಧ್ವಜಸ್ತಂಭಕ್ಕೆ ಮುತ್ತಿಟ್ಟು ದೇಶಪ್ರೇಮ ಮೆರೆದ ಶಾಸಕ ಜಮೀರ್

ಈ ಬೆನ್ನಲ್ಲೇ ಶಾಸಕ ಜಮೀರ್​ ಅಹ್ಮದ್​ ಕೂಡ ಭಾಷಣ ಮಾಡುವಾಗ ಯಡವಟ್ಟು ಮಾಡಿದ್ದಾರೆ. 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಎಂದು ಹೇಳುವ ಬದಲು 75 ನೇ ಗಣರಾಜ್ಯೋತ್ಸವದ ಶುಭಾಷಯಗಳು ಎಂದು ಜಮೀರ್​ ಅಹ್ಮದ್​ ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ‘ಹುತಾತ್ಮರಾದ ಸೋನಿಯಾ ಗಾಂಧಿ.. ಸಾರಿ ಇಂದಿರಾ ಗಾಂಧಿ’ -ಭಾಷಣದ ವೇಳೆ ಡಿಕೆಎಸ್​ ಎಡವಟ್ಟು

ದೇಶದಾದ್ಯಂತ ಇಂದು 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ದೇಶದ ಗಣ್ಯರು ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ವೇಳೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ತಮ್ಮ ಪ್ರಾಣವನ್ನೇ ಕಳೆದುಕೊಂಡ ಸ್ವಾತಂತ್ರ್ಯ ಹೋರಾಟಗಾರರನ್ನೂ ಸ್ಮರಿಸಲಾಗಿದೆ.

Source: newsfirstlive.com Source link